Advertisement

Mizoram Result; ಸಮೀಕ್ಷೆ ತಲೆಕೆಳಗಾಗಿಸಿದ ಲಲ್ದುಹೊಮಾ; ಝಡ್ ಪಿಎಂ ಪಕ್ಷಕ್ಕೆ ಸರಳ ಬಹುಮತ

03:04 PM Dec 04, 2023 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ನಡೆದ ಮಿಜೋರಂ ವಿಧಾನಸಭೆ ಚುನಾವಣೆಯಲ್ಲಿ ಲಲ್ದುಹೊಮಾ ಅವರ ಝೆಡ್ ಪಿಎಂ ಪಕ್ಷವು (ಜೋರಾಮ್ ಪೀಪಲ್ಸ್ ಮೂವ್‌ಮೆಂಟ್) ಸರಳ ಬಹುಮತ ಪಡೆದಿದೆ. 40 ಅಸೆಂಬ್ಲಿ ಸ್ಥಾನಗಳಲ್ಲಿ 27 ಸ್ಥಾನಗಳನ್ನು ಗೆದ್ದು ಆಡಳಿತಾರೂಢ ಎಂಎನ್ಎಫ್ (ಮಿಜೋ ನ್ಯಾಷನಲ್ ಫ್ರಂಟ್) ಅನ್ನು ಸೋಲಿಸಿದೆ.

Advertisement

ಇದುವರೆಗೆ ಮಿಜೋ ಮುಖ್ಯಮಂತ್ರಿಯಾಗಿದ್ದ ಝೋರಾಂತಂಗ ಅವರಿಗೆ ಇಂದು ಡಬಲ್ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡ ಅವರು ಐಜ್ವಾಲ್ ಪೂರ್ವದಲ್ಲಿ ಪ್ರತಿಸ್ಪರ್ಧಿ ಝಡ್ ಪಿಎಂ ಅಭ್ಯರ್ಥಿ ಲಾಲ್ತನ್‌ಸಂಗ ಅವರ ಎದುರು ಸೋಲನುಭವಿಸಿದ್ದಾರೆ. ಲಾಲ್ತನ್ ಸಂಗ 2,101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈತನ್ಮಧ್ಯೆ, ಝಡ್ ಪಿಎಂ ನ ಮುಖ್ಯಮಂತ್ರಿ ಅಭ್ಯರ್ಥಿ ಲಲ್ದುಹೊಮ ಅವರು ಸರ್ಚಿಪ್‌ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಎಂಎನ್ಎಫ್ ಅಭ್ಯರ್ಥಿಯನ್ನು ಅವರು 2,982 ಮತಗಳ ಅಂತರದಿಂದ ಸೋಲಿಸಿದರು.

ಇದನ್ನೂ ಓದಿ:ಅಂದು ಇಂದಿರಾ ಭದ್ರತಾ ಉಸ್ತುವಾರಿ, ಇಂದು ಮಿಜೋ ಸಿಎಂ ಸ್ಥಾನದತ್ತ..: ಇದು ಲಲ್ದುಹೊಮ ಕಥೆ

ಆಡಳಿತಾರೂಢ ಎಂಎನ್‌ಎಫ್ ಹತ್ತು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಎರಡು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಕಂಡಿದೆ.

Advertisement

ಗೆಲುವು ಸಾಧಿಸುತ್ತಿದ್ದಂತೆ ಮಾತನಾಡಿದ ಲಲ್ದುಹೊಮ ಅವರು “ನನಗೆ ಅಚ್ಚರಿಯಾಗಿಲ್ಲ, ಇದನ್ನೇ ನಾನು ನಿರೀಕ್ಷಿಸಿದ್ದೆ” ಎಂದು ಹೇಳಿದರು.

ಚುನಾವಣಾ ನಂತರದ ಸಮೀಕ್ಷೆಗಳು ಎಂಎನ್ಎಫ್ ಪಕ್ಷದ ಪರವಾಗಿ ಬಂದಿದ್ದವು. ಹೆಚ್ಚಿನ ಸಮೀಕ್ಷೆಗಳಲ್ಲಿ ಎಂಎನ್ಎಫ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಬರಲಿದೆ ಎಂದು ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next