Advertisement

ಬಾಲಕೃಷ್ಣ ಬುಲ್ಡೋಜರ್‌ ಪಕ್ಷ ಕಟ್ಟಿಕೊಳ್ಳಲಿ

04:19 PM May 31, 2022 | Team Udayavani |

ಮಾಗಡಿ: ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಬುಲ್ಡೋಜರ್‌ ಪಕ್ಷ ಕಟ್ಟಿಕೊಳ್ಳಲಿ, ನಮ್ಮ ತಕರಾರೇನುಇಲ್ಲ ಎಂದು ಮಾಜಿ ಶಾಸಕರ ವಿರುದ್ಧ ಶಾಸಕ ಎ. ಮಂಜುನಾಥ್‌ ವ್ಯಂಗ್ಯವಾಡಿದರು.

Advertisement

ಪಟ್ಟಣದ ಪುರಸಭೆಯ ಶಾಸಕರ ಕಚೇರಿಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಮತ್ತು ಅವರತಂದೆ ದಿ.ಚೆನ್ನಪ್ಪ ಅವರು ಸಹ ಎಲ್ಲ ಪಕ್ಷದಲ್ಲಿಯೂಅಧಿಕಾರ ಅನುಭವಿಸಿದ್ದಾಗಿದೆ. ಎಚ್‌.ಸಿ.ಬಾಲಕೃಷ್ಣಅವರು ಮೊದಲು ಬಿಜೆಪಿ ಸೇರಿದರು. ಜೆಡಿಎಸ್‌ಪಕ್ಷವೂ ಆಯಿತು. ಈಗ ಕಾಂಗ್ರೆಸ್‌ನಲ್ಲಿದ್ದಾರೆ.ಪಕ್ಷಾಂತರ ಮಾಡಲು ಈಗ ಅವರಿಗೆ ಬೇರೆ ಪಕ್ಷವೇಇಲ್ಲ, ಹೀಗಾಗಿ ಅವರೇ ಬುಲ್ಡೋಜರ್‌ ಪಕ್ಷವನ್ನುಕಟ್ಟಿಕೊಂಡು ರಾಜಕೀಯ ಮಾಡಲಿ ನಾವ್ಯಾರು ಪ್ರಶ್ನಿಸುವುದಿಲ್ಲ ಎಂದು ಹೇಳಿದರು.

10 ಕೋಟಿ ಮಾರ್ಕೆಟಿಂಗ್‌ ಮಾಜಿ ಶಾಸಕ: ನನ್ನ ರಾಜಕೀಯ ಗುರುಗಳು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಪೋಟೊ ನನ್ನ ಕಚೇರಿಯಲ್ಲಿ ನಾನುಹಾಕಿಕೊಂಡರೆ ತಪ್ಪು. ಇವರು ಜೆಡಿಎಸ್‌ನಲ್ಲಿದ್ದು,ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆಓಟುಹಾಕಿದ್ದು ಸರಿಯೇ ಎಂದು ಪ್ರಶ್ನಿಸಿದರು.

ನನ್ನನ್ನು ಪ್ರಶ್ನಿಸುವ ಮಾಜಿ ಶಾಸಕರು, ಜೆಡಿಎಸ್‌ನಲ್ಲಿದ್ದುಕೊಂಡು 2018ರಲ್ಲಿ ನಡೆದ ರಾಜ್ಯ ಸಭಾಚುನಾವಣೆಯಲ್ಲಿ ಏಕೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆಮತ ಹಾಕಿ 10 ಕೋಟಿ ಹಣಕ್ಕೆ ತಲೆ ಮಾರಿಕೊಂಡಿದ್ದು,ಜಗಜಾಹಿರಾತಾಗಿದೆ ಎಂದು ಲೇವಡಿ ಮಾಡಿದಅವರು, ಹಿರಿಯ ರಾಜಕೀಯ ಮುತ್ಸದ್ಧಿ, ತಂದೆಸಮಾನರು ಹೀಗಾಗಿ ನಾನು ಅವರು ಎಲ್ಲೇ ಸಿಕ್ಕಿದರೂಕಾಲಿಗೆ ಬಿದ್ದು, ಆಶೀರ್ವಾದ ಪಡೆಯುವುದು ನಮ್ಮಸಂಸ್ಕೃತಿ. ಇದನ್ನು ಪ್ರಶ್ನೆಸುವ ಮಾಜಿ ಶಾಸಕರರಾಜಕೀಯ ವ್ಯಭಿಚಾರ ಏನೆಂದು ಜನತೆಗೆ ಗೊತ್ತಿದೆ ಎಂದು ಹೇಳಿದರು.

