Advertisement

ನವಿಮುಂಬಯಿ: ಮಿತ್ತ್-ತಿರ್ತ್‌ ನಾಟಕದ ಮುಹೂರ್ತ 

05:12 PM Jun 05, 2017 | Team Udayavani |

ಮುಂಬಯಿ: ನಾಟಕಕಾರ ಸೋಮನಾಥ ಎಸ್‌. ಕರ್ಕೇರ ಅವರ ಮಿತ್ತ್-ತಿರ್ತ್‌ ನೂತನ ತುಳು ನಾಟಕದ ಮುಹೂರ್ತ ಕಾರ್ಯಕ್ರಮವು ಮೇ 28 ರಂದು ಸಂಜೆ ನಡೆಯಿತು.

Advertisement

ಮೊಗವೀರ ವ್ಯವಸ್ಥಾಪಕ ಮಂಡಳಿಯ ನವಿಮುಂಬಯಿ ಶಾಖಾ ಕಚೇರಿಯಲ್ಲಿ ಜರಗಿದ ಈ ಮುಹೂರ್ತ ಕಾರ್ಯಕ್ರಮದಲ್ಲಿ ಶಾಖೆಯ ಅಧ್ಯಕ್ಷ ಪುರುಷೋತ್ತಮ ಎಲ್‌. ಪುತ್ರನ್‌, ಗೌರವ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್‌ ಮೆಂಡನ್‌, ಉಪಾಧ್ಯಕ್ಷ ಲೋಕೇಶ್‌ ಎಂ. ಕರ್ಕೇರ, ನಾಟಕಕಾರ ಸೋಮನಾಥ ಎಸ್‌. ಕರ್ಕೇರ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಜೂ. 11 ರಂದು ಮೊಗವೀರ ವ್ಯವಸ್ಥಾಪಕ ಮಂಡಳಿಯ ನವಿಮುಂಬಯಿ ಶಾಖೆಯ 5ನೇ ವಾರ್ಷಿಕೋತ್ಸವನ ಸಂದರ್ಭದಲ್ಲಿ ಪನ್ವೆಲ್‌ ಕರ್ನಾಟಕ ಸಂಘದ ಸಭಾಗೃಹದಲ್ಲಿ ರಾತ್ರಿ 8 ರಿಂದ ಪ್ರದರ್ಶನಗೊಳ್ಳಲಿರುವ ಈ ನಾಟಕಕ್ಕೆ ಗಣ್ಯರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಪುರುಷೋತ್ತಮ ಎಲ್‌. ಪುತ್ರನ್‌ ಅವರು ಮಾತನಾಡಿ, ಮಿತ್ತ್-ತಿರ್ತ್‌ ನಾಟಕವು ಚಿಕ್ಕದಾದರೂ ಹಾಸ್ಯ ಪ್ರಧಾನವಾಗಿದೆ. ಮಾತ್ರವಲ್ಲದೆ ಮಹಿಳೆಯರೇ ಪ್ರದರ್ಶಿಸುವ ಈ ನಾಟಕದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ ಅದನ್ನು ಬೆಳಕಿಗೆ ತರಲು ಅವಕಾಶ ದೂರಕಬೇಕು ಎಂದು ನುಡಿದರು.

ಕಾರ್ಯದರ್ಶಿ ಪುಷ್ಪರಾಜ್‌ ಮೆಂಡನ್‌, ಉಪಾಧ್ಯಕ್ಷ ಲೋಕೇಶ್‌ ಕರ್ಕೇರ ಅವರು ಈ ಸಂದರ್ಭದಲ್ಲಿ ಮಾತನಾಡಿ ನಾಟಕ ತಂಡಕ್ಕೆ ಶುಭಹಾರೈಸಿದರು. ಬಳಿಕ ನಾಟಕಕಾರ ಸೋಮನಾಥ ಕರ್ಕೇರ ಅವರು ಮಿತ್ತ್-ತಿರ್ತ್‌ ನಾಟಕದ ಕೃತಿಯನ್ನು ಉಷಾ ಎಲ್‌. ಕರ್ಕೇರ ಅವರಿಗೆ ಹಸ್ತಾಂತರಿಸಿ ಶುಭಹಾರೈಸಿದರು. ಮಹಿಳೆಯರೆ ನಿರ್ದೇಶಿಸುತ್ತಿರುವ ಈ ನಾಟಕದಲ್ಲಿ ಉಷಾ ಎಲ್‌. ಕರ್ಕೇರ, ಜಾನಕಿ ಆರ್‌. ಬಂಗೇರ, ಸಾಧನಾ ಎನ್‌. ಮೆಂಡನ್‌, ಯಶೋದಾ ಪುತ್ರನ್‌, ಹರಿಣಾಕ್ಷಿ ಎಸ್‌. ಮೈಂದನ್‌ ಮತ್ತು ಪ್ರೇಮಲತಾ ವಿ. ಸಾಲ್ಯಾನ್‌ ಅವರು ಕಲಾವಿದರುಗಳಾಗಿ ಸಹಕರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next