Advertisement

ಮಿಥಾಲಿ ರಾಜ್ ಹೊಸ ದಾಖಲೆ:ಇನ್ನೂರು ಏಕದಿನ ಪಂದ್ಯವಾಡಿದ ಮೊದಲ ಆಟಗಾರ್ತಿ

03:53 AM Feb 01, 2019 | |

ಹ್ಯಾಮಿಲ್ಟನ್ : ಭಾರತೀಯ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ಈಗಾಗಲೇ ಹಲವು ವಿಶ್ವ ದಾಖಲೆಯ ಒಡತಿ. ಸದ್ಯ ಮಿಥಾಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇನ್ನೂರು ಪಂದ್ಯವಾಡಿದ ಮೊದಲ ಸಾಧಕಿಯಾಗಿ ಮಿಥಾಲಿ ರಾಜ್ ಮೂಡಿ ಬಂದಿದ್ದಾರೆ. 

Advertisement

ಹ್ಯಾಮಿಲ್ಟನ್ ನ ಸೆಡ್ಡಾನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ದದ ಮೂರನೇ ಏಕದಿನ ಪಂದ್ಯ ಮಿಥಾಲಿ ರಾಜ್ ರ ಇನ್ನೂರನೇ ಏಕದಿನ ಪಂದ್ಯವಾಗಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ಮಹಿಳಾ ಸಾಧಕಿ ಭಾರತೀಯ ನಾಯಕಿ ಮಿಥಾಲಿ ರಾಜ್. 


1999ರಲ್ಲಿ ಐರ‍್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಮಿಥಾಲಿಗೆ ಆಗಿ 16 ವರ್ಷ. ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದ ಈಕೆ ಪ್ರಸ್ತುತ ಮಹಿಳಾ ಕ್ರಿಕೆಟ್ ನ ಅತೀ ಹೆಚ್ಚುರನ್ ಗಳಿಸಿರುವ ಸಾಧಕಿ. ಏಳು ಶತಕ 52  ಅರ್ಧಶತಕದೊಂದಿಗೆ ಆರು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಮಿಥಾಲಿ ಹೆಸರಿಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next