ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ-ಬನ್ನಿಕುಪ್ಪೆ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಶಾಸಕಿ ಅನಿತಾಕುಮಾರಸ್ವಾಮಿ ಪ್ರವಾಸ ಕೈಗೊಂಡು ಅಹವಾಲು ಸ್ವೀಕರಿಸಿದರು.
ಚನ್ನಮಾನಹಳ್ಳಿ, ಚಿಕ್ಕೇನಹಳ್ಳಿ, ಕುಂಭಾಪುರ, ಕುಂಬಾಪುರಕಾಲೋನಿ,ಅಂಜನಾಪುರ,ವಿಭೂತಿಕೆರೆ, ದೇವರದೊಡ್ಡಿ, ಹೊಸೂರುದೊಡ್ಡಿ, ಬನ್ನಿಕುಪ್ಪೆ, ಲಕ್ಕೋಜನಹಳ್ಳಿ, ನಂಜಾಪುರ, ಹೊಸದೊಡ್ಡಿ, ಕಾಡನ ಕುಪ್ಪೆ, ಲಕ್ಕಪ್ಪನಹಳ್ಳಿ ಸೇರಿದಂತೆ ಗ್ರಾಪಂ ವ್ಯಾಪ್ತಿಯಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ಆಹಾರ ಕಿಟ್‌ವಿತರಣೆ: ಲಕ್ಕೋಜನಹಳ್ಳಿ ಗ್ರಾಮದಲ್ಲಿ ಕಾರ್ಮಿಕ ಇಲಾಖೆ ಪರವಾಗಿ ಕಟ್ಟಡ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿದರು.
ಜನರಿಂದ ಅಹವಾಲು ಸ್ವೀಕಾರ: ಪ್ರಮುಖವಾಗಿ ರಸ್ತೆ ಸಮಸ್ಯೆ, ಇ-ಖಾತೆ ಸಮಸ್ಯೆ, ವೃದ್ಧಾಪ್ಯ ವೇತನಸಿಗದಿರುವ ಬಗ್ಗೆ ಗ್ರಾಮಸ್ಥರು ಹೇಳಿ ಕೊಂಡರು. ಅಂಜನಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ, ವಿಭೂತಿ ಕೆರೆ ಗ್ರಾಮದಲ್ಲಿ ಕೊಳದಕಟ್ಟೆ ಹತ್ತಿರ ತಡೆಗೋಡೆನಿರ್ಮಾಣ, ಚರಂಡಿ ಸಮಸ್ಯೆ ಬಗ್ಗೆ ಜನರು ಹೇಳಿಕೊಂಡರು. ದೇವರದೊಡ್ಡಿ ಗ್ರಾಮದಲ್ಲಿ ದಿವ್ಯಾಂಗ ವ್ಯಕ್ತಿಯೊಬ್ಬ ತನಗೆ ತ್ರಿಚಕ್ರ ವಾಹನ ಕೊಡಿಸುವಂತೆ ಮನವಿ ಮಾಡಿದ. ಗ್ರಾಮಸ್ಥರ ಮನವಿಗಳನ್ನು ಆಲಿಸಿದ ಶಾಸಕರು ಸ್ಥಳದಲ್ಲೇ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಸಮಸ್ಯೆ ಬಗೆಹರಿಸುವಂತೆ ಮತ್ತು ಸೌಲಭ್ಯ ಕೊಡಿಸುವಂತೆ ಸೂಚನೆ ನೀಡಿದರು.
ಜನರ ಕಷ್ಟಗಳಿಗೆ ಸ್ಪಂದಿಸುವೆ: ಕೆಲವು ಗ್ರಾಮಗಳಲ್ಲಿ ರಸ್ತೆ ಪಕ್ಕೆ ನಿಂತಿದ್ದ ಮಹಿಳೆಯರು, ವೃದ್ಧರನ್ನು ಶಾಸ ಕರೇ ಖುದ್ದು ಮಾತನಾಡಿದರು. ಲಕ್ಕೋಜನಹಳ್ಳಿ ಗ್ರಾಮದಲ್ಲಿ ಅಲ್ಲಿನ ನಾಗರೀಕರನ್ನು ಉದ್ದೇಶಿಸಿಮಾತ ನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ತಮ್ಮ ಧ್ಯೇಯವಾಗಿದೆ. ತಾವು ಶಾಸಕಿಯಾದ ನಂತರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಕಾಮಗಾರಿಗಳು ನಡೆದಿರುವುದಾಗಿ ತಿಳಿಸಿ, ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ರಾಜ್ಯ ಜೆಡಿಎಸ್ ವಕ್ತಾರ ಬಿ. ಉಮೇಶ್, ಎಪಿಎಂಸಿಮಾಜಿ ಅಧ್ಯಕ್ಷ ದೊರೆಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ. ರಾಜಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವಥ್, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಪಾಂಡುರಂಗ, ಪ್ರಮುಖರಾದ ತುಂಬೇನಹಳ್ಳಿ ಪ್ರಕಾಶ್, ಮಹೇಶ್, ನಾಗರಾಜು, ಚಲುವರಾಜು, ಚಂದ್ರಗಿರಿ, ನವೀನ್, ಪುಟ್ಟಸ್ವಾಮಿ, ಆರ್. ಮೂರ್ತಿನಾಯಕ್, ಭಾಸ್ಕರ್, ರೇವಣ್ಣ, ತಾಪಂ ಇಓ ಶಿವಕುಮಾರ್, ಉಪ ತಹಶೀಲ್ದಾರ್ ವಿಲಿಯಂ, ಪಿಡಿಒ ಬೆಟ್ಟಸ್ವಾಮಿಗೌಡ,ಜಯಶಂಕರ್, ರಾಜಸ್ವ ನಿರೀಕ್ಷಕ ಬಸವರಾಜು, ಜೆಇ ದೊಡ್ಡರಾಮಯ್ಯ ಇದ್ದರು.