Advertisement
ಮೊದಲನೇ ಅಲೆಯ ಅನುಭವಗಳನ್ನಾಧರಿಸಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳೇ ಇಂದು ಸೋಂಕಿತರ ಕೈಹಿಡಿದಿವೆ. ಈ ಬಾರಿಯೂ ಸರಕಾರ ಹಾಗೂ ವಿವಿಧ ಗಣಿ ಕಂಪನಿಗಳ ಮೇಲೆ ತಮ್ಮ ಪ್ರಭಾವ ಬೀರಿ, ಜಿಲ್ಲೆಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಈ ಮೂಲಕ ಜಿಲ್ಲೆಯನ್ನು ಕೊರೊನಾ ಮುಕ್ತಗೊಳಿಸುವುದರ ಜತೆಗೆ ಅತ್ಯುತ್ತಮ ಆಸ್ಪತ್ರೆಗಳನ್ನಾಗಿಸುವ ಪ್ರಯತ್ನ ನಡೆಸಿದ್ದಾರೆ.
Related Articles
Advertisement
ಪ್ರಾಣವಾಯು ಉತ್ಪಾದನೆಗೆ ಕ್ರಮ: ಕೊರೊನಾ 2ನೇ ಅಲೆಯಲ್ಲಿ ಎಲ್ಲೆಡೆ ಪ್ರಾಣವಾಯು ಮತ್ತು ವೆಂಟಿಲೇಟರ್‌ಗಳ ಕೂಗು ದೊಡ್ಡ ಮಟ್ಟದಲ್ಲಿತ್ತು. ಆದರೆ ಜಿಮ್ಸ್‌ನಲ್ಲಿ 13 ಕೆಎಲ್ ಸಾಮರ್ಥ್ಯದ ಸಂಗ್ರಹ ಘಟಕ ಇದ್ದಿದ್ದರಿಂದ ಹೆಚ್ಚಿನ ಸಮಸ್ಯೆ ಕಂಡು ಬರಲಿಲ್ಲ. ಆದರೂ, ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲೆಯ ವೈದ್ಯಕೀಯ ಸೌಲಭ್ಯಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಸಚಿವ ಸಿ.ಸಿ.ಪಾಟೀಲ ವಿಶೇಷ ಆಸಕ್ತಿ ತೋರಿದ್ದಾರೆ. ಸರಕಾರದ ವಿವಿಧ ಯೋಜನೆಗಳಿಂದ ಒಟ್ಟು 5000 ಎಲ್‌ಪಿಎಂ ಸಾಮರ್ಥ್ಯದ ಘಟಕಗಳನ್ನು ಮಂಜೂರು ಮಾಡಿಸಿದ್ದು, ಶೀಘ್ರವೇ 3 ಸಾವಿರ ಎಲ್‌ಪಿಎಂ ಘಟಕಗಳು ಕಾರ್ಯಾರಂಭಕ್ಕೆ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನರಗುಂದದ 390 ಎಲ್‌ಪಿಎಂ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ. ಜಿಮ್ಸ್ ಪಿಎಂ ಕೇರ್ ನಿಧಿ ಯಡಿ 50 ವೆಂಟಿಲೇಟರ್ ಒದಗಿಸಲಾಗಿದೆ. ಬಲೊªàಟಾ ಕಂಪನಿಯಿಂದ ಒಂದು ಐಸಿಯು ಸಹಿತ ಆಂಬ್ಯುಲೆನ್ಸ್ ಅನ್ನು ಜಿಮ್ಸ್‌ಗೆ ಒದಗಿಸಲಾಗಿದೆ. ಜಿಲ್ಲೆಗೆ ನಾಲ್ಕು ಐಸಿಯು ಸಹಿತ ಆಂಬ್ಯುಲೆನ್ಸ್ ಒದಗಿಸಲು ಹಟ್ಟಿ ಚಿನ್ನದ ಗಣಿ ಕಂಪನಿ ಒಪ್ಪಿಗೆ ಸೂಚಿಸಿದೆ. ಇದರಲ್ಲಿ ಸಚಿವ ಸಿ.ಸಿ.ಪಾಟೀಲರ ಪ್ರಯತ್ನ ಅಲ್ಲಗೆಳೆಯುವಂತಿಲ್ಲ.
ನರಗುಂದ, ಹೊಳೆಆಲೂರಿಗೆ 50 ಲಕ್ಷ ರೂ.:ರಾಜ್ಯ ಸರಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಶಾಸಕರಿಗೆ ಬಿಡುಗಡೆ ಮಾಡಿರುವ 50 ಲಕ್ಷ ರೂ. ಅನುದಾನದಲ್ಲಿ ನರಗುಂದ ತಾಲೂಕು ಆಸ್ಪತ್ರೆಗೆ 30 ಲಕ್ಷ ರೂ. ಹಾಗೂ ಹೊಳೆಆಲೂರು ಪಿಎಚ್‌ಸಿಗೆ 20 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಈ ಮೂಲಕ ಆಯಾ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಖರೀದಿಗೆ ಸೂಚಿಸಿದ್ದು, ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಖಾತ್ರಿಗೊಳಿಸುವ ಪ್ರಯತ್ನ ನಡೆಸಿದ್ದಾರೆ. ನರಗುಂದ ವಿಧಾನಸಭಾ ಕ್ಷೇತ್ರದಲ್ಲಿರುವ ಸಕ್ರಿಯ ಸೋಂಕಿತರಿಗೂ ವೈಯಕ್ತಿಕವಾಗಿ ತಲಾ ಒಂದು ಬಿಸಿ ನೀರಿನ ಹಬೆ ತೆಗೆದುಕೊಳ್ಳುವ ಸ್ಟೀಮರ್ ಒದಗಿಸಲು ಚಿಂತನೆ ನಡೆಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಸೋಂಕು ನಿವಾರಣೆಗೆ ಜಿಲ್ಲಾ-ತಾಲೂಕು ಮಟ್ಟದ ಅಧಿ ಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ, ಮಾರ್ಗದರ್ಶನ ನೀಡುತ್ತಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಸರಕಾರ, ಜಿಲ್ಲಾಡಳಿತ ಮತ್ತು ಜನಸಾಮಾನ್ಯರ ಸಂಪರ್ಕ ಕೊಂಡಿಯಂತೆ ಸಚಿವ ಸಿ.ಸಿ.ಪಾಟೀಲ ಕಾರ್ಯ ನಿರ್ವಹಿಸುತ್ತಿದ್ದಾರೆ.