Advertisement

MLA K. Harish Gowda: ಮೂಲ ಸೌಲಭ್ಯಗಳ ಅಭಿವೃದ್ಧಿಯೇ ನನ್ನ ಗುರಿ

02:37 PM Sep 04, 2023 | Team Udayavani |

ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತರೂ ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಈ ಬಾರಿ 2023ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ವಿಜಯದ ಪತಾಕೆ ಹಾರಿ ಸಿದರು. ಹರೀಶ್‌ ಗೌಡ ಕುಸ್ತಿ ಪಟು. ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ದ್ದವರು. ಪದವಿ ಓದಿ ಮೈಸೂರು ವಿವಿಯಲ್ಲಿ ನೌಕರನಾಗಿ ಸೇರಿದರೂ ರಾಜಕೀಯದ ಸೆಳೆತ ಬಿಡಲಿಲ್ಲ. ತಮಗೆ ಯಾರೂ ಗುರು ಇಲ್ಲ ಎನ್ನುವ ಅವರು ಮಾಜಿ ಪ್ರಧಾನಿ ದೇವೇಗೌಡರು, ಸಿಎಂ ಸಿದ್ದರಾಮಯ್ಯ ಅವರಂತಹ ಹಿರಿಯ ರಾಜಕೀಯ ಮುತ್ಸದ್ಧಿ ನನಗೆ ರಾಜಕೀಯವಾಗಿ ಪ್ರೇರಣೆ ನೀಡಿದವರು ಎನ್ನುತ್ತಾರೆ.

Advertisement

ಚಾಮರಾಜ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಆದ್ಯತೆಗಳೇನು?

ನನ್ನ ಕ್ಷೇತ್ರದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಮತ್ತಷ್ಟು ಮೂಲ ಸೌಕರ್ಯ ಕಲ್ಪಿಸಬೇಕಿದೆ. ಇದಕ್ಕೆ ಆದ್ಯತೆ ನೀಡುತ್ತೇನೆ. ಸರ್ಕಾರಿ ಶಾಲಾ, ಕಾಲೇಜುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶವಿದೆ. ಮೈಸೂರು ಸ್ವತ್ಛತೆಗೆ ಹೆಸರಾದ ನಗರ. ರಾಷ್ಟ್ರದಲ್ಲೇ ಮೈಸೂರು ಸ್ವತ್ಛತೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಸ್ವಚ್ಛ ನಗರಿ ಮೈಸೂರು ಎಂಬ ಬಿರುದನ್ನು ನಾವು ಉಳಿಸಿಕೊಳ್ಳಬೇಕು. ಮೈಸೂರು ನಗರದಲ್ಲಿ ಸ್ವಚ್ಛತೆ ಕಾಪಾಡಲು ನಾವು ಮತ್ತಷ್ಟು ಕ್ರಮ ಕೈಗೊಳ್ಳಬೇಕಿದೆ. ಚಾಮರಾಜ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಬೇಕಿದೆ. ಮಳೆ ನೀರು ಹರಿಯುವ ಮೋರಿಯಲ್ಲಿ ಸ್ವತ್ಛತೆ ಕಾಪಾಡಿಕೊಳ್ಳಬೇಕಿದೆ. ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಹಿರಿಯ ನಾಗರಿಕರಿಗೆ ಉದ್ಯಾನವನ ದಲ್ಲಿ ಸೌಲಭ್ಯ ಕಲ್ಪಿಸಬೇಕಿದೆ. ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಆದ್ಯತೆ ಕೊಟ್ಟಿದ್ದೇನೆ. ಕ್ರೀಡೆಗೆ ನಾವು ಇನ್ನೂ ಉತ್ತೇಜನ ನೀಡಬೇಕಿದೆ. ಕ್ರೀಡಾ ಕಾಂಪ್ಲೆಕ್ಸ್‌ ಅನ್ನು ಮೇಲ್ದರ್ಜೆಗೆ ಏರಿಸಬೇಕಿದೆ.

ಆರೋಗ್ಯ ಕ್ಷೇತ್ರದ ಕಡೆ ನಿಮ್ಮ ಪ್ರಯತ್ನಗಳೇನು?

