Advertisement

ಮಿಥಾಲಿ ಆಕ್ರೋಶ ಪೊವಾರ್‌ ಪದತ್ಯಾಗ

09:26 AM Dec 08, 2018 | |

ಭಾರತ ಮಹಿಳಾ ಕ್ರಿಕೆಟ್‌ ತಂಡ ಈಗ ಹಿಂದಿನಂತೆ ದುರ್ಬಲವಲ್ಲ. ಅದು ವಿಶ್ವಕಪ್‌ ಗೆಲ್ಲುವ ಮೆಚ್ಚಿನ ತಂಡಗಳಲ್ಲೊಂದು. ಅಂತಹ ತಂಡ ಇತ್ತೀಚೆಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲೇ ಮುಗ್ಗರಿಸಿತು. ಈ ಸೋಲು ಬರೀ ಸೋಲಾಗಲಿಲ್ಲ, ವಿವಾದಗಳ ಗೂಡಾಯಿತು. ಅದರ ಪರಿಣಾಮ, ತಂಡದ ತರಬೇತುದಾರರೇ ಸ್ಥಾನ ಕಳೆದುಕೊಂಡು, ತಂಡದಲ್ಲಿ ಎರಡು ಬಣ ಸೃಷ್ಟಿಯಾಗುವಂತಾಯಿತು. ಈ ಸೋಲಿನ ನಂತರದ ಬೆಳವಣಿಗೆಗಳನ್ನು, ಸೋಲು ಹೊರಹಾಕುವ ಕಹಿ ಘಟನೆಗಳ ಮೊತ್ತ ಎಂದು ಅಡಿಟಿಪ್ಪಣಿ ಬರೆದು ಮುಗಿಸಲು ಸಾಧ್ಯವಿಲ್ಲ. ಅಜೇಯ ತಂಡವಾಗಿ ಲೀಗ್‌ ಮುಗಿಸಿದ ಭಾರತ, ಉಪಾಂತ್ಯದಲ್ಲಿ ನೀರಸವಾಗಿ ಇಂಗ್ಲೆಂಡ್‌ ಎದುರು ಸೋತಿದ್ದಕ್ಕೆ ಕಾರಣ ಹುಡುಕುವವರಿಗೆ ಭಾರತದ ಅಗ್ರಮಾನ್ಯ ಆಟಗಾರ್ತಿ ಮಿಥಾಲಿ ರಾಜ್‌ರನ್ನು ಅನಿರೀಕ್ಷಿತವಾಗಿ ಆಡುವ ಹನ್ನೊಂದ ರಿಂದ ಕೈಬಿಟ್ಟ ನಿರ್ಧಾರ ಎದ್ದುಕಾಣುತ್ತದೆ. ಬಹುಶಃ ಮಿಥಾಲಿ ಬಿಸಿ ಸಿಐನ ಅಧಿಕೃತ ಇ-ಮೇಲ್‌ಗೆ ಗುಪ್ತವಾಗಿಯೇ ಕಳುಹಿಸಿದ ಕಟುಪತ್ರ ಮಾಧ್ಯಮಗಳಲ್ಲಿ ಪ್ರಸಾರವಾಗದಿದ್ದಿದ್ದರೆ ವಿವಾದ ಈ ಪ್ರಮಾಣದಲ್ಲಿ ಬಹಿರಂಗವಾಗುತ್ತಿರಲಿಲ್ಲ.ಪೊವಾರ್‌ ಪ್ರತಿಪಾದನೆ ಮಿಥಾಲಿ ವೈಯುಕ್ತಿಕ ಆಟದಲ್ಲಿ ಯಷ್ಟೇ ಹೆಚ್ಚು ಆಸಕ್ತರಾಗಿದ್ದರು. ಅವರು ತಂಡದ ಮೀಟಿಂಗ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ತನಗೆ ಆರಂಭಿಕ ಸ್ಥಾನ ಕೊಡದಿದ್ದರೆ ತಂಡವನ್ನೇ ಬಿಡುವ ಬೆದರಿಕೆ ಒಡ್ಡಿದ್ದರು. ವಿಶ್ವಕಪ್‌ಗ್ೂ ಮುನ್ನ ಭಾರತೀಯ ಮಹಿಳಾ ತಂಡದ ಹಂಗಾಮಿ ತರಬೇತುದಾರರಾಗಿ ರಮೇಶ್‌ ಪೊವಾರ್‌ ಆಯ್ಕೆಯಾಗಿದ್ದರು. ಈ ಹಿಂದಿನ ಶ್ರೀಲಂಕಾ ಪ್ರವಾಸಕ್ಕೆ ಮುನ್ನ ಆಗಿನ ಕೋಚ್‌ ತುಷಾರ್‌ ಅರೋಥೆ ವಿರುದಟಛಿ ಆಟಗಾರ್ತಿಯರು ಸಿಡಿದೆದ್ದ ಕಾರಣ ಅವರು ರಾಜೀನಾಮೆ ನೀಡಿದ್ದರು. ಅವರ ಬದಲಿಯಾಗಿ ಆಗಸ್ಟ್‌ ನಲ್ಲಷ್ಟೇ ರಮೇಶ್‌ ಮುಖ್ಯ ತರಬೇತುದಾರನ ಕರ್ತವ್ಯ ವಹಿಸಿಕೊಂಡಿದ್ದರು. 20 ತಿಂಗಳಿನಲ್ಲಿ ನಾಲ್ಕನೇ ಬಾರಿಗೆ ಹೊಸ ಕೋಚ್‌ನ ಆಯ್ಕೆಗೆ ಮುಂದಾಗಿರುವ ಮಹಿಳಾ ತಂಡಕ್ಕೆ ಕ್ರಿಕೆಟ್‌ ಹೇಳಿಕೊಡಬೇಕಾದುದು ಬಹಳ ಇರಲಿಲ್ಲ. ಈ ಅವಧಿಯಲ್ಲಿ ತಂಡ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಟಿ20ಯಲ್ಲಿ ಉಪಾಂತ್ಯ ಸಾಧನೆ ಮಾಡಿದೆ. ತಂಡವನ್ನು “ಮ್ಯಾನೇಜ್‌ ಮಾಡುವ ಮುಖ್ಯ ಕರ್ತವ್ಯದಿಂದ ಪೊವಾರ್‌ ವಿಮುಖರಾದ ಪರಿಣಾಮವನ್ನೇ ಕೆರೆಬಿಯನ್‌ ಪ್ರವಾಸ ಪ್ರತಿಫ‌ಲಿಸಿದೆ.

