Advertisement
ಶನಿವಾರದಂದು ಕೆಲ ರೈತರು ಖರೀದಿದಾರರು ಮತ್ತೆ ಕಡಿಮೆ ದರಕ್ಕೆ ತಂಬಾಕನ್ನು ಬಿಡ್ ಮಾಡುತ್ತಿದ್ದಾರೆಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿದರು.
ಖರೀದಿದಾದರು ಕೂಡಾ ಶುಕ್ರವಾರ 242ಕ್ಕೆ ಖರೀದಿಸಿದ್ದರು, ಶನಿವಾರವೂ ಬೆಲೆ ಏರಿಕೆ ಕಂಡಿರಲಿಲ್ಲ. ಹೀಗಾಗಿ ಶಾಸಕರಲ್ಲಿ ಮನವಿ ಮಾಡಿದ್ದ ಮೇರೆಗೆ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ವಿಷಯ ತಿಳಿಯುತ್ತಿದ್ದಂತೆ 251 ರೂಗೆ ಖರೀದಿಸಿದರು, ಇದರಿಂದ ಒಂಬತ್ತು ರೂ. ನಷ್ಟು ಏರಿಕೆಯಾದಂತಾಯಿತು. ಹರಾಜು ಅಧೀಕ್ಷಕರುಗಳು ಹಾಗೂ, ಮಾರುಕಟ್ಟೆಯಲ್ಲಿದ್ದ ರೈತರು ಕಂಪನಿಗಳವರೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಶಾಸಕರು ಪದೇಪದೇ ದರ ಕುಸಿತ ಕಂಡಲ್ಲಿ ರೈತರು ಸಂಕಷ್ಟಕ್ಕೊಳಗಾಗಲಿದ್ದಾರೆ. ಅಧಿಕಾರಿಗಳಿಗೆ ಹಲವಾರು ಬಾರಿ ಎಚ್ಚರಿಸಿದರೂ ರೈತರ ನೆರವಿಗೆ ಬರುತ್ತಿಲ್ಲ. ನಿಮ್ಮ ಹರಾಜು ಅಧೀಕ್ಷಕಿ ನಾಯ್ಡು ಈವರೆಗೂ ಮಾರುಕಟ್ಟೆಗೆ ಬಂದೇ ಇಲ್ಲ, ಬಾರೀ ಮಳೆಯಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.
Related Articles
Advertisement
ರೈತರು ಸಹ ತಮ್ಮ ಮಾತಿಗೆ ಮನ್ನಣೆ ನೀಡಿ ಮಾರುಕಟ್ಟೆಗಾಗಮಿಸಿ ಸಮಸ್ಯೆ ಆಲಿಸಿ ಉತ್ತಮ ಬೆಲೆ ಕೊಡಿಸಿದ್ದಕ್ಕಾಗಿ ಶಾಸಕರಿಗೆ ಧನ್ಯವಾದ ತಿಳಿಸಿದರು.
ಈ ವೇಳೆ ಹರಾಜು ಅಧೀಕ್ಷಕರಾದ ಡಾಂಗೆ, ಧನರಾಜ್ ಹಾಗೂ ತಂಬಾಕು ಗುತ್ತಿಗೆದಾರರಾದ ಶೃಂಗಾರ್, ಸೋಮು, ಮಹೇಶ್, ಮಹದೇವ್, ರೈತ ಮುಖಂಡರಾದ ಅಶೋಕ್, ಮಹದೇವ್ ವೆಂಕಟರಮಣ, ಬಸವರಾಜ್, ಅರುಣ್‌ಕುಮಾರ್, ಸಂಜೀವ, ಮಧು, ಪ್ರೆಮಪ್ರಸಾದ್, ವಿನಯ್ ಮತ್ತಿತರರು ಇದ್ದರು.