Advertisement
ಐಸಿಸಿ ವನಿತಾ ವಿಶ್ವಕಪ್‌ನ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ರಾಜ್ ಈ ಸಾಧನೆ ಮಾಡಿದರು. ಇದರಿಂದಾಗಿ ಭಾರತ ಎರಡು ವಿಶ್ವದಾಖಲೆ ಹೊಂದಿದಂತಾಗಿದೆ. 50 ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಜೂಲನ್ ಗೋಸ್ವಾಮಿ ಗರಿಷ್ಠ ವಿಕೆಟ್ ಕಿತ್ತ ವಿಶ್ವದಾಖಲೆ ಹೊಂದಿದ್ದಾರೆ.
Related Articles
Advertisement
ಹೈದರಾಬಾದ್‌ನ ಮಿಥಾಲಿ ಮತ್ತು ಗೋಸ್ವಾಮಿ ಭಾರತೀಯ ವನಿತಾ ತಂಡದ ಇಬ್ಬರು ಹಿರಿಯ ಆಟಗಾರ್ತಿ ಯರಾಗಿದ್ದಾರೆ. ಅವರಿಬ್ಬರು 2003ರ ವಿಶ್ವಕಪ್ ಮೊದಲೇ ತಂಡದಲ್ಲಿದ್ದರು. 2002ರಲ್ಲಿ ಟಾಂಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ವನಿತಾ ಟೆಸ್ಟ್ ಪಂದ್ಯದಲ್ಲಿ 214 ರನ್ ಸಿಡಿಸುವ ಮೂಲಕ ಮಿಥಾಲಿ ಪ್ರಸಿದ್ಧಿಗೆ ಬಂದರು. ಇದು ವನಿತಾ ಕ್ರಿಕೆಟಿನ ಆಟಗಾರ್ತಿಯೊಬ್ಬರ ಗರಿಷ್ಠ ಮೊತ್ತವಾಗಿದೆ.
ನಾಯಕಿ ಮಿಥಾಲಿ ಅವರ ಸಾಧನೆಗೆ ಬಿಸಿಸಿಐ ಪ್ರಭಾರ ಅಧ್ಯಕ್ಷ ಸಿಕೆ ಸಿನ್ನಾ ಅಭಿನಂದನೆ ಸಲ್ಲಿಸಿದ್ದಾರೆ. ಬಿಸಿಸಿಐ ಪರವಾಗಿ ನಾನು ಮಿಥಾಲಿ ಅವರ ಅಮೋಘ ಸಾಧನೆಗೆ ಅಭಿನಂದನೆ ಸಲ್ಲಿಸು ತ್ತಿದ್ದೇನೆ. ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಗೈದ ಪಂದ್ಯ ದಲ್ಲಿಯೇ ಶತಕ ಸಿಡಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ಮಿಥಾಲಿ ರಾಜ್ ದಾಖಲೆ ಸತತ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ ಎಂದರು.
ಮಿಥಾಲಿ ಅವರ ಸಾಧನೆಯನ್ನು ಅವಲೋಕಿಸಿದರೆ ಅವರು ಹಿಂದಿನ ಶ್ರೇಷ್ಠ ಆಟಗಾರ್ತಿಯರಾದ ಡಯಾನಾ ಎಡುಲ್ಜಿ, ಶಾಂತಾ ರಂಗಸ್ವಾಮಿ ಮತ್ತು ಅಂಜುಮ್ ಚೋಪ್ರಾ ಅವರಿಗಿಂತ ಮಿಗಿಲಾದ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡಿಗೆ ಗೆಲುವುಡರ್ಬಿ: ಆತಿಥೇಯ ಇಂಗ್ಲೆಂಡ್ ವನಿತೆಯರು ಐಸಿಸಿ ವನಿತಾ ವಿಶ್ವಕಪ್‌ನ ಬುಧವಾರದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವನಿತೆಯರನ್ನು 75 ರನ್ನುಗಳಿಂದ ಸೋಲಿಸಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡವು ನತಾಲಿಯೆ ಸಿವರ್ ಅವರ ಆಕರ್ಷಕ ಶತಕ ಮತ್ತು ತಮಿ ಬೀಮೌಂಟ್ ಅವರ ಅಮೋಘ ಆಟದಿಂದಾಗಿ 9 ವಿಕೆಟಿಗೆ 284 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಸಿವರ್ 111 ಎಸೆತ ಎದುರಿಸಿ 11 ಬೌಂಡರಿ ನೆರವಿನಿಂದ 129 ರನ್ ಸಿಡಿಸಿದರೆ ಬೀಮೌಂಟ್ 102 ಎಸೆತಗಳಿಂದ 93 ರನ್ ಗಳಿಸಿದರು. ಗೆಲ್ಲಲು ಕಠಿನ ಗುರಿ ಪಡೆದ ನ್ಯೂಜಿಲ್ಯಾಂಡ್ ತಂಡವು ಇಂಗ್ಲೆಂಡಿನ ದಾಳಿಯನ್ನು ಎದುರಿಸಲು ವಿಫಲವಾಗಿ 46.4 ಓವರ್‌ಗಳಲ್ಲಿ 209 ರನ್ನಿಗೆ ಆಲೌಟಾಯಿತು. ದಕ್ಷಿಣ ಆಫ್ರಿಕಾಕ್ಕೆ ಜಯ
ಟಾಟನ್‌ನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡವು 40.3 ಓವರ್‌ಗಳಲ್ಲಿ 101 ರನ್ನಿಗೆ ಆಲೌಟಾಯಿತು. ಡಿ ವಾನ್ ನೀಕೆರ್ಕ್ 24 ರನ್ನಿಗೆ 4 ವಿಕೆಟ್ ಕಿತ್ತರೆ ಶಬಿ°ಮ್ ಇಸ್ಮಾಯಿಲ್ 14 ರನ್ನಿಗೆ 3 ವಿಕೆಟ್ ಉರುಳಿಸಿದರು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾವು 23.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 104 ರನ್ ಗಳಿಸಿ ಜಯಭೇರಿ ಬಾರಿ ಸಿತು.