Advertisement

ಗಡಿ ಚೆಕ್‌ಪೋಸ್ಟ್‌ಗೆ ಶಾಸಕ ಎಚ್‌.ನಾಗೇಶ್‌  ಭೇಟಿ

03:38 PM May 14, 2021 | Team Udayavani |

ಮುಳಬಾಗಿಲು: ಜನಸಾಮಾನ್ಯರು ನೆಗಡಿ, ಕೆಮ್ಮು, ಜ್ವರ ತೀವ್ರಗೊಂಡಾಗ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಇದು ತಪ್ಪು, ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ತಪಾಸಣೆಗೆ ಒಳಪಟ್ಟರೆ ಕೊರೊನಾ ಸೋಂಕು ಬೇಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡ ಬಹುದು ಎಂದು ಶಾಸಕ ಎಚ್‌.ನಾಗೇಶ್‌ ತಿಳಿಸಿದರು.

Advertisement

ರಾಜ್ಯದ ಗಡಿಭಾಗ ನಂಗಲಿ ಗ್ರಾಮದ ಕೊರೊನಾ ತನಿಖಾ ಠಾಣೆಗೆ ಭೇಟಿ ನೀಡಿ ಮಾತನಾಡಿ, ಜ್ವರ, ನೆಗಡಿ ಕಂಡು ಬಂದ ತಕ್ಷಣ ವೈದ್ಯರ ಬಳಿ ತೋರಿಸಿಕೊಂಡರೆ ಕೊರೊನಾ ಅಥವಾ ಇನ್ನಿತರೆ ಕಾಯಿಲೆ ಬಗ್ಗೆ ತಿಳಿಯುತ್ತದೆ. ಆದರೆ, ಉಸಿರಾಟದ ಸಮಸ್ಯೆ ಅಪಾಯದ ಹಂತ ತಲುಪಿದಾಗ ಕೊರೊನಾ ಸೋಂಕನ್ನು ಪರೀಕ್ಷಿಸಿಕೊಳ್ಳಲು ವೈದ್ಯರ ಬಳಿ ಹೋಗುತ್ತಾರೆ. ಇದು ಜನ ಮಾಡುವ ಸ್ವಯಂ ಅಪರಾಧ ಎಂದು ಹೇಳಿದರು.

ಆಂಧ್ರ, ತೆಲಂಗಾಣ, ತಮಿಳುನಾಡು, ನೆರೆ ರಾಜ್ಯದ ಜನ ತಾಲೂಕಿಗೆ ಬಂದು ಹೋಗುವುದರಿಂದ ಸೋಂಕು ಸುಲಭವಾಗಿ ಹರಡುತ್ತದೆ. ನಂಗಲಿ ತನಿಖಾ ಠಾಣೆ ಗಡಿಯಲ್ಲಿದ್ದು, ಸಿಬ್ಬಂದಿ ಪ್ರತಿಯೊಬ್ಬರನ್ನು ಸೂಕ್ಷ್ಮವಾಗಿ ಗಮನಿಸಿ ಸೋಂಕಿನ ಲಕ್ಷಣಗಳು ಬಂದವರನ್ನು ಕೂಡಲೇ ಅವರ ರಾಜ್ಯಗಳಿಗೆ ವಾಪಸ್‌ ಕಳುಹಿಸಬೇಕು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಕೆ.ಎನ್‌. ರಾಜಶೇಖರ್‌, ಡಿವೈಎಸ್‌ಪಿ ಗಿರಿ, ಸಿಪಿಐ ಗೋಪಾಲ್‌ ನಾಯಕ್‌, ಇಒ ಶ್ರೀನಿವಾಸ್‌, ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ನಗರಸಭೆ ಪೌರಾಯುಕ್ತ ಶ್ರೀನಿವಾಸಮೂರ್ತಿ, ಉಪತಹಶೀಲ್ದಾರ್‌ ಕೆ.ಟಿ.ವೆಂಕಟೇಶಯ್ಯ, ರಾಜಸ್ವ ನಿರೀಕ್ಷಕ ಉಮೇಶ್‌, ಪಿಎಸ್‌ಐಗಳಾದ ಚೌಡಪ್ಪ, ಸೀತಯ್ಯ, ಪಿಡಿಒ ಸಿ.ಪಿ.ಅಶ್ವತ್ಥನಾರಾಯಣ, ಕಾರ್ಯದರ್ಶಿ ವಿಶ್ವನಾಥ್‌, ಎಸ್‌ಐ ಶ್ರೀಧರ್‌, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹರೀಶ್‌, ಶಂಕರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next