ಮಾಜಿ ಶಾಸಕರ ಪತ್ರಕ್ಕೆ ಕಿಮ್ಮತ್ತಿಲ್ಲ: ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅವರಿಗೆ ಎಂಎಲ್‌ಸಿ ಸ್ಥಾನತಪ್ಪಿಸಲು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರುನನ್ನೊಂದಿಗೆ ಆತ್ಮೀಯವಾಗಿದ್ದಾರೆ ಎಂದು ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯಅವರಿಗೆ ಪತ್ರ ಬರೆದು ಅವರಿಗೆ ದ್ರೋಹ ಬಗೆದಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಪ್ರತಿಫ‌ಲ ಊಟ ಮಾಡುತ್ತಾರೆ. ಮಾಜಿ ಶಾಸಕರು ಬರೆದಿರುವ ಪತ್ರಸೋನಿಯಾ ಗಾಂಧಿಗೂ ಹೋಗಿಲ್ಲ, ಇಟಲಿಗೂಹೋಗಿಲ್ಲ, ಇವರು ಬರೆದ ಪತ್ರಕ್ಕೆ ಕಿಮ್ಮತ್ತಿಲ್ಲ ಎಂದು ಶಾಸಕರು ಜರಿದ ಅವರು, ನಾನು ತಾಲೂಕಿನಸರ್ವಾಂಗೀಣ ಅಭಿವೃದ್ಧಿಗಾಗಿ ಶಾಸಕನಾಗಿದ್ದೇನೆ.ಅವರಂತೆ ಮಾರ್ಕೆಟಿಂಗ್‌ ಶಾಸಕನಲ್ಲ. ಪ್ರಥಮವಾಗಿಶಾಸನಾದ ಮೇಲೆ 5 ವರ್ಷದಲ್ಲಿ ಏನೇಲ್ಲ ಅಭಿವೃದ್ಧಿ ಮಾಡಿದ್ದೇನೆ ಎಂದು ಚುನಾವಣೆ ವೇಳೆ ಅಂಕಿ-ಅಂಶಸಮೇತ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ. ಅವರುಪ್ರಥಮ ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದ್ದೇನೆಎಂದು ದಾಖಲೆ ನೀಡಲಿ ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ವಿರುದ್ಧ ಶಾಸಕರು ಟೀಕಾ ಪ್ರಹಾರ ನಡೆಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಅನಿಲ್‌ ಕುಮಾರ್‌, ಎಂ.ಎನ್‌.ಮಂಜುನಾಥ್‌, ಮಾಜಿಉಪಾಧ್ಯಕ್ಷ ಎಂ.ಬಿ.ಮಹೇಶ್‌, ಜಿ.ರೂಪೇಶ್‌ಕುಮಾರ್‌, ಜೆಡಿಎಸ್‌ ಮುಖಂಡರಾದ ಜುಟ್ಟನಹಳ್ಳಿಜಯರಾಮ್‌, ಬಿ.ಆರ್‌.ಗುಡ್ಡೇಗೌಡ, ಚಿಕ್ಕಣ್ಣ, ಸೋಮಶೇಖರ್‌, ಚೆನ್ನಕೇಶವಸ್ವಾಮಿ, ಕುಮಾರ್‌ ಇತರರು ಹಾಜರಿದ್ದರು.

ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅವರಿಗೆ ಎಂಎಲ್‌ಸಿ ಸ್ಥಾನ ತಪ್ಪಿಸಲು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ನನ್ನೊಂದಿಗೆ ಆತ್ಮೀಯವಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌,ಸಿದ್ದರಾಮಯ್ಯಗೆ ಪತ್ರ ಬರೆದು ಅವರಿಗೆ ದ್ರೋಹ ಬಗೆದಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಪ್ರತಿಫ‌ಲ ಊಟಮಾಡುತ್ತಾರೆ. ಮಾಜಿ ಶಾಸಕರು ಬರೆದಪತ್ರ ಸೋನಿಯಾ ಗಾಂಧಿಗೂ ಹೋಗಿಲ್ಲ,ಇಟಲಿಗೂ ಹೋಗಿಲ್ಲ, ಇವರು ಬರೆದ ಪತ್ರಕ್ಕೆ ಕಿಮ್ಮತ್ತಿಲ್ಲ. -ಎ.ಮಂಜುನಾಥ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next