Advertisement

ಮುಂದಿನ ತಿಂಗಳಿನಿಂದ 10 ಕೆ.ಜಿ. ಅಕ್ಕಿ

02:35 PM May 18, 2023 | Team Udayavani |

ಮಧುಗಿರಿ: ನಾಳೆಯೇ ಕಾಂಗ್ರೆಸ್‌ ಸರ್ಕಾರ ರಚನೆ ಮಾಡಲಿದ್ದು ಮುಂದಿನ ತಿಂಗಳಿನಿಂದ ತಲಾ 10 ಕೆ.ಜಿ. ಅಕ್ಕಿ ವಿತರಣೆ ನಡೆಯಲಿದೆ ಎಂದು ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಸಭೆಯ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಕೆಲವು ಖಡಕ್‌ ಎಚ್ಚರಿಕೆಗಳನ್ನು ನೀಡಿದರು.

ತಾಲೂಕಿಗೆ ಸದ್ಯ 16 ಸಾವಿರ ಟನ್‌ ಆಹಾರ ಬರುತ್ತಿದ್ದು, ಮುಂದಿನ ತಿಂಗಳಲ್ಲಿ 36 ಸಾವಿರ ಟನ್‌ಗೆ ಏರಿಕೆಯಾಗಲಿದೆ. ಆಹಾರ ಇಲಾಖೆಯಡಿ ಕೆಲಸ ಮಾಡುವ ನ್ಯಾಯ ಬೆಲೆ ಅಂಗಡಿಗಳಲ್ಲಿ ಕೆಲವರು ಅವ್ಯವಹಾರ ನಡೆಸಿ ಅಮಾನತ್ತಾಗಿದ್ದರೆ ಅಂತಹ ಅಂಗಡಿಗಳನ್ನು ವಿಎಸ್‌ಎಸ್‌ಎನ್‌ ಸೊಸೈಟಿಗಳ ಸುಪರ್ದಿಗೆ ವಹಿಸುವಂತೆ ಸೂಚಿಸಿದರು.

ಕ್ಷೇತ್ರದಲ್ಲಿ ಮನೆ ನಿರ್ಮಾಣಕ್ಕೆ ಬಳಸುವ ಮರಳಿಗೆ ಯಾವುದೇ ಸಮಸ್ಯೆಯಾಗಬಾರದು. ಆದರೆ, ಹರಿಹರೇಶ್ವರ ಸ್ವಾಮಿ ದೇಗುಲದ ಸುತ್ತ ಯಾವುದೇ ಮರಳು ಎತ್ತಬಾರದು. ಹಾಗೂ ಹರಿಹರೇಶ್ವರ ಸ್ವಾಮಿ ದೇಗುಲದ ಹಣಕಾಸಿನ ವ್ಯವಹಾರದ ಬಗ್ಗೆ ನನಗೆ ವರದಿ ನೀಡಿ ಎಂದು ಮುಜರಾಯಿ ಇಲಾಖೆಗೆ ಸೂಚಿಸಿದ ಶಾಸಕರು, ಅರಣ್ಯದಲ್ಲಿ ಸುಟ್ಟ ಕಲ್ಲಿನಿಂದ ಬಂಡೆ ಒಡೆಯುವವರ ಮೇಲೆ ಯಾವುದೇ ಕ್ರಮಕೈಗೊಳ್ಳಬಾರದು. ತಾಲೂಕಿನಲ್ಲಿ ಎಲ್ಲಿ ನಾಡ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲವೋ ಅದರ ಬಗ್ಗೆ ಮಾಹಿತಿ ಕೊಡಿ ಶೀಘ್ರ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಕೊಡಿಸುತ್ತೇನೆ. ಕಂದಾಯ ಇಲಾಖೆ ಯಿಂದ ಕಳೆದ ಬಾರಿ ನೀಡಿರುವ ಬಗರ್‌ ಹುಕುಂ ಸಾಗುವಳಿ ರೈತರ ಭೂಮಿಯನ್ನು ಖಾತೆ ಮಾಡುವ ಹಾಗೂ ದುರಸ್ಥಿ ಮಾಡುವ ಕೆಲಸಕ್ಕೆ ಮುಂದಾಗಿ. ಮಾಸಾಶನ ಹಾಗೂ ಜಾತಿ ಮತ್ತು ಆದಾಯ ವರ ಮಾನ ಧೃಡೀಕರಣ ಪತ್ರವನ್ನು ಶಾಲೆಗಳಲ್ಲಿ ನೀಡುವ ಹಾಗೂ ಪ್ರತಿ ಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡುವಂತೆ ಸೂಚಿಸಿದರು.

ತಹಶೀಲ್ದಾರ್‌ ಸಿಗ್ಬತ್‌ವುಲ್ಲಾ, ಡಿವೈಎಸ್ಪಿ ವೆಂಕಟೇಶ್‌ ನಾಯ್ಡು ಹಾಗೂ ಇತರೆ ಅಧಿಕಾರಿ ವರ್ಗ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next