Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪೊಲೀಸರ ತಂಡಕ್ಕೆ ಸಿಕ್ಕಿ ಬಿದ್ದಿರುವ ಆರೋಪಿ ಶಾಸಕ ಗಣೇಶ್‌ರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ಸಿವಿಲ್ ಏವಿಯೇಷನ್ ಅನುಮತಿ ಸಿಕ್ಕರೆ ವಿಮಾನದಲ್ಲಿ ಅಥವಾ ರಸ್ತೆ ಮೂಲಕವೇ ಕರೆತರುವ ಸಾಧ್ಯತೆಗಳಿವೆ. ಗಣೇಶ್ ಅವರನ್ನು 24 ಗಂಟೆಗೂ ಮುನ್ನ ರಾಮನಗರದ ಸಿಜಿಎಂ ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕಾಗಿದೆ. ಕರೆತರುವಲ್ಲಿ ವಿಳಂಬವಾದರೆ ಅಲ್ಲಿನ ಸ್ಥಳೀಯ ನ್ಯಾಯಾಧೀಶರ ಮುಂದೆ ಅವರನ್ನು ಹಾಜರು ಪಡಿಸಿ ಕರೆತರಲಾಗುತ್ತದೆ ಎಂದು ಎಸ್ಪಿ ಪ್ರತಿಕ್ರಿಯಿಸಿದ ಅವರು, ಬಂಧನದ ಕಾರ್ಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
Related Articles
Advertisement
ರಾಜಕೀಯ ಒತ್ತಡವೂ ಜಿಲ್ಲಾ ಪೊಲೀಸರ ಮೇಲೆ ಇರಲಿಲ್ಲ. ಆದರೆ, ಶಾಸಕ ಗಣೇಶ್ ಬೇರೆ ಬೇರೆ ಕಡೆ ಇದ್ದ ಬಗ್ಗೆ ಮಾಹಿತಿ ಲಭ್ಯವಾಗುತ್ತಿತ್ತು. ಮಹಾರಾಷ್ಟ್ರ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ನಮ್ಮ ತಂಡಗಳು ಭೇಟಿ ನೀಡಿವೆ ಎಂದರು.
ಶಾಸಕ ಗಣೇಶ್ ಅವರು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಆಂಟಿಸಿಪೇಟರಿ ಬೇಲ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರು ಅದನ್ನು ವಾಪಸ್ಸು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಬಿಡದಿ ಪೊಲೀಸ್ ಠಾಣೆ ರಾಮನಗರ ಸಿಜಿಎಂ ನ್ಯಾಯಾಲಯದ ವ್ಯಾಪ್ತಿಗೆ ಬರುವುದರಿಂದ ಬಂಧಿತ ಗಣೇಶ್‌ರನ್ನು ಇಲ್ಲೆ ಹಾಜರು ಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಶಾಸಕನ ಬಂಧನದ ಹಿನ್ನೆಲೆ ಏನು? ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ವಾಸ್ತವ್ಯವಿದ್ದ ವೇಳೆ ಜ.19ರ ರಾತ್ರಿ ಶಾಸಕ ಆನಂದ್‌ಸಿಂಗ್ ಮತ್ತು ಶಾಸಕ ಗಣೇಶ್ ನಡುವೆ ಗಲಾಟೆಯಾಗಿತ್ತು. ಈ ವೇಳೆ ಶಾಸಕ ಗಣೇಶ್ ಆನಂದ್ ಸಿಂಗ್‌ರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಾಸಕ ಆನಂದ್ ಸಿಂಗ್, ಬೆಂಗಳೂರಿನ ಅಪಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಜ.21ರಂದು ಅಪಲೋ ಆಸ್ಪತ್ರೆಯಲ್ಲೇ ಪೊಲೀಸರಿಗೆ ಅವರು ಹೇಳಿಕೆ ನೀಡಿದ್ದರು. ಹೇಳಿಕೆ ಪಡೆದ ಬಿಡದಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 323, 324, 307, 504, 506, 504, 506 ಅನ್ವಯ ಎಫ್ಐಆರ್ ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೆ ಆರೋಪಿ ಶಾಸಕ ಕಂಪ್ಲಿ ಗಣೇಶ್ ತಲೆ ಮೆರೆಸಿಕೊಂಡಿದ್ದರು. ಜಿಲ್ಲಾ ಪೊಲೀಸರು 4 ತಂಡಗಳನ್ನು ರಚಿಸಿಕೊಂಡು ಆರೋಪಿ ಶಾಸಕರಿಗಾಗಿ ಹುಡುಕಾಟ ನಡೆಸಿದ್ದರು. ತಮಿಳುನಾಡು, ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳು, ಮುಂಬೈ ಮುಂತಾದ ಸ್ಥಳಗಳಲ್ಲಿ ವಿವಿಧ ಮಾಹಿತಿಗಳನ್ನಾಧರಿಸಿ ಹುಡುಕಾಟ ನಡೆಸಿದ್ದರು. ಆದರೆ, ಆರೋಪಿ ಶಾಸಕರು ಲಭ್ಯವಾಗಿರಲಿಲ್ಲ.