Advertisement
ಘಟನೆಯ ವಿವರಮಿತ್ತೂರಿನ ರೈಲ್ವೇ ಸೇತುವೆಗಿಂತ ಮೊದಲು ಮತ್ತು ಸೇತುವೆಯ ಮುಂದೆ ಎರಡು ರಕ್ಷಣದ್ವಾರಗಳಿವೆ. ಮಿತಿಮೀರಿದ ಗಾತ್ರದ ವಾಹನಗಳನ್ನು ತಡೆಯುವ ಉದ್ದೇಶದಿಂದ ಇಲಾಖೆ ಈ ರಕ್ಷಣಾ ದ್ವಾರಗಳನ್ನು ಸ್ಥಾಪಿಸಿದೆ. ಮೊದಲನೇ ರಕ್ಷಣಾ ದ್ವಾರ ದಾಟಿದ ಕಂಟೈನರ್ ರೈಲ್ವೇ ಸೇತುವೆಯನ್ನೂ ದಾಟಿ ಮುಂದಿನ ರಕ್ಷಣಾ ದ್ವಾರದ ಬಲಭಾಗಕ್ಕೆ ಢಿಕ್ಕಿ ಹೊಡೆಯಿತು. ರಕ್ಷಣಾ ದ್ವಾರದ ಕಬ್ಬಿಣದ ಬೀಮ್ ಲಾರಿಯ ಮೇಲೆ ಉರುಳಿ ಬಳಿಕ ನೆಲಕ್ಕೆ ಕುಸಿದಿದೆ. ಲಾರಿಯ ಮುಂಭಾಗ ಹಾನಿಗೀಡಾಗಿದ್ದು, ಗಾಜು ಪುಡಿಯಾಗಿದೆ.
ವಿಟ್ಲ ಹಾಗೂ ಪುತ್ತೂರು ಪೊಲೀಸರು ಸ್ಥಳ ಕ್ಕಾಗಮಿಸಿ ಪರ್ಯಾಯ ರಸ್ತೆಗಳ ಮೂಲಕ ಸಂಚಾರ ಸುಗಮ ವಾಗಿ ಸುವ ಕಾರ್ಯವನ್ನು ಮಾಡಿದರು. ಉಪ್ಪಿ ನಂಗಡಿ ಯಿಂದ ಕ್ರೇನ್ ತರಿಸಿ ಲಾರಿಯನ್ನು ಹಾಗೂ ಕಬ್ಬಿಣದ ಬೀಮ್ ಅನ್ನು ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ರಸ್ತೆ ತೆರವಾದ ಕೂಡಲೇ ವಾಹನಗಳು ನುಗ್ಗಲಾರಂಭಿ ಸಿದ್ದರಿಂದ ಮತ್ತೆ ಸ್ವಲ್ಪ ಕಾಲ ಸುಗಮ ಸಂಚಾರಕ್ಕೆ ತಡೆ ಯಾಯಿತು. ಸುಮಾರು ಎರಡು ತಾಸು ವಾಹನಗಳ ಸಂಚಾರಕ್ಕೆ ತಡೆಯಾಗಿತ್ತು.
