Advertisement

MJC College ಛಲದಿಂದ ಮುನ್ನುಗ್ಗಿದರೆ ಯಶಸ್ಸು ಸುಲಭ: ಡಾ| ಗಿರಿಜಾ

11:27 PM Dec 27, 2023 | Team Udayavani |

ಮಣಿಪಾಲ: ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಮಣಿಪಾಲ ಜೂನಿಯರ್‌ ಕಾಲೇಜಿಗೆ ಸಲ್ಲುತ್ತದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ ಎಂದು ಸೋನಿಯಾ ಕ್ಲಿನಿಕ್‌ನ ಪ್ರಸೂತಿ ತಜ್ಞೆ ಡಾ| ಗಿರಿಜಾ ಹೇಳಿದರು.

Advertisement

ಮಣಿಪಾಲ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಸಂಭ್ರಮ “ಅಮೃತ ಪರ್ವ’ದ ಅಂಗವಾಗಿ ಸಾಂಸ್ಕೃತಿಕ ಹಬ್ಬ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಮಗೆ ಸಿಕ್ಕ ಅವಕಾಶಗಳನ್ನು ಬಿಡದೆ ಸದುಪಯೋಗ ಪಡಿಸಿಕೊಂಡು ಮುನ್ನುಗ್ಗಿದಾಗ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಿದೆ. ಇದರಿಂದ ಆತ್ಮವಿಶ್ವಾಸ ಬೆಳೆದು ಯಶಸ್ಸನ್ನು ಗಳಿಸಬಹುದು ಎಂದರು.

ಎಂಐಟಿ ಜಂಟಿ ನಿರ್ದೇಶಕ ಡಾ| ಸೋಮಶೇಖರ ಭಟ್‌ ಅವರು ಮಾತನಾಡಿ ಸಂಸ್ಥೆಯು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಮಣಿಪಾಲ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಕಾರಂತ ಅಧ್ಯಕ್ಷತೆ ವಹಿಸಿ, ಶುಭಹಾರೈಸಿದರು.

Advertisement

ಉದ್ಯಮಿಗಳಾದ ವರುಣ್‌ ಹೆಗ್ಡೆ, ರೋಶನ್‌ ನಾಯಕ್‌, ಹಳೇ ವಿದ್ಯಾರ್ಥಿ ಸತ್ಯೇಂದ್ರ ಪೈ ಕಟಪಾಡಿ, ಹಳೇ ವಿದ್ಯಾರ್ಥಿ ಸಂಘದ ಆಧ್ಯಕ್ಷ ದೀಪಕ್‌ ದಿವಾಕರ ಕಿಣಿ, ಕಾರ್ಯದರ್ಶಿ ಜಯರಾಮ ಶೆಟ್ಟಿಗಾರ್‌ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ರೂಪಾ ಎಲ್‌. ಭಟ್‌ ಹಾಗೂ ಉಪಪ್ರಾಂಶುಪಾಲೆ ಅನಿತಾ ಮಲ್ಯ ಎಚ್‌. ವರದಿ ವಾಚಿಸಿದರು. ಹಿರಿಯ ಉಪನ್ಯಾಸಕ ಉಮಾಪತಿ ಸ್ವಾಗತಿಸಿ, ಪ್ರೌಢಶಾಲಾ ಶಿಕ್ಷಕಿ ಶಕಿಲಾ, ಅಧ್ಯಾಪಕ ಸಚ್ಚಿದಾನಂದ ಪ್ರಭು ನಿರೂಪಿಸಿದರು.

ಸಾಂಸ್ಕೃತಿಕ, ಕ್ರೀಡಾಸ್ಪರ್ಧೆ ಹಾಗೂ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ನವೀಕೃತ ಕೊಠಡಿ ಉದ್ಘಾಟನೆ
ಬೆಳಗ್ಗೆ ಕಾಲೇಜಿನ ಸಂಚಾಲಕ ಪ್ರಕಾಶ್‌ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಹಳೇ ವಿದ್ಯಾರ್ಥಿ ದಾನಿಗಳಿಂದ ನವೀಕೃತ ಅಮೃತ ಮಹೋತ್ಸವ ರಂಗಮಂಟಪ ಮತ್ತು ನವೀಕೃತ ತರಗತಿ ಕೊಠಡಿಗಳ ಉದ್ಘಾಟನೆ ನಡೆಯಿತು.

ವಸ್ತು ಪ್ರದರ್ಶನವನ್ನು ಹಳೇ ವಿದ್ಯಾರ್ಥಿ ಗಣೇಶ್‌ ನಾಯಕ್‌ ಪಿ. ಉದ್ಘಾಟಿಸಿದರು. ಪ.ಪೂ. ವಿಭಾಗ ಮತ್ತು ಪ್ರೌಢಶಾಲಾ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸವಿತಾ, ವೀಣಾ ಭಟ್‌ ಉಪಸ್ಥಿತರಿದ್ದರು. ಅಧ್ಯಾಪಕ ಶಿವರಾಮ ನಾಯ್ಕ ಎಂ. ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next