Advertisement

ಕೊರೊನಾದಿಂದ ಯಾವ ದೇಶವೂ ಮುಕ್ತವಾಗಿಲ್ಲ: ಶಾಸಕ ಡಾ.ಜಿ.ಪರಮೇಶ್ವರ

06:59 PM Jan 04, 2022 | Team Udayavani |

ಕೊರಟಗೆರೆ: ಪ್ರಪಂಚದಲ್ಲಿ ಯಾವುದೃ ಒಂದು ದೇಶವೂ ಕೂಡ ಕೋವಿಡ್ ನಿಂದ ಮುಕ್ತವಾಗಿಲ್ಲ. ಅಮೇರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳೇ ಕೊರೊನಾದಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವುದನ್ನು  ಕಾಣ ಬಹುದಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

Advertisement

ಪಟ್ಟಣದ ಜೂನಿಯರ್ ಕಾಲೇಜ್ ಆವರಣದಲ್ಲಿ ಕಂದಾಯ ಹಾಗೂ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಲಸಿಕಾ ಅಭಿಯಾನ ಹಾಗೂ ಕೊರೊನಾದಿಂದ ಮೃತಪಟ್ಟ ಕುಟುಂಬದವರಿಗೆ ಒಂದು ಲಕ್ಷದ ಚೆಕ್ ವಿತರಿಸಿ ಮಾತನಾಡಿದ ಅವರು ಅಮೇರಿಕ ದೇಶದಲ್ಲಿ ಅಧುನಿಕ ತಂತ್ರಜ್ಞಾನ ಹಾಗೂ ಹೈಟೆಕ್ ಆಸ್ಪತ್ರೆಗಳು ಹೊಂದಿದ್ದರೂ ಪ್ರಸ್ತುತ ದಿನವೊಂದಕ್ಕೆ 5 ಲಕ್ಷ ಕೊರೊನಾ ಸೋಂಕಿತರು ಕಾಣಿಸಿ ಕೊಳ್ಳುತ್ತಿದ್ದಾರೆ. ಸುಮಾರು180 ದೇಶಗಳಲ್ಲಿ ಕೊರೊನಾ ಖಾಯಿಲೆಗೆ ಔಷಧ ಕಂಡು ಹಿಡಿಯುತ್ತಿದ್ದಾರೆ. ಅದರೂ ಇಲ್ಲಿಯವರೆಗೂ ನಿರ್ದಿಷ್ಟ ಔಷಧ ಸಿಕ್ಕಿಲ್ಲ. ಅದರೆ ಕೊರೊನಾ ಸೋಂಕು ತಡೆಯಲು15 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಗೆ ಚಾಲನೆ ನೀಡಲಾಗಿದೆ ಎಂದರು.

ಕರ್ನಾಟಕದಲ್ಲಿ ಒಟ್ಟು 31 ಲಕ್ಷ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ಹಾಕಲಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿ 15 ರಿಂದ 18 ವರ್ಷದ ಸುಮಾರು 3 ಸಾವಿರ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ರಾಜ್ಯದಲ್ಲಿ ಕೊರೊನಾ 3ನೇ ಅಲೆ ಪ್ರಾರಂಭವಾಗಿದ್ದು ತಪ್ಪದೇ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ. ಶಾಲೆಯ ಮಕ್ಕಳಿಗೆ ಶಾಲೆಯಲ್ಲಿ ಸೇರಿದಂತೆ ಶಾಲೆ ಬಿಟ್ಟ ಮಕ್ಕಳಿಗೂ ಮನೆ ಹತ್ತಿರ ಹೋಗಿ ಲಸಿಕೆ ಹಾಕಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶಿಲ್ದಾರ್ ನಾಹಿದಾ ಜಮ್ ಜಮ್, ತಾಪಂ ಇಒ ದೊಡ್ಡಸಿದ್ದಪ್ಪ, ಪಪಂ ಪ್ರಭಾರ ಅದ್ಯಕ್ಷೆ ಭಾರತಿ,  ಪಪಂಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್, ಬಿಇಒ ಸುದಾಕರ್.ಟಿಎಚ್ಒ ವಿಜಯ್ ಕುಮಾರ್, ಬಿಆರ್ ಸಿ ಸುರೇಂದ್ರನಾಥ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕೆರೆ ಶಂಕರ್, ಅಶ್ವಥ್ ನಾರಾಯಣ್, ಪಪಂ ಸದಸ್ಯರಾದ ಬಲರಾಮಯ್ಯ, ಒಬಳರಾಜು,ನಂದೀಶ್ ತಾಪಂ ಮಾಜಿ ಉಪಾಧ್ಯಕ್ಷ ವೆಂಕಟಪ್ಪ, ಯುವ ಕಾಂಗ್ರೆಸ್ ಅದ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಎಲ್ ರಾಜಣ್ಣ,  ಕಾರ್ ಮಹೇಶ್ ,ಕವಿತಮ್ಮ, ಜಯಮ್ಮ, ಅರವಿಂದ್ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next