Advertisement

ಹಿಂದಿ ವಿಚಾರದಲ್ಲಿ ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಸ್ಟಾಲಿನ್‌ ಪತ್ರ

07:08 PM Oct 16, 2022 | Team Udayavani |

ಚೆನ್ನೈ: ಕೆಲವು ಕೆಲಸಗಳಿಗೆ ಹಿಂದಿಯನ್ನು ಕಡ್ಡಾಯ ಮಾಡಬೇಕೆಂದು ಸಂಸದೀಯ ಸಮಿತಿ ರಾಷ್ಟ್ರಪತಿ ಅವರಿಗೆ ಸೂಚಿಸಿದೆ ಎನ್ನುವ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

Advertisement

“ಈ ರೀತಿಯಲ್ಲಿ ಹಿಂದಿ ಹೇರಿಕೆ ಮಾಡುವುದು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ. 22 ಭಾಷೆಗಳಿಗೆ ಸಂವಿಧಾನದಲ್ಲಿ ಸ್ಥಾನವಿದೆ. ದೇಶದಲ್ಲಿ ಹಿಂದಿ ಮಾತನಾಡುವವರಿಗಿಂತ ಬೇರೆ ಭಾಷೆಗಳನ್ನು ಮಾತನಾಡುವವರ ಸಂಖ್ಯೆಯೇ ಹೆಚ್ಚಿದೆ.

ಎಲ್ಲ ಭಾಷೆಗಳಿಗೂ ಸಮಾನವಾದ ಹಕ್ಕಿದ್ದು, ಅವುಗಳಿಗೆ ಗೌರವವನ್ನು ನೀವು ನೀಡುತ್ತೀರಿ ಎನ್ನುವ ನಂಬಿಕೆಯಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next