Advertisement

ಉಕ್ಕಲಗೆರೆ ಬಸವಣ್ಣನ ಆರೋಪಕ್ಕೆ ಅಶ್ವಿ‌ನ್‌ ತಿರುಗೇಟು

04:15 PM Oct 17, 2022 | Team Udayavani |

ತಿ.ನರಸೀಪುರ: ನಾನೇನು ಹೆಬ್ಬೆಟ್ಟಲ್ಲ, ಬದಲಿಗೆ ಡಬಲ್‌ ಡಿಗ್ರಿ ಮಾಡಿರುವ ಎಂಟೆಕ್‌ ಗ್ರ್ಯಾಜುಯೇಟ್‌ ಆಗಿದ್ದು ಆರೋಪ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ ಎಂದು ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ಗರಂ ಆದ ಘಟನೆ ನಡೆಯಿತು.

Advertisement

ತಾಲೂಕಿನ ಉಕ್ಕಲಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕನಕ ಭವನ ನಿರ್ಮಾಣ ಮಾಡಲು ಅನುದಾನ ಬಿಡುಗಡೆಮಾಡಿದ್ದು ಸ್ಥಳೀಯ ಶಾಸಕರಲ್ಲ ಗ್ರಾಮದ ಅಭಿವೃದ್ಧಿಯಲ್ಲಿ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪರ ಕೊಡುಗೆ ಅಪಾರವಾಗಿದ್ದು ಹಾಲಿ ಶಾಸಕರ ಸಾಧನೆ ಶೂನ್ಯ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ ಆರೋಪ ಮಾಡಿ ಶಾಸಕರಿಗೆ ಸೆಡ್ಡು ಹೊಡೆದುಗ್ರಾಪಂ ಅಧ್ಯಕ್ಷರೊಂದಿಗೆ ಕಳೆದ ವಾರವಷ್ಟೇ ಭೂಮಿ ಪೂಜೆ ನೆರವೇರಿಸಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕರು ಕನಕ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಉಕ್ಕಲಗೆರೆ ಬಸವಣ್ಣನವರ ಆರೋಪಕ್ಕೆ ತಿರುಗೇಟು ನೀಡಿ ಮಾತನಾಡಿ, ಗ್ರಾಪಂನಲ್ಲಿ ಬಿಡುಗಡೆಯಾದ ಹಣವನ್ನು ಮುಂದಿನ ಅವಧಿಗೆ ಆಯ್ಕೆಯಾದ ಸದಸ್ಯ ಬೇರೆಡೆಗೆ ವರ್ಗಾವಣೆ ಮಾಡಲು ಸಾಧ್ಯವಿರುವಾಗ ಒಬ್ಬ ಶಾಸಕನಾಗಿ ಅನುದಾನ ಬೇರೆಡೆಗೆ ವರ್ಗಾಯಿಸಲು ಆಗುತ್ತಿರಲಿಲ್ಲವೇ, ಆದರೆ ನನಗೆ ದ್ವೇಷದ ರಾಜಕಾರಣ ಮಾಡಲು ಬಾರದು. ಮತದಾರರಿಂದ ಚುನಾಯಿತನಾಗಿ ಬಂದಿರುವುದು ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆಯ ಕಲ್ಯಾಣಕ್ಕಾಗಿ ದುಡಿಯಲಷ್ಟೇ. ದ್ವೇಷದ ರಾಜಕಾರಣ ಮಾಡಲಲ್ಲ.

ಆದಷ್ಟು ಜನರ ಕೈಗೆ ಸಿಗುವ ಜೊತೆಗೆ ನನ್ನ ಕೈಲಾದಷ್ಟು ಕೆಲಸ ಮಾಡಬೇಕೆನ್ನುವ ಆಶಯ ಹೊಂದಿದ್ದೇನೆ. ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆಯೇ ಹೊರತು ಕೆಟ್ಟದ್ದನಂತೂ ಮಾಡಲಾರೆ, ಜನರ ಪ್ರೀತಿ ವಿಶ್ವಾಸವಷ್ಟೇ ನನಗೆ ಮುಖ್ಯ ಎಂದರು.

