Advertisement
ಜಾಕೆಟ್ ಸ್ಟೈಲ್ ಸ್ಯಾರಿ ಬ್ಲೌಸ್ದಿನಕ್ಕೊಂದು ಫ್ಯಾಷನ್ ಪರಿಚಯಿಸುವ ಸೋನಂ ಕಪೂರ್, ಏನು ತೊಟ್ಟರೂ ಚೆಂದ ಕಾಣುವ ಜಾಕ್ವೆಲಿನ್ ಫೆರ್ನಾಂಡೀಸ್ ಸೇರಿ ಹಲವು ಬಾಲಿವುಡ್ ತಾರೆಯರು ಈ ಜಾಕೆಟ್ ಸ್ಟೈಲ್ ಬ್ಲೌಸ್ ತೊಟ್ಟು ಬ್ಲೌಸ್‌ಗೊಂದು ಐಡೆಂಟಿಟಿಯನ್ನು ಈಗಾಗಲೇ ನೀಡಿದ್ದಾರೆ. ಶಾರ್ಟ್ ಕುರ್ತಿಯಷ್ಟು ಉದ್ದ ಈ ರವಿಕೆ ಇರುತ್ತದೆ. ಎರಡೂ ಬದಿಗಳಲ್ಲಿ ಕುರ್ತಿಗೆ ಇರುವಂತೆಯೇ ಸೈಡ್ ಸ್ಲಿಟ್ ಇರುತ್ತದೆ. ಕಾಲರ್ ನೆಕ್, ಉದ್ದ ತೋಳು ಈ ವಿನ್ಯಾಸದ ರವಿಕೆಗೆ ಚಂದವಾಗಿ ಒಪ್ಪುತ್ತದೆ. ಈ ರವಿಕೆ ಮೇಲೆ ಸೀರೆಯನ್ನು ಯಾವತ್ತೂ ಉಡುವಂತೆಯೇ ಉಡಬೇಕು. ರವಿಕೆ ಇನ್ನೂ ಚೆಂದವಾಗಿ ತೋರಬೇಕೆಂದರೆ ಉತ್ತರ ಭಾರತೀಯರ ಹಾಗೆ ಸೆರಗು ಮುಂಭಾಗ ಬರುವಂತೆ ಸೀರೆ ಉಡಿ. ಸದ್ಯಕ್ಕಂತೂ ಇದು ಭಾರಿ ಟ್ರೆಂಡಿಂಗ್‌ನಲ್ಲಿದೆ. ವಿಶೇಷವಾಗಿ ಯುವತಿಯರಿಗೆ ಕಾಲೇಜು ಸಮಾರಂಭ, ಪಾರ್ಟಿಗಳಿಗೆ ಹೇಳಿಮಾಡಿಸಿದ ಮಾಡರ್ನ್- ಟ್ರೆಡಿಷನಲ್ ಕಾಂಬೊ ಇದು.