Related Articles
ಕಂಟೈನರ್ ಎತ್ತರ ಮಿತಿಗಿಂತ ಹೆಚ್ಚಿದ್ದ ಕಾರಣ ಅಪಘಾತ ಸಂಭವಿಸಿತು ಎಂದು ಹೇಳಲಾಗುತ್ತಿದ್ದರೂ ಮೊದಲಿನ ರಕ್ಷಣಾ ದ್ವಾರದ ಮೂಲಕ ಸುಗಮವಾಗಿ ಸಂಚರಿಸಿದೆ; ಸೇತುವೆಯನ್ನೂ ದಾಟಿದೆ. ಎರಡನೇ ರಕ್ಷಣಾ ದ್ವಾರಕ್ಕೆ ಢಿಕ್ಕಿ ಹೊಡೆಯಲು ಚಾಲಕನ ನಿದ್ದೆಯ ಮಂಪರು ಕಾರಣವಾಗಿರಬಹುದು ಅಥವಾ ಈ ಹಿಂದೆ ಯಾವುದೋ ವಾಹನ ತಾಗಿ ದ್ವಾರ ವಾಲಿಕೊಂಡಿರುವುದೂ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
ರೈಲು ಸಂಚಾರ ಅಬಾಧಿತಕಂಟೈನರ್ ರಕ್ಷಣಾ ದ್ವಾರಕ್ಕೆ ಢಿಕ್ಕಿ ಹೊಡೆದ ಪರಿಣಾಮ ರೈಲು ಹಳಿಗೆ ಏನಾದರೂ ಹಾನಿಯಾಗಿರ ಬಹುದೇ ಎಂಬ ಸಂಶಯವನ್ನು ನಿವಾರಿಸಲು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಲಾರಿ ಹಿಮ್ಮುಖ ಚಲಿಸುವಾಗ ಸೇತುವೆಯ ಗೋಡೆಗೆ ತಾಗಿದರೂ ಯಾವುದೇ ಹಾನಿ ಸಂಭವಿಸಿಲ್ಲ. ಬೆಳಗ್ಗೆ ಬೆಂಗಳೂರಿನಿಂದ ಬರುವ ಪ್ರಯಾಣಿಕ ರೈಲು ಮತ್ತು ಇತರ ಗೂಡ್ಸ್ ರೈಲುಗಳು ಎಂದಿನಂತೆಯೇ ಸಂಚರಿಸಿವೆ. ಇಲಾಖೆಯ ನಿರ್ಲಕ್ಷ ಕಾರಣ ?
ರಕ್ಷಣಾ ದ್ವಾರವು ವಾಲಿಕೊಂಡಿದ್ದು ಬೀಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ರೈಲ್ವೇ ಇಲಾಖೆಗೆ ಈ ಹಿಂದೆ ದೂರು ನೀಡಿದ್ದರು. ಆದರೆ ಇಲಾಖೆಯ ನಿರ್ಲಕ್ಷ ಇಂದಿನ ಘಟನೆಗೆ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ. ಲಾರಿಯ ಮಿತಿಮೀರಿದ ಎತ್ತರವೇ ಅಪಘಾತಕ್ಕೆ ಕಾರಣ; ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ರೈಲ್ವೇ ಪೊಲೀಸ್ ಅಧಿಕಾರಿ ಆರ್.ಜೆ. ಚೌಹಾಣ್ ತಿಳಿಸಿದ್ದಾರೆ. ವಿಟ್ಲದಲ್ಲಿ ಸಂಚಾರ ಅಸ್ತವ್ಯಸ್ತ
ಶಿರಾಡಿ ಘಾಟಿಯ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ನಿಮಿತ್ತ ಸಂಚಾರ ನಿಷೇಧಿಸಿರುವುದರಿಂದ ಮಾಣಿ- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಆ ಕಾರಣಕ್ಕೆ ಮತ್ತು ಕಂಟೈನರ್ ಢಿಕ್ಕಿ ಹೊಡೆದ ಪರಿಣಾಮ ಬುಧವಾರ ಬೆಳಗ್ಗೆಯೇ ರಸ್ತೆ ಸಂಚಾರ ಅಸ್ತವ್ಯಸ್ತತೆ ಹೆಚ್ಚಾಯಿತು. ವಿಟ್ಲದಲ್ಲಿ ಒಮ್ಮೆಲೇ ಲಾರಿ, ಬಸ್ ಗಳ ಸಂಖ್ಯೆ ಹೆಚ್ಚಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಕ್ಷಣಾ ದ್ವಾರ ಕುಸಿತ; ಚಾಲಕನಿಗೆ ಗಾಯ
ಹೆದ್ದಾರಿಗಡ್ಡ ನಿಂತ ಕಂಟೈನರ್
2 ತಾಸು ಕಾಲ ಹೆದ್ದಾರಿ ಬಂದ್
ರೈಲ್ವೇ ಸೇತುವೆಗೆ ಅಪಾಯವಿಲ್ಲ