ತೀರ್ಥಹಳ್ಳಿ : ರಸ್ತೆ ಬದಿಯಲ್ಲಿ ಇರುವ ಅಕೇಶಿಯ ಮರ ಕಡಿಯಲು ಯಾರ ಅರ್ಜಿಯ ಅವಶ್ಯಕತೆ ಇಲ್ಲ, ಅದನ್ನು ಕೂಡಲೇ ಕಡಿದು ತೆರವುಗೊಳಿಸಬೇಕು ಇಲ್ಲದಿದ್ದರೆ ನಾನೇ ಕಿತ್ತು ಹಾಕುವ ಆಂದೋಲನ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶನಿವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅತಿವೃಷ್ಟಿಯಿಂದ ಆದ ಹಾನಿಗಳ ಕುರಿತಾಗಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿ ರಸ್ತೆ ಬದಿಯಲ್ಲಿ ಅಕೇಶಿಯ ಗಿಡಗಳನ್ನು ನೆಟ್ಟರೆ ನಾನೇ ಕಿತ್ತು ಹಾಕುತ್ತೇನೆ, ಶುಕ್ರವಾರ ತಡ ರಾತ್ರಿ ರಾಮಪ್ಪ ಎಂಬ ಯುವಕ ಹಾದಿಗಲ್ಲು ಬಳಿ ಹಾಗೆ ದೇಮ್ಲಾಪುರ ಬಳಿ ಎರಡು ತಿಂಗಳ ಹಿಂದೆ ಒಬ್ಬರು ಅಕೇಶಿಯ ಮರ ಬಿದ್ದು ಮೃತಪಟ್ಟಿದ್ದಾರೆ. ಮರ ಬೇಡ ಎನ್ನುವ ವಿಚಾರವನ್ನು ಎರಡು ಮೂರು ವರ್ಷದಿಂದ ಹೇಳುತ್ತಾ ಬರುತ್ತಿದ್ದೇನೆ ನೀವು ಯಾರು ಗಮನ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಮಪ್ಪ ಎಂಬ ಯುವಕನ ಪ್ರಕರಣದಲ್ಲಿ ಈಗಾಗಲೇ ಡಿವೈಎಸ್’ಪಿ ಗೆ ಹೇಳಿದ್ದೇನೆ, ಆರ್’ಎಫ್’ಓ ಮೇಲೆ ಮರ್ಡರ್ ಕೇಸ್ ರಿಜಿಸ್ಟರ್ ಮಾಡಲು, ಖಾಸಗಿಯವರು ಮರ ಕಡಿಯಲು ಸ್ವಲ್ಪ ದುಡ್ಡು ಕೊಟ್ಟು ಅವರೇ ಫೈಲ್ ತೆಗೆದುಕೊಂಡು ಹೋಗಿ ನಿಮಗೆ ಕಷ್ಟ ಕೊಡುವುದಿಲ್ಲ, ಹಾಗಾಗಿ ಅಲ್ಲಿನ ಕ್ಲರ್ಕ್ ನಿಂದ ಹಿಡಿದು ಪ್ರತಿಯೊಬ್ಬರು ಫೈಲ್ ಮೂವ್ ಆಗಬೇಕು ಎಂದರೆ ಏನಾದರು ಬರಬೇಕು, ನಿಮ್ಮ ಮನೆಯಲ್ಲೇ ಯಾರಾದರೂ ಸತ್ತರೆ ನೋವಾಗಬಹುದು ಬೇರೆಯವರ ಮನೆಯವರು ಸತ್ತರೆ ನಿಮಗೇನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯಾವುದೇ ಇಲಾಖೆ ಆಗಿರಲಿ, ರಸ್ತೆ ಬದಿ ಇರುವ ಅಕೇಶಿಯ ಮರವನ್ನು ಹತ್ತು ದಿನದ ಒಳಗೆ ಕಡಿದು ತೆಗೆಯಬೇಕು, ಬೇರೆ ಕಡೆ ಮರವನ್ನು ಸಾಗಾಟ ಮಾಡದಿದ್ದರೂ ಪರವಾಗಿಲ್ಲ ಆದರೆ ಕಡಿಯಬೇಕು ಇದು ಕಡ್ಡಾಯವಾಗಿ ಆಗಬೇಕು, ಇದನ್ನು ನಿರ್ಣಯ ಮಾಡಿ ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣ ಅದಿಕಾರಿಗಳಾದ ಶೈಲಾ ಅವರಿಗೆ ತಾಕೀತು ಮಾಡಿದರು.
ಇದನ್ನೂ ಓದಿ: Hostelನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ.. ನದಿ ದಂಡೆಯಲ್ಲಿ ಬ್ಯಾಗ್, ಮೊಬೈಲ್ ಪತ್ತೆ