ಆರೋಪ ಮಾಡುವವರು ವಾಸ್ತವಾಂಶ ಅರಿತು ಮಾತಾಡಲಿ, ನಾನೇನು ಅನಕ್ಷರಸ್ಥನಲ್ಲ,ನಾನು ಡಬಲ್‌ ಡಿಗ್ರಿ ಮಾಡಿರುವ ಗ್ರ್ಯಾಜುಯೇಟ್‌ ಅನುದಾನ ಬಿಡುಗಡೆ ಮಾಡಿಸಿದ್ದು ಯಾರು, ಅನುದಾನ ಎಲ್ಲಿತ್ತು, ಯಾವ ಸಾಲಿನಲ್ಲಿ ಬಂತು, ಯಾಕೆ ಸ್ಥಗಿತವಾಗಿತ್ತು, ಅನುದಾನ ಬಿಡುಗಡೆ ಮಾಡಿಸಲು ನಾವೇನು ಮಾಡಿದ್ವಿ ಎಂದು ಹೇಳುವ ಮೂಲಕ ಅನುದಾನ ಬಿಡುಗಡೆ ಮಾಡಿಸಿದ್ದು ನಾನೇ ಎಂಬ ಬಗ್ಗೆ ಸುಳಿವು ನೀಡಿದರು.

Advertisement

ಗ್ರಾಮದಲ್ಲಿ ಕನಕ ಭವನ ನಿರ್ಮಾಣ ಮಾಡಲು ಹಿಂದುಳಿದ ವರ್ಗದಿಂದ 10 ಲಕ್ಷ ಹಾಗೂ ಗ್ರಾಮ ವಿಕಾಸ ಯೋಜನೆಯಡಿ 23 ಲಕ್ಷ ರೂ.ಗಳು ಬಿಡುಗಡೆಯಾಗಿದ್ದು, ಗ್ರಾಮಸ್ಥರು ಹಾಗೂ ಸಮುದಾಯದ ಮುಖಂಡರ ಸಲಹೆ, ಆಶಯದಂತೆ ಉತ್ತಮ ಗುಣಮಟ್ಟದ ಭವನ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆ ದಾರರಿಗೆ ಸೂಚಿಸಿದರು.

ಉಕ್ಕಲಗೆರೆ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಡುಗೆ ಕುಮಾರ್‌, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎನ್‌. ಸಿದ್ಧಾರ್ಥ, ಸದಸ್ಯ ಜೈಪಾಲ್‌ ಭರಣಿ, ಎಪಿಎಂಸಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ಗ್ರಾಪಂ ಮಾಜಿ ಸದಸ್ಯ

ಶಿವಕುಮಾರ್‌, ಸದಸ್ಯ ಪುಟ್ಟಮ್ಮ, ಎಸ್‌ಡಿಎಂಸಿ ಅಧ್ಯಕ್ಷ ರಾಜು, ಗಡಿಗೆ ನಟರಾಜ್, ಎಸ್‌.ಪಿ.ಕುಮಾರ್‌, ಹೋಟೆಲ್‌ ರಾಜಶೇಖರ್‌, ಶಿವಶಂಕರಪ್ಪ, ಕೆ.ಶಿವಣ್ಣ, ಅಂಗಡಿ ಕುಮಾರ್‌, ಹೋಟೆಲ್‌ ಮಲ್ಲಿಕಾರ್ಜುನಪ್ಪ, ನಂದಿ, ಬೆನಕಪ್ಪ, ರುದ್ರಸ್ವಾಮಿ, ವಕೀಲ ಸುರೇಶ್‌, ವಿನೋದ್‌, ಸಾಧು ಬಸವರಾಜ್, ಗೌಡಿಕೆ ಶ್ರೀನಿವಾಸ್‌, ಇಟ್ಟಿಗೆ ಶಿವಸ್ವಾಮಿ, ಕೊಪ್ಪಲು ಸ್ವಾಮಿ, ಪಿ.ರಾಜು, ಕೆಂಪಣ್ಣ, ಮಹದೇವಸ್ವಾಮಿ, ಸಿದ್ದರಾಮ, ಮಹದೇವ ಶೆಟ್ಟಿ, ಭೀಮ, ಮಹದೇವಶೆಟ್ಟಿ, ಶುಭನ್‌, ಗಣೇಶ್‌, ಅರ್ಚಕ ನಾಗರಾಜಪ್ಪ, ಪರಶಿವಮೂರ್ತಿ, ನಾಗರಾಜು, ಸಿದ್ದಣ್ಣ, ಸಿದ್ದಲಿಂಗಸ್ವಾಮಿ, ಮರಪ್ಪ, ಮಲ್ಲೇಶ್‌, ಮಹ ದೇವಸ್ವಾಮಿ, ಮಹೇಶ್‌, ನಾಗರಾಜು, ರಘು, ಶಿವಣ್ಣ ತಮ್ಮಯ್ಯ, ಬಸವರಾಜ್‌ ಶೆಟ್ಟಿ, ರಾಜ ಶೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next