Advertisement

ಜೇರಟಗಿಯಲ್ಲಿಂದು ಶಾಸಕ ಡಾ|ಅಜಯಸಿಂಗ್‌ ಗ್ರಾಮವಾಸ್ತವ್ಯ

03:27 PM Jan 28, 2021 | Team Udayavani |

ಕಲಬುರಗಿ: ಜೇವರ್ಗಿ ಶಾಸಕ ಡಾ| ಅಜಯಸಿಂಗ್‌ ತಮ್ಮ ಜನ್ಮ ದಿನದಂಗವಾಗಿ ಜ. 28ರಂದು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಕ್ಷೇತ್ರದ ಜೇರಟಗಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಬಡ, ಸಣ್ಣ ರೈತ ಮೋದಿನಸಾಬ್‌ ಹಣಗಿಕಟ್ಟಿ ಅವರ ಮನೆಯಲ್ಲಿ ತಂಗಲಿದ್ದಾರೆ.

Advertisement

ಮನೆಯ ಮಾಲೀಕ ಮೋದಿನಸಾಬ್‌ ಖುಷಿಯಲ್ಲಿದ್ದಾರೆ. ಶಾಸಕರು ತಮ್ಮೂರಿಗೆ ಬಂದು ತಮ್ಮ ಮನೆಯಲ್ಲೇ ಮೊಕ್ಕಾಂ ಮಾಡುತ್ತಿದ್ದಾರಲ್ಲ ಎನ್ನುವ ಸಂತಸದಲ್ಲಿದ್ದಾರೆ. ಮೋದಿನ್‌ ಸಾಬ್‌ ಅವರು ಎರಡು ಎಕರೆ ಹೊಲ ಇರುವ ಸಣ್ಣ ರೈತರಾಗಿದ್ದಾರೆ, ನೆರೆ- ಮಳೆಯಿಂದಾಗಿ ಬೇಸಾಯದಲ್ಲಿ ಕೈಸುಟ್ಟುಕೊಂಡಿದ್ದಾರೆ. ಶಾಸಕರು ತಮ್ಮ ಮನೆಯಲ್ಲೇ ವಾಸ್ತವ್ಯ ಮಾಡಿ, ಜನರ ಸಮಸ್ಯೆ ಆಲಿಸುವುದೇ ತಮಗೆ ಖುಷಿ ತಂದಿದೆ. ಶಾಸಕರ ಈ ಭೇಟಿ ಊರಿನ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.

ವಾಸ್ತವ್ಯದ ಮರು ದಿನ ಜ. 29ರಂದು ಡಾ| ಅಜಯಸಿಂಗ್‌ ಶೋಷಿತ ಸಮುದಾಯದ ಕೂಲಿ ಕಾರ್ಮಿಕ ರಮೇಶ ಹೊಸ್ಮನಿ ಅವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಲಿದ್ದಾರೆ. ರಮೇಶ ಕೂಲಿ ಕಾರ್ಮಿಕನಾದರೂ ಶಾಸಕರಿಗಾಗಿ ಸಂತೋಷದಿಂದ ಉಪಹಾರ ಸಿದ್ಧಪಡಿಸುವುದಾಗಿ ಹೇಳಿದ್ದಾರೆ. ಅಲ್ಪಸಂಖ್ಯಾತರ ಮನೆಯಲ್ಲಿ ವಾಸ್ತವ್ಯ, ಪರಿಶಿಷ್ಟ ಜಾತಿ ಸಮುದಾಯದವರ ಮನೆಯಲ್ಲಿ ಉಪಹಾರ ಮಾಡುವ ಮೂಲಕ ತಾವು ಸಾಮರಸ್ಯದ ಸಂದೇಶ ಸಾರುತ್ತಿರುವುದಾಗಿ ಡಾ| ಅಜಯಸಿಂಗ್‌ ತಿಳಿಸಿದ್ದಾರೆ.

ಪಾದಯಾತ್ರೆ-ಗ್ರಾಮ ಪ್ರದಕ್ಷಿಣೆ: ಜ. 29ರಂದು ಜೇರಟಗಿ ಗ್ರಾಮ ಪ್ರದಕ್ಷಿಣೆ ಮಾಡುವ ಶಾಸಕರು ಪಾದಯಾತ್ರೆಯಲ್ಲಿಯೇ ಊರನ್ನು ಸುತ್ತಿ, ಪ್ರದಕ್ಷಿಣೆ ಮೂಲಕ ಜನರನ್ನು ಭೇಟಿ ಮಾಡಲಿದ್ದಾರೆ. ಇದಾದ ನಂತರ ಊರಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಅಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next