Advertisement

ಮಾಸ್ಕ್ ಡೇ: ಕೋವಿಡ್ ತಡೆಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ

08:57 PM Jun 18, 2020 | Hari Prasad |

ಹುಣಸೂರು: ನಗರದಲ್ಲಿ ಮಾಸ್ಕ್ ದಿನಾಚರಣೆ ಅಂಗವಾಗಿ ನಗರಸಭೆಯಿಂದ ಹೊರಟ ಜಾಥಾಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.

Advertisement

ಆ ಬಳಿಕ ಮಾತನಾಡಿದ ಅವರು ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರ ಪಾತ್ರ ಬಹಳ ಮುಖ್ಯ ಇದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಕೂಡ ಸರ್ಕಾರದ ಆದೇಶವನ್ನು ಪಾಲಿಸಿ ಕೋವಿಡ್ ವೈರಸ್ ನಿಂದ ದೂರವಿರಿ ಎಂದು ಹೇಳಿದರು.

ಕೋವಿಡ್-19 ದಿಂದ‌ ದೂರವಿರಲು ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರಸಭೆಯಿಂದ ಕಲ್ಪತರು ಸರ್ಕಲ್ ವರೆಗೂ ಜಾಥಾ ನಡೆಸಲಾಯಿತು. ಬಳಿಕ ಕಲ್ಪತರು ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ, ನಗರ ಸಭೆ ಪೌರಾಯುಕ್ತ ಮಂಜುನಾಥ್ ನಗರಸಭೆ ಸದಸ್ಯ ಸ್ವಾಮಿಗೌಡ.  ಅನುಷಾ ರಘು. ಭವ್ಯ ಶೇಖರ್ ದೇವರಾಜ್, ಗೀತಾ ನಿಂಗರಾಜ್ ದೇವನಾಯ್ಕ್, ಜಾಕಿರ್. ಮಲ್ಲಿಕ್ ಪಾಷಾ, ಮನು, ರಮೇಶ್ ವೆನ್ನಿ, ಶ್ವೇತಾ ಮಂಜುನಾಥ್, ಕೋಳಿ ಮಂಜು, ಹರೀಶ್ ಹಾಗೂ ನಗರಸಭೆ ಸಿಬ್ಬಂದಿಗಳಾದ ಸತೀಶ್ ಮಹದೇವ್ ಮೋಹನ್ ಸೇರಿದಂತೆ  ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next