Advertisement
ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಸ್ಪತ್ರೆ, ಪಾಲಿಕೆ, ದೂಡಾ ಹಾಗೂ ಸ್ಮಾರ್ಟ್‌ಸಿಟಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಹಾವೇರಿಯಿಂದ ನಿತ್ಯ ನೂರಾರು ಜನರು ಬರುತ್ತಿರುತ್ತಾರೆ. ಆಸ್ಪತ್ರೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದಿದ್ದರೆ ಸಾರ್ವಜನಿಕರು ಜನಪ್ರತಿನಿಧಿಗಳ ಕಾರ್ಯವೈಖರಿ ಬಗ್ಗೆ ಮಾತನಾಡುವುದಿಲ್ಲವೆ? ಎಂದು ಪ್ರಶ್ನಿಸಿದರು.
Related Articles
Advertisement
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸರಿಯಾಗಿ ಕಾರ್ಯ ನಿರ್ವಹಿಸದ ಸಿಬ್ಬಂದಿಗಳನ್ನು ಮೊದಲು ಕೆಲಸದಿಂದ ತೆಗೆದುಹಾಕಿ. ಆಸ್ಪತ್ರೆ ಒಳ ಆವರಣದಲ್ಲಿರುವ ಮರಗಳ ಪರಿಶೀಲನೆಗೆ ಅರಣ್ಯ ಇಲಾಖೆಗೆ ತಕ್ಷಣ ಪತ್ರ ಬರೆದು, ಕಟ್ಟಡಕ್ಕೆ ಧಕ್ಕೆಯಾಗುವ ಮರಗಳನ್ನು ತೆಗೆದರೆ ಅಲ್ಲಿ ಯಾವ ರೀತಿ ಬದಲಾವಣೆ ಮಾಡಬಹುದೆಂಬುದರ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತನ್ನಿ. ಮುಂದಿನ 15 ದಿನಗಳಲ್ಲಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು.
ಹಲವೆಡೆ ಕಸದ ರಾಶಿ: ನಗರದಲ್ಲಿ ಕುಡಿಯುವ ನೀರು ಪೂರೈಕೆ ಕ್ರಮ, ರಾಜ ಕಾಲುವೆ ಸ್ವಚ್ಛತೆ, 2019-20ನೇ ಸಾಲಿನಲ್ಲಿ ಪಾಲಿಕೆಯಿಂದ ತಯಾರಿಸಲಾದ ಕಾಮಗಾರಿಗಳ ಕ್ರಿಯಾಯೋಜನೆಗಳ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತ ವೀರೇಂದ್ರ ಕುಂದುಗೋಳ ಮಾಹಿತಿ ನೀಡಿದಾಗ, ಮಾತನಾಡಿದ ಶಾಸಕರು, ನಗರದಲ್ಲಿ ಕುಡಿಯುವ ನೀರಿಗಾಗಿ ಕೊರೆಸಲಾದ ಕೊಳವೆ ಬಾವಿಗಳಿಗೆ ಇನ್ನೂ ಮೋಟಾರ್ ಪಂಪ್ ಅಳವಡಿಸಿಲ್ಲ. ನಗರದ ಬಹುತೇಕ ಕಡೆಗಳಲ್ಲಿ ಬೀದಿ ದೀಪದ ಸಮಸ್ಯೆ ಹೆಚ್ಚಿದೆ. ಹಲವೆಡೆ ಕಸ ನಿರ್ವಹಣೆಗೆ ಕಂಟೇನರ್‌ಗಳಿಲ್ಲದೆ, ಕಸದ ರಾಶಿ ಬಿದ್ದಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕೊರೆಸಲಾದ 6 ಕೊಳವೆ ಬಾವಿಗಳಿಗೆ ಶೀಘ್ರವೇ ಮೋಟಾರ್ ಅಳವಡಿಸಲಾಗುವುದು. ಮತ್ತೆ 6 ನೂತನ ಕೊಳೆವೆ ಬಾವಿಗಳನ್ನು ಕೊರೆಯಲು ಈಗಾಗಲೇ ಕ್ರಮ ವಹಿಸಲಾಗಿದೆ. ಕಸದ ಸಮಸ್ಯೆ ನಿರ್ವಹಣೆಗೆ ನಗರಗಳಲ್ಲಿ ಡೋರ್ ಟು ಡೋರ್ ಮೂಲಕವೇ ಕಸ ಸಂಗ್ರಹಿಸಲು ಹಾಗೂ ಕಂಟೇನರ್‌ಗಳನ್ನು ಎಲ್ಲಿಯೂ ಇಡದಂತೆ ಆದೇಶಿಸಲಾಗಿದೆ. ಎಲ್ಲಾ ಬೀದಿಗಳಲ್ಲೂ ಎಲ್ಇಡಿ ಲೈಟ್ ಅಳವಡಿಸಲು ಸೂಚಿಸಲಾಗಿದ್ದು, ಇದುವರೆಗೂ ಲೈಟ್‌ಗಳು ಸರಬರಾಜಾಗದಿರುವುದರಿಂದ ಬೀದಿ ದೀಪದ ಸಮಸ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.
ಆಗ, ಜಿಲ್ಲಾಧಿಕಾರಿ ಶಿವಮೂರ್ತಿ, ನಗರದಲ್ಲಿ ನೀರು ಪೂರೈಕೆಗೆ ಅಗತ್ಯ ಹಣವಿದ್ದು, ಅಧಿಕಾರಿಗಳು ವಿಳಂಬ ಮಾಡುತ್ತಿರುವುದೇಕೆ? ಅವಶ್ಯವಿರುವ ಕಡೆ ಮೋಟಾರ್ ಪಂಪ್‌ಗ್ಳ ವ್ಯವಸ್ಥೆ ಕಲ್ಪಿಸಬೇಕು. ನಗರದಲ್ಲಿ ಬೀದಿ ದೀಪ ಅವಶ್ಯಕತೆ ಕುರಿತು ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ದೂಡಾ ಆಯುಕ್ತ ಆದಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್, ಸ್ಮಾರ್ಟ್ ಸಿಟಿ ಯೋಜನೆಯ ಅಭಿಯಂತರರು, ಇತರೆ ಅಧಿಕಾರಿಗಳು ಭಾಗವಹಿಸಿದ್ದರು.