ಹೊಳಲ್ಕೆರೆ: ಪಟ್ಟಣದ ಅಭಿವೃದ್ಧಿಗೆ ಒತ್ತುನೀಡಿದ್ದು, ಗಣಪತಿ ದೇವಸ್ಥಾನದ ಎದುರಿನಲ್ಲಿ3.5 ಕೋಟಿ ಅನುದಾನದಲ್ಲಿ ಕಾಲೇಜುವಿದ್ಯಾರ್ಥಿಗಳ ವಸತಿ ನಿಲಯವನ್ನು 3ಜಿ ಮಾದರಿಯಲ್ಲಿ ನಿರ್ಮಾಣಕ್ಕೆ ಒತ್ತು ನೀಡಿದ್ದು, ಒಂದನೇ ವಾರ್ಡ್‌ನಲ್ಲಿರುವ ಕೊಳಚೆ ನಿರ್ಮೂಲನೆಗೆ 2 ಕೋಟಿ ಅನುದಾನ ವ್ಯಯಿಸಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಗಣಪತಿ ದೇವಸ್ಥಾನದ ಹತ್ತಿದ ಕುಂಬಾರ ಸಂಘದ ಹಿಂಭಾಗದಲ್ಲಿದ್ದ ಕೊಳಚೆ ಪ್ರದೇಶದಲ್ಲಿ 3.5 ಕೋಟಿ ಅನುದಾನ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ಹಾಗೂ ಹೊಂಡದ ಸ್ವತ್ಛತೆಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ತಾಲೂಕಿನ ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೆ 1500 ಕೋಟಿ ಅನುದಾನ ತರಲಾಗಿದೆ. ಅದೇ ಮಾದರಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಬೇಕಾದ ಸರಕಾರಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ 30 ಕೋಟಿ, ಪುರಸಭೆಯ ಕಚೇರಿ ನಿರ್ಮಾಣಕ್ಕೆ 10ಕೋಟಿ, ರಸ್ತೆ ಎರಡು ಬದಿಯಲ್ಲಿ 6ವೇ ರಸ್ತೆ ನಿರ್ಮಾಣ, ಕಾಲಭೆ„ರವ ಹೊಂಡದ ಸ್ವಚ್ಚತೆಗೆ 50 ಲಕ್ಷ, 1ನೇ ವಾರ್ಡನಲ್ಲಿ ಚರಂಡಿ ನಿರ್ಮಾಣಕ್ಕೆ 75 ಲಕ್ಷ ಅನುದಾನ, ಕೆರೆಗಳಿಗೆ ನೀರು ತುಂಭಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿಗೆ ತಲಾ 1ಕೋಟಿ ಅನುದಾನ ನೀಡಲಾಗಿದೆ.
ಪಟ್ಟಣದಲ್ಲಿ ವ್ಯವಸ್ಥಿತವಾದ ಕಲಾಮಂದಿರ ನಿರ್ಮಾಣಕ್ಕೆ ಈಗಾಗಲೆ 2 ಕೋಟಿ, ಎಂಎಂ ಸರಕಾರಿ ಶಾಲೆ ನಿರ್ಮಾಣಕ್ಕೆ 10 ಕೋಟಿ, ಸರಕಾರಿ ಬಸ್ ನಿಲ್ದಾರ್ಣಕ್ಕೆ 10 ಕೋಟಿ ಸೇರಿದಂತೆ ಸಾಕಷ್ಟು ಅನುದಾನ ತರಲಾಗಿದೆ ಎಂದರು.
ವಕೀಲರಾದ ಎಸ್.ವೇದಮೂರ್ತಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ನಾಗಲೋಟದಲ್ಲಿ ನಡೆಯುತ್ತಿದೆ. ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಶಾಸಕ ಎಂ.ಚಂದ್ರಪ್ಪ ಪಟ್ಟಣದಲ್ಲಿರುವ ಕೊಳಚೆ ನಿವಾಸಿಗಳಿಗೆ 325 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ ಎಂದರು.
ಪುರಸಭೆ ಸದಸ್ಯರಾದ ಪಿ.ಎಚ್. ಮುರುಗೇಶ್, ಪಿ.ಆರ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಆರ್.ಎ.ಆಶೋಕ್ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಶಾಸಕರು ಮಾಡಲು ಸಾಧ್ಯವಿಲ್ಲದಷ್ಟು ಅಭಿವೃದ್ಧಿ ಕೆಲಸಗಳನ್ನು ಶಾಸಕ ಎಂ.ಚಂದ್ರಪ್ಪ ಕ್ಷೇತ್ರದಲ್ಲಿ ಕೈಗೊಂಡಿದ್ದಾರೆ ಎಂದರು.
ಉಪಾಧ್ಯಕ್ಷ ಕೆ.ಸಿ.ರಮೇಶ್ ಮಾತನಾಡಿ, ಪಟ್ಟಣದ ಆಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿದ್ದು ಕ್ಷೇತ್ರವನ್ನು ಸರ್ವಾಂಗಿಣ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದರು. ಜಿ.ಪಂ.ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ, ಪುರಸಭೆಯಸದಸ್ಯರಾದ ಸುಧಾ ಬಸವರಾಜ್, ತಾಪಂ ಇಒ ಪ್ರಕಾಶ್, ಮುಖ್ಯಾ ಧಿಕಾರಿ ಎ.ವಾಸೀಂ, ವಿಸ್ತಾರಣಾ ಧಿಕಾರಿ ಪ್ರದೀಪ್, ಕುಮಾರ್ ಸ್ವಾಮಿ, ಇಂಜಿನಿಯರ್ ಸುನೀಲ್ ಸೇರಿದಂತೆ ನಾಗರಿಕರು ಪಾಲ್ಗೊಂಡಿದ್ದರು.