Advertisement

ನನ್ನ ಸೋಲಿಗೆ ಇಂದಿರಾ ಕಾರಣ

06:30 AM Mar 31, 2018 | Team Udayavani |

ವಕೀಲರೂ ಆಗಿರುವ ಎಂ.ಕೆ. ವಿಜಯ ಕುಮಾರ್‌ 1972ರಿಂದ ರಾಜಕೀಯದಲ್ಲಿ ತೊಡಗಿಕೊಂಡವರು. ಜನತಾ ಪಾರ್ಟಿ ಹಾಗೂ ಬಿಜೆಪಿ ಸೇರಿದಂತೆ ನಾಲ್ಕು ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅವರು ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Advertisement

ರಾಜಕೀಯದಲ್ಲಾದ ಬದಲಾವಣೆಗಳು?
    ಕೆಲವು ವರ್ಷಗಳ ಹಿಂದೆ ವಕೀಲರು, ವೈದ್ಯರು, ಪ್ರೊಫೆಸರ್‌ಗಳು -ಹೀಗೆ ವಿವಿಧ ವೃತ್ತಿಪರರೇ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ರಾಜಕೀಯ ಇಂದು ಕಸುಬಾಗಿದೆ. ಹಿಂದೆ ಖರ್ಚು ಕಡಿಮೆ ಇತ್ತು. ಈಗ ನೀರಿನಂತೆ ಹಣ ವೆಚ್ಚ ಮಾಡಬೇಕಾಗುತ್ತದೆ.

ನಿಮ್ಮ ಸೋಲಿಗೆ ಕಾರಣ?
    ಅಂದು ಇಂದಿರಾ ಗಾಂಧಿ ಹೆಸರು ದೇಶದಲ್ಲಿ ಜೋರಾಗಿತ್ತು. ನನ್ನ ಸೋಲಿಗೆ ಅವರೇ ಕಾರಣ. ಭೂಮಸೂದೆ ಉಳಿಯುವುದಿಲ್ಲ ಎನ್ನುವ ಭಾವನೆ ಜನರಲ್ಲಿತ್ತು. ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷ ಬಂದರೆ ಭೂಮಾಲಕನಿಗೆ ಭೂಮಿ ವಾಪಸ್‌ ನೀಡಬೇಕಾಗುತ್ತದೆ ಎನ್ನುವ ಭ್ರಮೆಯನ್ನು ಜನರಲ್ಲಿ ಹುಟ್ಟಿಸಿದ್ದರು. ಅವಿದ್ಯಾವಂತರೂ ಆ ಕಾಲದಲ್ಲಿ ಹೆಚ್ಚಾಗಿದ್ದರು. ಮೊಲಿ ಜಯ ಗಳಿಸಿರುವುದೂ ಕೂಡ ಇಂದಿರಾ ಹೆಸರಿನಿಂದ. ಶಿವರಾಮ ಕಾರಂತರು, ಪ್ರೊ| ಅಡಿಗರಂತಹ ದಿಗ್ಗಜರನ್ನೇ ಜನ ಸೋಲಿಸಿದ್ದಾರೆ.

ಈ ಬಾರಿ ಚುನಾವಣೆ ಬಗ್ಗೆ?
    ರಾಜ್ಯದಲ್ಲಿ ಬಿಜೆಪಿ ಬರಲಿದೆ. ಕಾಂಗ್ರೆಸ್‌ನಂತಹ ಕೆಟ್ಟ ಸರಕಾರ ಬೇಡ ಎನ್ನುವ ಭಾವನೆ ಜನರಿಗೆ ಬಂದಿದೆ. ಸಣ್ಣ ಕಚೇರಿಗಳಲ್ಲೂ ಭ್ರಷ್ಟಾಚಾರ ತುಂಬಿದೆ. ಲೋಕಾಯುಕ್ತರಿಗೇ ಚೂರಿ ಹಾಕುವ ಸಂದರ್ಭ ಬಂದಿದೆ ಎಂದಾದರೆ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂದು ಆಲೋಚಿಸಬೇಕು. ಪ್ರಾಮಾಣಿಕ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಅವರಿಗೆ ದೇಶ, ರಾಜ್ಯ ಯಾವುದೂ ಬೇಡ. ಪ್ರಜಾಪ್ರಭುತ್ವವೇ ಇಲ್ಲದ ಪಕ್ಷ ಅದು.

ದೇಶದ ರಾಜಕೀಯದ ಬಗ್ಗೆ?
     ದೇಶದ ರಾಜಕೀಯದಲ್ಲಿ ಬದಲಾವಣೆಯಾಗುತ್ತಿದೆ. ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ತಳಮಟ್ಟದಿಂದ ಅಭಿವೃದ್ಧಿಯಾಗುತ್ತಿದೆ. ವಂಶಾಡಳಿತ ರಾಜಕೀಯ ನಶಿಸಿದೆ.

Advertisement

ಕಾರ್ಕಳ ಕ್ಷೇತ್ರದಲ್ಲಿ ಈ ಬಾರಿ?
     ಬಿಜೆಪಿ ಜಯಗಳಿಸಲಿದೆ. ಶಾಸಕರು ಪ್ರತೀ ಹಳ್ಳಿಯಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಮಾದರಿ ಕೆಲಸ ನಡೆದಿದೆ. ಜನರಿಗೆ ಶಾಸಕರ ಮೇಲೆ ಪ್ರೀತಿ, ಭರವಸೆ ಇದೆ. ಯಾವುದೇ ಅನರ್ಹತೆಯ ಕೆಲಸ ಮಾಡಿಲ್ಲ.

– ಜಿವೇಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next