Advertisement

ಕ್ಷೇತ್ರದ ಅಭಿವೃದ್ಧಿಗೆ 950 ಕೋಟಿ ರೂ. ವಿನಿಯೋಗ

03:04 PM Apr 21, 2023 | Team Udayavani |

ಮೈಸೂರು: ಕಳೆದ 5 ವರ್ಷಗಳಲ್ಲಿ 950 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ತಂದು, ವಿವಿಧ ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸುವ ಮೂಲಕ ಚಾಮರಾಜ ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಶ್ರಮಿಸಿದ್ದೇನೆ ಎಂದು ಶಾಸಕ ಎಲ್‌. ನಾಗೇಂದ್ರ ಹೇಳಿದರು.

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಚಾಮರಾಜ ಕ್ಷೇತ್ರದ ಶಾಸಕನಾದ ಬಳಿಕ 950 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಇದ್ದ ಕುಡಿ ಯುವ ನೀರಿನ ಸಮಸ್ಯೆ ಹೋಗಲಾಡಿಸುವ ಸಲುವಾಗಿ ಅಮೃತ್‌ ಯೋಜನೆಯಡಿ 333 ಕೋಟಿ ರೂ. ಅನುದಾನ ವಿನಿಯೋಗಿಸಿ ಕಾವೇರಿ ನೀರು ಪೂರೈಕೆ ಹಾಗೂ 06 ಟ್ಯಾಂಕ್‌ ನಿರ್ಮಾಣ ಸೇರಿದಂತೆ ಪೈಪ್‌ಲೈನ್‌ ಕಾಮಗಾರಿ ಮಾಡಲಾಗಿದೆ ಎಂದರು.

50 ಸಾವಿರ ಕಿಟ್‌ ವಿತರಣೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸರ್ಕಾರದಲ್ಲಿ ಶಾಸಕನಾಗಿ ಇರಬೇಕು ಎಂಬ ಕನಸಿತ್ತು. ಅದರಂತೆ 2018ರ ಚುನಾವಣೆಯಲ್ಲಿ ಗೆದ್ದು ಶಾಸಕನಾದೆ. ಆದರೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಿಂದ 1 ವರ್ಷ ಕ್ಷೇತ್ರಕ್ಕೆ ಯಾವುದೇ ಅನು ದಾನ ಬಾರದ ಹಿನ್ನೆಲೆ ಅಭಿವೃದ್ಧಿ ಕುಂಠಿತಗೊಂಡಿತು. ಬಳಿಕ ನಮ್ಮದೇ ಸರ್ಕಾರ ರಚನೆಯಾ ದಾಗ ಕೋವಿಡ್‌ ಸೋಂಕು ಆವರಿಸಿ ಎರಡು ವರ್ಷ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕ್ಷೇತ್ರದ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ 50 ಸಾವಿರ ಕಿಟ್‌ ವಿತರಣೆ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್‌ ಸೌಲಭ್ಯಕ್ಕೆ ಒತ್ತು ನೀಡಲಾಯಿತು ಎಂದು ತಿಳಿಸಿದರು.

ಕಾಮಗಾರಿ ಆರಂಭಿಸಲಾಗಿದೆ: 350 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಅಭಿವೃ ದ್ಧಿಗೊಳಿಸಿರುವುದಲ್ಲದೇ, ಬೀದಿ ದೀಪ ವ್ಯವಸ್ಥೆ, ಒಳಚರಮಡಿ, ಚರಂಡಿ, ಆಸ್ಪತ್ರೆಗಳಿಗೆ ಮೂಲಸೌಕರ್ಯ, ಗ್ರಂಥಾಲಯ ಕಟ್ಟಡಗಳ ನಿರ್ಮಾಣ, ಉದ್ಯಾನಗಳ ಉನ್ನತೀಕರಣ ಶ್ರಮಿಸಿದ್ದೇನೆ. ಜತೆಗೆ ಶತಮನೋತ್ಸವ ಆಚರಿಸಿಕೊಳ್ಳುತ್ತಿರುವ ನಗರದ ಕೆ.ಆರ್‌. ಆಸ್ಪತ್ರೆ ದುಸ್ತಿಯಲ್ಲಿರುವುದನ್ನು ಮನಗಂಡು ಸರ್ಕಾರದಿಂದ ಆಸ್ಪತ್ರೆ ನವೀಕರಣಕ್ಕೆ 90 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಯಿತು. ಜತೆಗೆ ಮೆಡಿಕಲ್‌ ಕಾಲೇಜು ಹಾಸ್ಟೆಲ್‌ ಹಾಗೂ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ 42 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಕಾಮಗಾರಿ ಆರಂಭಿಸಲಾಗಿದೆ ಎಂದು ವಿವರಿಸಿದರು.

ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ನಡೆದಿದ್ದ ಕಳಪೆ ಡಾಂಬರೀಕರಣ ಕಾಮಗಾರಿಯನ್ನು ಪತ್ತೆ ಮಾಡಿದ್ದೇ ನಾನು. ಕಾಮಗಾರಿ ಕಳಪೆಯಾಗಿದೆ ಎಂದು ತಿಳಿಯುತ್ತಿದ್ದಂತೆ ಕೂಡಲೇ ಕೆಲಸವನ್ನು ಸ್ಥಗಿತಗೊಳಿಸುವಂತೆ ಸೂಚಿಸಿ, ಮರು ಡಾಂಬರೀಕರಣ ಮಾಡುವಂತೆ ಕ್ರಮ ಕೈಗೊಂಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ಈ ಅಭಿವೃದ್ಧಿ ಕಾರ್ಯವನ್ನು ಜನರು ಒಪ್ಪಿಕೊಂಡಿದ್ದು, ಈ ಬಾರಿಯೂ ನನ್ನ ಪರ ನಿಲ್ಲಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Advertisement

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಬಿಜೆಪಿ ಜಿಲ್ಲಾ ವಕ್ತಾರ ಡಾ.ಕೆ. ವಸಂತ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next