ಧೋತಿ ಸ್ಯಾರಿ ಗೊತ್ತಿದೆಯಲ್ಲಾ, ನಮ್ಮ ಹಿರಿಯರು ಕಚ್ಚೆ ಸೀರೆ ಅಂತ ಧರಿಸುತ್ತಿದ್ದ ಸೀರೆಯ ಸ್ವಲ್ಪ ಮಟ್ಟಿನ ರೂಪಾಂತರ ಇದು. ಈ ಸೀರೆ ಜಾಕೆಟ್ ಬ್ಲೌಸ್ ಹೇಳಿ ಮಾಡಿಸಿದ ಜೋಡಿ. ಧೋತಿ ಸೀರೆಗಾದರೆ ಬ್ಲೌಸ್ ಸ್ವಲ್ಪ ಗಿಡ್ಡ ಇರಲಿ. ಸೊಂಟದವರೆಗೂ ಬಂದರೆ ಸಾಕು. ಉದ್ದನೆಯ ಬ್ಲೌಸ್ ಈ ರೀತಿಯ ಸೀರೆಗೊಪ್ಪುವುದಿಲ್ಲ. ಸ್ಯಾರಿ ವಿತ್ ಶಾರ್ಟ್ ಜಾಕೆಟ್
ನಿಮ್ಮಿಷ್ಟದ ಸೀರೆ ಉಡಿ, ಅದಕ್ಕೊಪ್ಪುವ ರವಿಕೆಯನ್ನು ತೊಡಿ. ಅದರ ಮೇಲೆ ವೇಸ್ಟ್‌ಕೋಟ್ ರೀತಿಯ ಡಿಸೈನರ್ ಜಾಕೆಟ್ ತೊಡಿ. ಜಾಕೆಟ್ ಸೀರೆಗೆ ಒಪ್ಪುವಂತಿರಲಿ. ಕುಂದನ್, ಜರ್ದೋಸಿ ಬಳಸಿ ಕಸೂತಿ ಮಾಡಿರುವ ಜಾಕೆಟ್‌ಗಳು ಇನ್ನೂ ಚೆಂದ ಕಾಣಿಸುತ್ತವೆ. ಸೆರಗು ಮೇಲೆ ಬರುವಂತೆ ಅಥವಾ ಸೆರಗಿನ ಮೇಲೆ ಜಾಕೆಟ್ ಬರುವಂತೆ ಹೇಗೆ ತೊಟ್ಟರೂ ಸರಿಯೆ. ಮಧ್ಯವಯಸ್ಕ ಮಹಿಳೆಯರಿಗೆ ಇದು ಹೆಚ್ಚು ಒಪ್ಪುತ್ತದೆ.
Related Articles
ತುಂಬಾ ಆಕರ್ಷಕವಾಗಿ ಕಾಣುವ ಕಾಂಬಿನೇಷನ್ ಇದು. ಸಾದಾ ಸೀರೆಗೆ ಕಾಂಟ್ರಾಸ್ಟ್ ಬಣ್ಣದ ಸ್ಲಿàವ್‌ಲೆಸ್ ಜಾಕೆಟ್ ಧರಿಸುವುದೇ ಈಗಿನ ಫ್ಯಾಷನ್. ಸೀರೆಗೆ ತೊಡುವ ರವಿಕೆ ಕೂಡ ಸ್ಲಿವ್‌ಲೆಸ್ ಇರಬೇಕು. ಆಗಮಾತ್ರ ಈ ಕಾಂಬಿನೇಷನ್ ಎದ್ದು ಕಾಣುತ್ತದೆ. ಈ ಕಾಂಬಿನೇಷನ್ ನೀವು ಪ್ರಯತ್ನಿಸುವಾಗ ಒಂದಷ್ಟು ಅಂಶಗಳ ಬಗ್ಗೆ ಗಮನವಿರಲಿ. ಸೀರೆ ಆದಷ್ಟು ಸರಳವಾಗಿರಲಿ. ಹೆಚ್ಚೆಂದರೆ ಚಿಕ್ಕ ಜರಿ ಅಂಚು ಇರಲಿ. ಜಾಕೆಟ್ ಆದಷ್ಟೂ ಅದ್ದೂರಿಯಾಗಿರಲಿ. ಕಸೂತಿ, ಮಿರರ್ ವರ್ಕ್ ಇರುವ ಜಾಕೆಟ್‌ಗಳು ಚೆನ್ನಾಗಿ ಕಾಣುತ್ತವೆ. ಆದಷ್ಟು ಸೀರೆ ಮತ್ತು ಜಾಕೆಟ್ ವಿರುದ್ಧ ಬಣ್ಣದ್ದಾಗಿರಲಿ. ಇದು ಅತ್ಯುತ್ತಮ ಪಾರ್ಟಿವೇರ್ ಕೂಡ ಆಗುತ್ತದೆ.
Advertisement