Advertisement

4.38 ಕಿಲೋ ಹೆರಾಯಿನ್‌ಗೆ ಬೆಂಕಿ ಹಚ್ಚಿದ ಮಿಜೋರಾಂ ಸಿಎಂ

03:24 PM Jun 26, 2018 | udayavani editorial |

ಐಜಾಲ್‌ : ಮಾದಕ ದ್ರವ್ಯ ದುರುಪಯೋಗ ಮತ್ತು ಕಳ್ಳಸಾಗಣೆ ವಿರೋಧಿ ಅಂತಾರಾಷ್ಟ್ರೀಯ ದಿನದ ಪ್ರಯುಕ್ತ  ಮಿಜೋರಾಂ ಮುಖ್ಯಮಂತ್ರಿ ಲಾಲ್‌ ಥನಾವ್ಲಾ ಅವರಿಂದು ಇಲ್ಲಿನ ಅಸ್ಸಾಮ್‌ ರೈಫ‌ಲ್ಸ್‌ ಮೈದಾನಿನಲ್ಲಿ  84.37 ಲಕ್ಷ ರೂ. ಮೌಲ್ಯದ 4.38 ಕಿಲೋ ಹೆರಾಯಿನ್‌ಗೆ ಬೆಂಕಿ ಹಚ್ಚಿದರು. 

Advertisement

ಸಮಾರಂಭದ ತಾಣದಲ್ಲಿ ಕಡಿಮೆ ಮಾಲಿನ್ಯಕ್ಕೆ ಕಾರಣವಾಗುವ ರೀತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಹೆರಾಯಿನ್‌ ಗೆ ಬೆಂಕಿ ಹಚ್ಚಿ ಅದನ್ನು ನಾಶಪಡಿಸಲಾಯಿತು ಎಂದು ಸಂಘಟಕರು ಹೇಳಿದರು. 

ಕಳೆದ ಮೂರು ವರ್ಷಗಳಿಂದ ರಾಜ್ಯಕ್ಕೆ ಆಗುತ್ತಿರುವ ಹೆರಾಯಿನ್‌ ಕಳ್ಳಸಾಗಣೆ ಪ್ರಮಾಣ ಮೂರು ಪಟ್ಟು ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next