Advertisement

ಮಧ್ಯಮ ಸಮಸ್ಯೆ
36 ವರ್ಷದ ಮಿಥಾಲಿ ಈಗಲೂ ಭಾರತದ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ತಂಡದ ನಾಯಕಿ. ಅವರು ಏಕದಿನ ಹಾಗೂ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚಿನ ರನ್‌ ಕಲೆಹಾಕಿರುವ ಸಾಧಕಿ ಕೂಡ. ಅವರನ್ನು ಸೂಕ್ತ ಗೌರವಗಳೊಂದಿಗೆ ನಿರ್ವಹಿಸುವುದೇ ಕೋಚ್‌ ಮುಂದಿರುವ ಸವಾಲು. ಅವರು ಇಂದಿನ ಟಿ20ಗೆ ಹೊಂದಿಕೆಯಾಗುತ್ತಿಲ್ಲ. ಅವರು ಪವರ್‌ ಪ್ಲೇನಲ್ಲಿ ಹೆಚ್ಚಿನ ಡಾಟ್‌ ಬಾಲ್‌ಗ‌ಳಿಗೆ ಕಾರಣವಾಗುವುದರಿಂದ ಮಹಿಳಾ ಕ್ರಿಕೆಟ್‌ನಲ್ಲೂ 20 ಓವರ್‌ಗಳಲ್ಲಿ ಸಾಮಾನ್ಯವಾಗುತ್ತಿರುವ 175 ಪ್ಲಸ್‌ ಸ್ಕೋರ್‌ ಗಳಿಸಲಾಗುವುದಿಲ್ಲ. ತಂಡದ ಹಿತಕ್ಕಾಗಿ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎಂಬ ಸಲಹೆ ಪೊವಾರ್‌ ರಿಂದ ಬಂದಾಗ ಮಿಥಾಲಿ ನಿರಾಕರಿಸಿದ್ದಾರೆ. ವಿವಾದದ ಕಿಡಿ ಇಲ್ಲಿದೆ.

