Advertisement

ಸಂಪರ್ಕ ರಸ್ತೆಗಳ ಅಭಿವೃದ್ದಿಗೆ ಆದ್ಯತೆ, ಸಿಗ್ನಲ್ ಲೈಟ್ ಅಳವಡಿಕೆಗೆ ಕ್ರಮ : ಮಂಜುನಾಥ್

07:52 PM Jan 30, 2022 | Team Udayavani |

ಹುಣಸೂರು : ರಾಷ್ಟ್ರೀಯ ಹೆದ್ದಾರಿಯ ಹುಣಸೂರು ಬೈಪಾಸ್‌ನ ದೇವರಾಜ ಅರಸು ಪುತ್ಥಳಿಯಿಂದ ಕಲ್ಕುಣಿಕೆ ವೃತ್ತದವರೆಗೆ ಸುಗಮ ಸಂಚಾರಕ್ಕೆ ಅವಕಾಶವಾಗುವಂತೆ ಅಭಿವೃದ್ದಿಕೈಗೊಳ್ಳಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ರಮೇಂದ್ರರಿಗೆ ಸೂಚಿಸಿದರು.

Advertisement

ಭಾನುವಾರ 22 ಕೋಟಿರೂ ವೆಚ್ಚದ ತಾಲೂಕಿನ ಚಿಕ್ಕಾಡಿಗನಹಳ್ಳಿಯಿಂದ ನಗರಕ್ಕೆ ಸಮೀಪದ ಹಾಳಗೆರೆವರೆಗಿನ ಹೆದ್ದಾರಿ ಡಾಂಬರೀಕರಣ ಕಾಮಗಾರಿ ಪ್ರಗತಿಯನ್ನು ಮುಖ್ಯ ಇಂಜಿನಿಯರ್‌ರೊಂದಿಗೆ ಪರಿಶೀಲಿಸಿ ದೇವರಾಜ ಅರಸರ ಪುತ್ಥಳಿ ಬಳಿಯ ಜಂಕ್ಷನ್‌ನಲ್ಲಿ ರಸ್ತೆಯನ್ನು ಎಪಿಎಂಸಿ ಬಳಿಯಿಂದ ಅಗಲೀಕರಣಗೊಳಿಸುವ ಜೊತೆಗೆ ಡಿವೈಡರ್ ಅಳವಡಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಅಲ್ಲದೆ ಹೆದಾರಿಯ ಎಲ್ಲ ಸಂಪರ್ಕ ರಸ್ತೆಗಳನ್ನು ಅಭಿವೃದ್ದಿಗೊಳಿಸುವಂತೆ ಸಲಹೆ ನೀಡಿದರು.

ಹೆದ್ದಾರಿಯಿಂದ ಡಿ.ಡಿ.ಅರಸು ಸರಕಾರಿ ಪದವಿ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ದಿಗೊಳಿಸುವುದು. ರಸ್ತೆ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಪಕ್ಕದಲ್ಲೇ ದೊಡ್ಡ ಹೊಂಡಗಳಾಗುತ್ತಿದ್ದು, ಸಾಕಷ್ಟು ಅವಘಡಗಳಿಗೆ ಕಾರಣವಾಗಿದೆ ಎಂಬ ಶಾಸಕರ ಮಾಹಿತಿಗೆ ಹೆದ್ದಾರಿಯ ಅರಸು ಪುತ್ಥಳಿಯಿಂದ ಕೋರ್ಟ್ವರೆಗೆ ಒಂದು ಬದಿಯಲ್ಲಿ ಚರಂಡಿ ನಿರ್ಮಿಸಿ ನೀರನ್ನು ದೊಡ್ಡಮೋರಿಗೆ ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗುವುದು ಹಾಗೂ ಕಲ್ಕುಣಿಕೆ ವೃತ್ತದವರೆಗಿನ ಸಂಪರ್ಕ ರಸ್ತೆಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ ಎಂದು ಮುಖ್ಯ ಇಂಜಿನಿಯರ್ ರಮೇಂದ್ರ ಭರವಸೆ ಇತ್ತರು.

ಎರಡು ವೃತ್ತಗಳಿಗೆ ಸಿಗ್ನಲ್ ಲೈಟ್ ಅಳವಡಿಕೆ:
ನಗರದಲ್ಲಿ ಪ್ರಥಮ ಬಾರಿಗೆ ಬೈಪಾಸ್‌ನ ಕೋರ್ಟ್ ಸರ್ಕಲ್ ಹಾಗೂ ಕಲ್ಕುಣಿಕೆ ವೃತ್ತಕ್ಕೆ ನಗರಸಭೆವತಿಯಿಂದ ಸಿಗ್ನಲ್ ಲೈಟ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದರಿಂದ ಹೆದ್ದಾರಿಯಲ್ಲಿ ಹೆಚ್ಚು ವಾಹನ ಸಂಚಾರವಿರುವುದರಿಂದ ಅವಘಡ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.

ಈ ವೇಳೆ ತಹಸೀಲ್ದಾರ್ ಡಾ.ಅಶೋಕ್, ಪೌರಾಯುಕ್ತ ರಮೇಶ್, ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಯೋಗಾನಂದ್, ಎಇಇ ಪುಟ್ಟರಾಜು, ಸಹಾಯಕ ಇಂಜಿನಿಯರ್ ಹೇಮಲತಾ, ಪ್ರಥಮ ದರ್ಜೆ ಗುತ್ತಿಗೆದಾರರಾದ ರೇವಣ್ಣ,ಗೋವಿಂದೇಗೌಡ, ಅಶೋಕ್, ಬಾಪುಜಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next