Advertisement

ಎಪಿಎಂಸಿ ಮಾರುಕಟ್ಟೆಗೆ ಭೇಟಿ

11:01 AM May 12, 2020 | Team Udayavani |

ಕಡೂರು: ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಶಾಸಕ ಬೆಳ್ಳಿ ಪ್ರಕಾಶ್‌ ಭೇಟಿ ನೀಡಿ ತರಕಾರಿ, ಟೊಮೊಟೊ ಮತ್ತು ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಭಾನುವಾರ ಬೆಳಗ್ಗೆ ತಹಶೀಲ್ದಾರ್‌, ಪೊಲೀಸ್‌ ಇಲಾಖೆ ಅಧಿಕಾರಿಗಳು ಮತ್ತು ತಾ.ಪಂ ಇಒ ಜತೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

Advertisement

ಪಟ್ಟಣದ ಎಪಿಎಂಸಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಲಾರಿಗಳು ಬರುತ್ತಿದ್ದು, ಚಾಲಕರು ಹಣದ ಆಸೆಗಾಗಿ ಪ್ರಯಾಣಿಕರನ್ನು ಕರೆತಂದು ಕಡೂರು ಪಟ್ಟಣದಲ್ಲಿ ಬಿಟ್ಟು ಹೋಗುತ್ತಿದ್ದಾರೆ
ಎಂಬ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿ ಪೊಲೀಸ್‌ ಇಲಾಖೆಗೆ ಇಂತಹ ಪ್ರಕರಣಗಳು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಶಾಸಕರು ತಿಳಿಸಿದರು.

ಟೊಮೊಟೊ ಖರೀದಿ ಕೇಂದಕ್ಕೆ ಭೇಟಿ ನೀಡಿ ಡರ್‌ದಾರರನ್ನು ಮಾತನಾಡಿಸಿ ದರದ ಬಗ್ಗೆ ಮಾಹಿತಿ ಪಡೆದರು. ಟೆಂಡರ್‌ ನಡೆಯುವಾಗ ಎಲ್ಲರು ಅಂತರ ಕಾಪಾಡಿಕೊಳ್ಳುವಂತೆ ಆದೇಶಿಸಿದರು. ರೈತರಿಗೆ ಯಾವುದೇ ಸಮಸ್ಯೆ ತಲೆದೋರದಂತೆ ವ್ಯವಹಾರ ನಡೆಸಲು ಸೂಚಿಸಿದರು. ರೈತರು ತಮ್ಮ ವ್ಯವಹಾರ ಮುಗಿದ ನಂತರ ತಮ್ಮ ತಮ್ಮ
ಊರುಗಳಿಗೆ ತೆರಳಬೇಕು ಎಂಬ ಸಲಹೆ ನೀಡಿದರು.

ಕೊರೊನಾ ವೈರಸ್‌ ದಿನೆ ದಿನೆ ಹೆಚ್ಚುತ್ತಿದ್ದು ಪಕ್ಕದ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗಿರುವುದರಿಂದ ತಾಲೂಕಿನ ಜನತೆ ಹೆಚ್ಚಾಗಿ ಈ ಮೂರು ಜಿಲ್ಲೆಗಳ ಸಂಪರ್ಕ ಹೊಂದಿರುವುದರಿಂದ ಜನರಲ್ಲಿ ಆತಂಕ ಮೂಡುತ್ತಿದೆ. ಈ ಭಯವನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಹಾಗೂ ಅಂತರ ಕಾಪಾಡಿಕೊಳ್ಳಬೇಕು. ಪುರಸಭೆ, ಪೊಲೀಸ್‌ ಇಲಾಖೆಯು ಮಧ್ಯಾಹ್ನ 1 ಗಂಟೆಯಿಂದ ವಿಧಿ ಸುವ ಲಾಕ್‌ಡೌನ್‌ಗೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.

ತಹಶೀಲ್ದಾರ್‌ ಜೆ.ಉಮೇಶ್‌, ವೃತ್ತ ನಿರೀಕ್ಷಕ ಮಂಜುನಾಥ್‌, ಪಿಎಸ್‌ಐ ವಿಶ್ವನಾಥ್‌, ತಾ.ಪಂ ಇಒ ಡಾ| ದೇವರಾಜನಾಯ್ಕ, ತಾಲೂಕು ವೈದ್ಯಾಧಿಕಾರಿ ಡಾ| ರವಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next