ಭಾರತದ ಪರ 2 ಟೆಸ್ಟ್‌ ಆಡಿ ಆರು ವಿಕೆಟ್‌ ಹಾಗೂ 31 ಏಕದಿನದಲ್ಲಿ 34 ವಿಕೆಟ್‌ ಪಡೆದ ಪೊವಾರ್‌ ಸಫ‌ಲತೆಯ ರುಚಿ ಕಂಡವರಲ್ಲ. ಅವರ ತರ್ಕ ಕೂಡ ಸೋಲುತ್ತದೆ. ಟಿ20 ವಿಶ್ವಕಪ್‌ಗೆ ಮುನ್ನ ಪೊವಾರ್‌ ಮಧ್ಯಮ ಕ್ರಮಾಂಕದಲ್ಲಿ ಮಿಥಾಲಿ ಆಡಲಿ ಎನ್ನುವುದಿಲ್ಲ. ವಾರ್ಮ್ ಅಪ್‌ ಪಂದ್ಯಗಳಲ್ಲಿ ಮಿಥಾಲಿ ಬಂದಿದ್ದು ಓಪನರ್‌ ಆಗಿ. ಮಧ್ಯಮ ಕ್ರಮಾಂಕಕ್ಕೆ ಎಂದು ತೀರ್ಮಾನಿಸಿದ್ದ ಒಂದು ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್‌ ಸಿಗುವುದೇ ಇಲ್ಲ. ಈ ಸ್ಥಿತಿಯಲ್ಲಿ ಅವರನ್ನು ಏಕಾಏಕಿ ಕ್ರಮಾಂಕ ಬದಲಿಸಲು ಹೇಳುವುದು ಲಾಜಿಕಲ್‌ ಅಲ್ಲ. 2 ಅರ್ಧಶತಕ, ಫಿಟ್‌, ಡ್ರಾಪ್‌ ಕೆರಿಬಿಯನ್‌ ವಿಶ್ವಕಪ್‌ನಲ್ಲಿ ಆಡುವ ಮೂರು ಪಂದ್ಯದಲ್ಲಿ ಮಿಥಾಲಿಗೆ ಎರಡು ಬಾರಿ ಮಾತ್ರ ಬ್ಯಾಟಿಂಗ್‌ ಅವಕಾಶ ಸಿಕ್ಕಿ ಅವೆರಡಲ್ಲಿಯೂ ಆಕೆ ಅರ್ಧ ಶತಕ ಬಾರಿಸುತ್ತಾರೆ.

