Advertisement

ರಾಜಕೀಯ ಲೆಕ್ಕಾಚಾರಕ್ಕೆ ಗ್ರಾಸವಾದ ವೇದಿಕೆ

06:58 PM Feb 14, 2021 | Team Udayavani |

ಪಿರಿಯಾಪಟ್ಟಣ: ಶನಿವಾರ ಹರೀಶ್‌ಗೌಡರಿಗಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಹಲವು ಅನು ಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪಟ್ಟಣದ ಪಟ್ಟಣದ ಶಾರದಾ ಚಿತ್ರಮಂದಿರದ ಬಳಿ ಇರುವ ಮೈದಾನದಲ್ಲಿ ರಾಜ್ಯ ಅಪೆಕ್ಸ್‌ ಬ್ಯಾಂಕ್‌ನ ಉಪಾಧ್ಯಕ್ಷ ಜಿ.ಡಿ.ಹರೀಶ್‌ ಗೌಡ ಅವರಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಂಡುಬಂತು.

Advertisement

ಜಿ.ಡಿ.ಹರೀಶ್‌ಗೌಡ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ ಮೈಸೂರು ಜಿಲ್ಲೆಯ ಕೆ.ಆರ್‌.ನಗರ, ಎಚ್‌.ಡಿ.ಕೋಟೆ, ಹುಣ ಸೂರು, ಟಿ.ನರಸಿಪುರ ಮೈಸೂರು ನಗರ ಸೇರಿ ದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಅಭಿ ನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಅದೇ ರೀತಿ ಪಿರಿಯಾ ಪಟ್ಟಣದಲ್ಲಿಯೂ ವಿವಿಧ ಸಹಕಾರ ಸಂಘಗಳ ನೇತೃತ್ವ ದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಮಾರಂಭದುದ್ದಕ್ಕೂ ಜಿ.ಟಿ.ದೇವೇಗೌಡ ಹಾಗೂ ಶಾಸಕ ಕೆ.ಮಹದೇವ್‌ ಅವರ ಗುಣಗಾನ ನಡೆದದ್ದು ಬಿಟ್ಟರೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಅವರ ನೆನಪು ಕೂಡ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಾರ್ಯಕ್ರಮದಲ್ಲಿ ಜಿ.ಡಿ.ಹರೀಶ್‌ಗೌಡ ಮಾತ ನಾಡಿ, ನಾನು ಅಪೆಕ್ಸ್‌ ಬ್ಯಾಂಕ್‌ ರಾಜ್ಯ ಉಪಾಧ್ಯಕ್ಷ ನಂತರ ಯಾವ ಶಾಸಕ ಅಥವಾ ಮಂತ್ರಿಗೂ ಸಿಗದ ಅಭಿನಂದನಾ ಸಮಾರಂಭ ಸಹಕಾರ ಕ್ಷೇತ್ರದಲ್ಲಿ ತನಗೆ ಸಿಕ್ಕಿರುವುದು ತನ್ನ ಪುಣ್ಯ. ಸಹಕಾರಿ ಕ್ಷೇತ್ರಗಳ ಯೋಜನೆಗಳು ಯಾವುದೇ ಒಂದು ಜಾತಿಯ ಧರ್ಮದ ವ್ಯಕ್ತಿಗೂ ಸೀಮಿತವಲ್ಲ. ಸಹಕಾರ ಕ್ಷೇತ್ರದ ತತ್ವದಂತೆ ಇಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ ಎಂದರು.

ನುಂಗಲಾರದ ತುತ್ತು: ಜಿ.ಡಿ.ಹರೀಶ್‌ ಗೌಡರಿಗಾಗಿ ನಡೆದ ಕಾರ್ಯಕ್ರಮ ಶಾಸಕ ಕೆ.ಮಹದೇವ್‌ರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದಂತೂ ಸತ್ಯ. ಪಿರಿಯಾಪಟ್ಟಣದಲ್ಲಿ ಶಾಸಕ ಕೆ.ಮಹದೇವ್‌ ಶಾಸಕರಾಗಿರುವುದು ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರ  ನಾಮಬಲದಿಂದ. ಆದರೆ, ಜಿ.ಟಿ.ದೇವೇಗೌಡ ಹಾಗೂ ಅವರ ಮಗ ಹರೀಶ್‌ ಗೌಡರ ಸ್ನೇಹ ಮತ್ತು ಆರ್ಥಿಕ ವ್ಯವಹಾರ, ಶಾಸಕ ಕೆ.ಮಹದೇವ್‌ ತಮ್ಮ ಮಗ ಪಿ.ಎಂ.ಪ್ರಸನ್ನ ಅವರ ಮೈಮುಲ್‌ ನ ಅಧ್ಯಕ್ಷಗಾದಿಗಾಗಿ ನಡೆಯುತ್ತಿರುವ ಈ ಕಾರ್ಯಕ್ರಮ. ಅನಿವಾರ್ಯವಾಗಿ ಮಾಜಿ ಪ್ರಧಾನಿ ಹಾಗೂ ಕುಮಾರಸ್ವಾಮಿ ಅವರನ್ನು ಮರೆಸುವಂತೆ ಮಾಡಿರುವುದಂತೂ ಸತ್ಯ. ಈಗಾಗಲೇ ಜಿಲ್ಲೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪರ್ಯಾಯವಾಗಿ ವೇದಿಕೆ ಸೃಷ್ಟಿ ಪರ್ಯಾಯ ನಾಯಕತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಜಿ. ಟಿ.ದೇವೇಗೌಡ, ಪುತ್ರ ಹರೀಶ್‌ ಗೌಡರು ಹಾಗೇ ಶಾಸಕ ಕೆ.ಮಹದೇವ್‌ ಹಾಗೂ ಪಿ.ಎಂ.ಪ್ರಸನ್ನ ಅವರಿಗೆ ಮುಂದಿನ ಭವಿಷ್ಯಕ್ಕಾಗಿ ಈ ಕಾರ್ಯಕ್ರಮ ಅಗತ್ಯ ಮತ್ತು ಅನಿವಾರ್ಯವಾಗಿ ಪರಿಣಮಿಸಿರುವುದಂತೂ ಸತ್ಯ. ಮುಂದೆ ಇವರೇ ಜೆಡಿಎಸ್‌ನಲ್ಲಿ ಮುಂದುವರಿಯುತ್ತಾರಾ ಇಲ್ಲ, ಜಿ.ಟಿ ದೇವೇಗೌಡರನ್ನು ಒಪ್ಪಿ ಪಕ್ಷ ಬಿಡುತ್ತಾರಾ ಎಂದು ಕಾದು ನೋಡಬೇಕಿದೆ.

ಕಾರ್ಯಕ್ರಮದಲ್ಲಿ ಮಾಜಿ ಮೂಡಾ ಅಧ್ಯಕ್ಷ ವಿಜಯ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ರವಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಪುರ ಸಭಾ ಅಧ್ಯಕ್ಷ ಮಂಜುನಾಥಸಿಂಗ್‌, ಜಿಪಂ ಸದಸ್ಯ ಜಯಕುಮಾರ್‌, ತಾಪಂ ಸದಸ್ಯ ರಾಮು, ಯೂನಿ ಯನ್‌ ಬ್ಯಾಂಕ್‌ ನಿರ್ದೇಶಕ ಹರೀಶ್‌, ಜೆಡಿಎಸ್‌ ಮುಖಂಡ ಅಪೂರ್ವ ಮೋಹನ್‌, ಬೆಕ್ಯಾ ಸತೀಶ್‌, ತಾಪಂ, ಪುರಸಭಾ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next