ಚಾಮರಾಜ ಕ್ಷೇತ್ರದಲ್ಲಿ ಇರುವಷ್ಟು ಸರ್ಕಾರಿ ಆಸ್ಪತ್ರೆಮೈಸೂರು ಜಿಲ್ಲೆಯ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇಲ್ಲ. ಜಯದೇವ ಹೃದ್ರೋಗ ಆಸ್ಪತ್ರೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕೆ.ಆರ್‌.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಗಳು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲೇ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತಷ್ಟು ಉಪಕರಣ ಸ್ಥಾಪಿಸಬೇಕಿದೆ. ಮೈಸೂರು ನಗರ ದಲ್ಲಿ ಯೂರಾಲಜಿ ಹಾಗೂ ಕಿಡ್ನಿ ಆಸ್ಪತ್ರೆ ಆರಂಭಿಸಬೇಕಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತನಾಡಿ ಮನವಿ ಪತ್ರ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Advertisement

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಒದಗಿಸಿರುವಾಗ ಅಭಿವೃದ್ಧಿಗೆ ಹಣ ಎಲ್ಲಿದೆ? ರಾಜ್ಯ ಸರ್ಕಾರದ ಹೆಚ್ಚಿನ ಹಣವು ಗ್ಯಾರಂಟಿ ಯೋಜ ನೆಗಳಿಗೆ ಮೀಸಲಾಗಿದ್ದರೂ ಅಗತ್ಯವಿರುವ ಕಾರ್ಯಗಳಿಗೆ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿರುವ ಸರ್ಕಾರ. ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.

ಚಾಮರಾಜ ಕ್ಷೇತ್ರದಲ್ಲಿ ಗ್ರಾಮೀಣ ಪರಿಸರವಿರುವ ಪ್ರದೇಶ ಅಭಿವೃದ್ಧಿಗೆ ನಿಮ್ಮ ಕ್ರಮ ಏನು? ಚಾಮರಾಜ ಕ್ಷೇತ್ರದಲ್ಲಿ ಗ್ರಾಮೀಣ ಪರಿಸರವಿರುವ ಕನ್ನೇಗೌಡನಕೊಪ್ಪಲು, ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು ಹೀಗೆ ಅನೇಕ ಪ್ರದೇಶಗಳಿವೆ. ಈ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಮತ್ತಷ್ಟು ಕಲ್ಪಿಸಿ ಅಭಿ ವೃದ್ಧಿಗೆ ಕ್ರಮ ಕೈಗೊಂಡಿದ್ದೇನೆ.

ಬೃಹತ್‌ ಮೈಸೂರು ಮಹಾನಗರ ಪಾಲಿಕೆ ರಚನೆ ಬೇಡಿಕೆ ಬಗ್ಗೆ ನೀವು ಶಾಸಕರಾಗಿ ಏನಂತೀರಿ? ಬೃಹತ್‌ ಮೈಸೂರು ಮಹಾನಗರ ಪಾಲಿಕೆ ರಚಿಸಬೇಕೆಂಬ ಇಚ್ಛೆ ನನಗೂ ಇದೆ. ಆದರೆ, ಇದರಿಂದಾಗಿ ಪಾಲಿಕೆ ಚುನಾವಣೆ ಮುಂದಕ್ಕೆ ಹೋಗಬಾರದು. ಬೃಹತ್‌ ಪಾಲಿಕೆ ರಚನೆಯೇ ಬೇರೆ, ಪಾಲಿಕೆಗೆ ನಡೆಸುವ ಚುನಾವಣೆಯೇ ಬೇರೆ. ಲೋಕಸಭಾ ಚುನಾವಣೆಗೆ ಮುನ್ನ ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆ ಯುವ ವಿಶ್ವಾಸವಿದೆ.

ಶಾಸಕರ ಅಭಿವೃದ್ಧಿ ಯೋಜನೆ ಹಲವು:

 ಮೈಸೂರಿನ ಸ್ವಚ್ಛತೆಗೆ ಆದ್ಯತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತಷ್ಟು ಸೌಲಭ್ಯಕಲ್ಪಿಸುವುದು

 ವಸತಿ ರಹಿತರಿಗೆ ಸೂರು ಕಲ್ಪಿಸುವುದು

 ಹಿರಿಯ ನಾಗರಿಕರಿಗೆ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸುವುದು

 ಗ್ರಾಮೀಣ ಪರಿಸರವಿರುವ ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು

 ಚುನಾವಣೆಗೂ ಬೃಹತ್‌ ಪಾಲಿಕೆ ರಚನೆಗೂ ಸಂಬಂಧವೇ ಇಲ್ಲ

 -ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next