Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಆರೋಗ್ಯಕ್ಕೆ ಪೂರಕ ಹಾಗೂ ಔಷಧೀಯ ಗುಣಗಳು ಸಹ ಇದೆ ಎಂಬುದನ್ನು ಸಮರ್ಥವಾಗಿ ವಿಷಯ ಮಂಡಿಸಲು ವಕೀಲರಿಗೆ ಕೋರಲಾಗುವುದು. ಪ್ರಸ್ತುತ ರಾಮಯ್ಯ ಮೆಡಿಕಲ್ ಸೈನ್ಸ್ ನಲ್ಲಿ ಅಡಿಕೆ ಆರೋಗ್ಯಕ್ಕೆ ಪೂರಕ ಎನ್ನುವ ಸಂಶೋಧನೆ ಪ್ರಗತಿಯಲ್ಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್‍ನಲ್ಲಿರುವ ಕೇಸ್ ಮುಂದಕ್ಕೆ ಹಾಕಲು ಕ್ರಮ ಕೈಗೊಳ್ಳುವಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
Related Articles
Advertisement
ಅಡಿಕೆ ಬೆಳೆಗಾರರ ಹಿತದೃಷ್ಠಿಯಿಂದ ರಾಜ್ಯ ಸರ್ಕಾರವು ರಾಜ್ಯ ಅಡಿಕೆ ಕಾರ್ಯಪಡೆ ರಚನೆ ಮಾಡಿದೆ. ಅಡಿಕೆ ಸಹಕಾರ ಸಂಸ್ಥೆಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಕೊವಿಡ್ ಕಾರಣದಿಂದ ಕಾರ್ಯಪಡೆಯ ಕಾರ್ಯ ನಿಧಾನಗತಿಯಲ್ಲಿ ಸಾಗಿತ್ತು. ಬೆಂಗಳೂರಿನಲ್ಲಿಯೂ ಎರಡು ಸಭೆ ನಡೆಸಲಾಗಿದೆ. 3.59 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅಡಿಕೆ ಬೆಳೆಗೆ ಸಂಬಂಧಿಸಿ ತರಬೇತಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ಕಾರ್ಯಪಡೆಯು ಉದ್ದೇಶಿಸಿದೆ. ಅಡಿಕೆ ಬೆಳೆ ಮೇಲೆ ಅನೇಕ ಪ್ರಯೋಗಗಳು ನಡೆಯುತ್ತಿವೆ. ಗುರುಮೂರ್ತಿ ಹೆಗಡೆ ಸೇರಿದಂತೆ ಅನೇಕರು ಅಡಿಕೆ ಮೇಲೆ ಪ್ರಯೋಗ ಮಾಡುವ ಜತೆಯಲ್ಲಿ ಆರೋಗ್ಯಕ್ಕೆ ಪೂರಕ ಮತ್ತು ಅಡಿಕೆ ಬೆಳೆ ಹಾಗೂ ಉಪಉತ್ಪನ್ನಗಳಿಂದ ಅನೇಕ ಉದ್ಯಮ ನಡೆಸಬಹುದು ಎಂಬುದನ್ನು ನಿರೂಪಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ರಾಜ್ಯ ಅಡಿಕೆ ಕಾರ್ಯಪಡೆ ಸಭೆ ನಡೆಯಿತು. ಶಾಸಕ ಹರತಾಳು ಹಾಲಪ್ಪ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಇದ್ದರು.