Advertisement

ಸಚಿವ ಮುನಿರತ್ನ ಕೊಂಬು ಬಂದಂತೆ ಆಡುತ್ತಿದ್ದಾರೆ

04:19 PM Feb 13, 2023 | Team Udayavani |

ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮೊದಲ ಬಾರಿಗೆ ಸಚಿವರಾಗಿದ್ದು ಅವರಿಗೆ ಕೊಂಬುಗಳು ಬಂದಂತೆ ಆಡುತ್ತಿದ್ದಾರೆ ಎಂದು ಶಾಸಕ ಕೆ. ಶ್ರೀನಿವಾಸಗೌಡ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಶಾಸಕರ ಗƒಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಶಾಸಕರಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುವ ಮೂಲಕ ಸಚಿವರಾಗಿ ಬಾ ಯಿಗೆ ಬಂದಂತೆ ಉದ್ದಟನತನದಿಂದ ಮಾತ ನಾಡುವುದನ್ನು ಬಿಡಲಿ ಎಂದು ಕಿವಿ ಮಾತು ಹೇಳಿದರು.

ಪ್ರಶ್ನೆಯೊಂದಕ್ಕೆ ಡಿಸಿಸಿ ಬ್ಯಾಂಕ್‌ ಮುಚ್ಚಿ ಹೋಗುವ ಹಂತದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರಾಗಿ ಕಳೆದ 10 ವರ್ಷಗಳಿಂದ ಸಾಲ ನೀಡುತ್ತಿದ್ದಾರೆ. ಚುನಾವಣೆ ಬಂತು ಎಂದು ನೀಡುತ್ತಿಲ್ಲ, ವೇಮಗಲ್‌ನಲ್ಲಿ ನಡೆಯುತ್ತಿರುವುದು ಮಹಿಳೆಯರ ಮತ್ತು ರೈತರ ಸಹಕಾರಿ ಕಾರ್ಯಕ್ರಮವಾಗಿದೆ. ಜನಪ್ರತಿನಿಧಿಗಳು ಸಂಘಟಿತರಾಗಿ ಮಾಡುತ್ತಿದ್ದೇವೆ ಎಂದರು.

ವಿಧಾನಪರಿಷತ್‌ ಸದಸ್ಯ ಎಂ.ಎಲ್‌. ಅನಿಲ್‌ ಕುಮಾರ್‌ ಮಾತನಾಡಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡರ ಆಡಳಿತ ಮಂಡಳಿಯಿಂದ ರೈತ ಮಹಿಳೆಯರಿಗೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳಿಗೆ ಸ್ಪಂದನೆ ಸಿಕ್ಕಿದೆ ಎಂದ ಅವರು ಕೆಪಿಸಿಸಿ ಅಧ್ಯಕ್ಷರು ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಗೋವಿಂದಗೌಡರ ಹೆಸರನ್ನು ಪ್ರಸ್ತಾಪಿಸಿರುವುದು ತಪ್ಪೆನಿಲ್ಲ ಎಂದು ಪ್ರತಿಪಾದಿಸಿದರು.

ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ 360 ಕೋಟಿ ಸಾಲ ಮನ್ನಾ, ಪ್ರಧಾನಿ ಮನಮೋಹನ್‌ ಸಿಂಗ್‌ ಆಡಳಿತದಲ್ಲಿ ರಾಷ್ಟ್ರದಲ್ಲಿ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಪಕ್ಷಾತೀತವಾಗಿ ಡಿಸಿಸಿ ಬ್ಯಾಂಕ್‌ ಸಾಲ ವಿತರಣೆ ಮಾಡುತ್ತಿದೆ. ಸುಮಾರು ಅವಿಭಜಿತ ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ಸಂಘಗಳನ್ನು ಡಿಸಿಸಿ ಬ್ಯಾಂಕ್‌ ಹೊಂದಿದೆ ಎಂದು ವಿವರಿಸಿದರು.

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 2 ಸಾವಿರ ರೂ ಹಾಗೂ ಪ್ರತಿ ಮನೆಗೆ 200 ಯನೀಟ್‌ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಭರವಸೆ ನೀಡಿರುವ ನಮ್ಮ ಪಕ್ಷ ನುಡಿದಂತೆ ನಡೆವ ಪಕ್ಷವಾಗಿದೆ ಎಂದರು.

ಈ ವೇಳೆ ಕಾಂಗ್ರೆಸ್‌ ಮುಖಂಡ ಶ್ರೀಕೃಷ್ಣ , ಆನಂತಪ್ಪ, ವೈ.ಶಿವಕುಮಾರ್‌, ಚಂಜಿಮಲೆ ರಮೇಶ್‌, ನಗರಸಭೆ ಮಾಜಿ ಸದಸ್ಯ ಚೆನ್ನವೀರಯ್ಯ, ಮೋಹನ್‌ ಬಾಬು ಇತರರು ಹಾಜರಿದ್ದರು.

ಕೋಲಾರ ತಾಲೂಕಿನಲ್ಲಿ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಸಹ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿ ಆಯ್ಕೆಯಾಗಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ. ಕೆ. ಶ್ರೀನಿವಾಸಗೌಡ, ಶಾಸಕ

ವೇಮಗಲ್‌ನಲ್ಲಿ ನಡೆಯಲಿರುವ ರೈತ ಮಹಿಳಾ ಕಾಂಗ್ರೆಸ್‌ ಸಮಾವೇಶಕ್ಕೆ ಆಸೆ ಆಮಿಷಗಳನ್ನು ಒಡ್ಡಿ ಸಮಾವೇಶಕ್ಕೆ ಬರುವಂತೆ ಮಾಡಿಲ್ಲ, ಕೈಲಾಗದವರೂ ಮೈ ಪರಿಚಿ ಕೊಂಡ ರೆಂಬ ಗಾದೆಯಂತೆ ಅವರ ಅರೋಪ ಗಳೆಲ್ಲವೂ ಸತ್ಯಕ್ಕೆ ದೂರವಾದ ಮಾತು. ಎಂ.ಎಲ್‌. ಅನಿಲ್‌ ಕುಮಾರ್‌, ವಿಧಾನಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next