ಪಿರಿಯಾಪಟ್ಟಣ: ನಮ್ಮ ಪಕ್ಷದ ಸರ್ಕಾರ ಇಲ್ಲಾ ಕೈಕಟ್ಟಿ ಕುಳಿತಿದ್ದರೆ ಇಂದು ತಾಲ್ಲೂಕಿನ ಯಾವ ಗ್ರಾಮಗಳು ಅಭಿವೃದ್ದಿಯತ್ತ ಸಾಗುತ್ತಿರಲಿಲ್ಲ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ತಾಲೂಕಿನ ಗಂಗೂರು, ಹಂಡಿತವಳ್ಳಿ, ಎನ್.ಶೆಟ್ಟಹಳ್ಳಿ, ನೀಲಂಗಾಲ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ದೊರೆಕೆರೆ ಕಾವಲಿನ ಪರಿಶಿಷ್ಟ ಕಾಲೋನಿಯ ಗ್ರಾಮ ಪರಿಮಿತಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಹಿಂದಿನವರ ರೀತಿಯಲ್ಲಿ ನಮ್ಮ ಪಕ್ಷದ ಸರ್ಕಾರ ಇಲ್ಲಾ ಎಂದು ಕುಂಟುನೆಪ ಹೇಳಿ ನಗರ ಪ್ರದೇಶದಲ್ಲಿ ವಿಲಾಸಿ ಜೀವನ ಸಾಗಿಸುತ್ತಿಲ್ಲ, ಬಡತನದಲ್ಲಿ ನೊಂದು ಬೆಂದವರು ನಾವು, ಹಾಗಾಗಿ ಗ್ರಾಮೀಣ ಜನರ ಕಷ್ಟಕಾರ್ಪಣ್ಯಗಳ ಬಗ್ಗೆ ಅರಿವಿದೆ ಆದ್ದರಿಂದ ನಮ್ಮ ಪಕ್ಷ ಅಧಿಕಾರದಲ್ಲಿದಲ್ಲಿ ಇಲ್ಲದಿಂದ್ದರೂ ಸರ್ಕಾದರ ಮಂತ್ರಿ ಹಾಗೂ ಅಧಿಕಾರಿಗಳ ಕೈಕಾಲು ಕೈ ಹಿಡಿದು ಅನುದಾನ ತಂದು ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆ ಒಂದು ವೇಳೆ 2008 ರಲ್ಲಿಯೇ ಜನತೆ ಆಶೀರ್ವದಿಸಿ ಕಳುಹಿಸಿದ್ದರೆ ಇಂದು ತಾಲ್ಲೂಕಿನ ಯಾವ ಗ್ರಾಮಗಳಲ್ಲಿಯೂ ಸಮಸ್ಯೆಗಳಿಲ್ಲದ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತಿದೆ ಆದರೆ ಜನರೆ ಅಭಿವೃದ್ದಿಗೆ ಒತ್ತು ನೀಡದೆ ವಿಲಾಸಿಗಳಿಗೆ ಮಣೆ ಹಾಕುವ ಮೂಲಕ ತಾಲ್ಲೂಕಿ ಹಿನ್ನೆಡೆಗೆ ಸಹಕರಿಸಿದರು ಎಂದು ಪರೋಕ್ಷವಾಗಿ ಮಾಜಿ ಶಾಸಕ ವೆಂಕಟೇಶ್ ರನ್ನು ಕುಟುಕಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ.ಇಒ ಕೃಷ್ಣಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪ್ರಸಾದ್, ಲೋಕೋಪಯೋಗಿ ಎಇಇಗಳಾದ ಜಯಂತ್, ಎನ್.ಪ್ರಭು, ದಿನೇಶ್, ಬಿಇಒ ತಿಮ್ಮೇಗೌಡ, ಸಿಡಿಪಿಒ ಕುಮಾರ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ಸೋಮಯ್ಯ, ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಎಸ್.ಎ.ಶಿವಣ್ಣ, ದೊರೆಕೆರೆ ನಾಗೇಂದ್ರ ವಿಶ್ವನಾಥ್ ಸೇರಿದಂತೆ ಮತ್ತಿತರು ಹಾಜರಿದ್ದರು.