ಅವೆರಡು ಪಂದ್ಯದಲ್ಲೂ ಅವರದು ಆರಂಭಿಕರ ಪಾತ್ರ. ನ್ಯೂಜಿಲೆಂಡ್‌ ಎದುರಿನ ಪಂದ್ಯ ದಲ್ಲಿ ಕೆಳ ಕ್ರಮಾಂಕದಲ್ಲಿ ಅವರನ್ನು ನಿಯೋಜಿಸಲಾಗಿದ್ದರೂ ಅವ ರಿಗೆ ಬ್ಯಾಟಿಂಗ್‌ ಅವಕಾಶ ಸಿಗುವುದಿಲ್ಲ. ಅತ್ಯುತ್ತಮ ಫಿನಿಶರ್‌ ಎಂಬ ಖ್ಯಾತಿಯಿದ್ದರೂ ಸತತವಾಗಿ ಕಳಪೆಯಾಗಿ ಆಡುತ್ತಿರುವ ವೇದಾ ಕೃಷ್ಣಮೂರ್ತಿಗೆ ಅವಕಾಶಗಳು ತಪ್ಪೇ ಇಲ್ಲ. ಅವರ ಬ್ಯಾಟಿಂಗ್‌ ಸರಾಸರಿ ಶೇ.18ಕ್ಕಿಂತ ಕಡಿಮೆ. ಹೋಗಲಿ, ಸ್ಟ್ರೆçಕ್‌ರೇಟ್‌ ಚೆನ್ನಾಗಿದೆಯೇ ಎಂದರೆ ಅದು 100ಕ್ಕಿಂತ ಕಡಿಮೆ. ಅದೇ ಮಿಥಾಲಿಯದ್ದು 2 ಇನಿಂಗ್ಸ್‌ನಲ್ಲಿ 100 ರನ್‌, ಶೇ. 115 ಸ್ಟ್ರೆçಕ್‌ ರೇಟ್‌! ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಉಪನಾಯಕಿ ಸ್ಮೃತಿ ಮಂಧನ ಪೊವಾರ್‌ರನ್ನು ಬೆಂಬಲಿಸಿದ್ದರಿಂದಲೇ ಮಿಥಾಲಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಬಹುಶಃ ಆಸ್ಟ್ರೇಲಿಯದ ಎದುರಿನ ಲೀಗ್‌ ಪಂದ್ಯದಲ್ಲಿ ಮಿಥಾಲಿ ಇಲ್ಲದ ಭಾರತದ ಸುಲಭ ಗೆಲುವು ಅವರಿಗೆ “ಪಾಠ ಕಲಿಸುವ ಅವಕಾಶ ಸಿಕ್ಕಿದೆ ಎಂಬ ನಂಬಿಕೆ ತಂದಿತೇನೋ! ಉಪಾಂತ್ಯದ ಮಹತ್ವದ ಪಂದ್ಯಕ್ಕ ಬಂದರೆ, 14ನೇ ಓವರ್‌ನಲ್ಲಿ 89ಕ್ಕೆ 2 ವಿಕೆಟ್‌ ಇದ್ದವರು ಓವರ್‌ಗಳ ಕೋಟಾವನ್ನು ಮುಗಿಸದೆ 112ಕ್ಕೆ ಆಲ್‌ಔಟ್‌ ಆಗುತ್ತಾರೆಂತಾದರೆ ಸ್ವಲ್ಪ ನಿಧಾನಗತಿಯಲ್ಲಿ, ಶೇ. 115ರ ಸ್ಟ್ರೆçಕ್‌ ರೇಟ್‌ನಲ್ಲಿ ಆಡುವ ಮಿಥಾಲಿ ತಂಡಕ್ಕೆ ಬೆನ್ನೆಲುಬಾಗುತ್ತಿದ್ದರು. ದೇಶಕ್ಕೆ ಪ್ರಶಸ್ತಿ ತಂದುಕೊಡುವ ಸಂದರ್ಭ ಎದುರಿರುವಾಗ ಪೊವಾರ್‌, ಹರ್ಮನ್‌ಪ್ರೀತ್‌ರ ಕ್ರಮ ಕ್ಷಮಾರ್ಹವಲ್ಲ. ಅಂಕಣದಲ್ಲಿ ನಾವು ಭಾರತ ತಂಡವನ್ನು ನೋಡುತ್ತೇವಾದರೂ ಸಿದ್ಧತಾ ಕೊಠಡಿಯಲ್ಲಿ ಭಿನ್ನಮತದ ಸಮ್ಮಿಶ್ರ ಸರ್ಕಾರದಂತೆಯೇ ಇರುತ್ತದೆ. ಅಸಮಾಧಾನಗಳನ್ನು ಬೆಳೆಯಲು ಬಿಡದಂತೆ ನಿರ್ವಹಿಸುವ “ಮ್ಯಾನೇಜರ್‌ ಪಾತ್ರವನ್ನು ಕೋಚ್‌ ಮಾಡಬೇಕಾಗುತ್ತದೆ. ಪೊವಾರ್‌ ಡ್ರೆಸ್ಸಿಂಗ್‌ ರೂಂನ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸುವ ಮೂಲಕ ನಿಯಮವನ್ನೇ ಉಲ್ಲಂ ಸುತ್ತಾರೆ.

ಮಿಥಾಲಿ ಒಂದಿಷ್ಟು ವಾದ, ಅಷ್ಟೇ ಪ್ರಮಾಣದ ಹಠವನ್ನು ಇರಿಸಿಕೊಂಡಿರಬಹುದು. ಆದರೆ ಮಹತ್ವದ ಟೂರ್ನಿಯಲ್ಲಿ ಅವರ ಆಟದ ಮೌಲ್ಯ ಲೆಕ್ಕಿಸಿ, ಆಡುವ ಹನ್ನೊಂದನ್ನು ನಿರ್ಧರಿಸಬೇಕು. ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ಅನಿಲ್‌ ಕುಂಬ್ಳೆ ನಡುವಿನ ವಿವಾದದಲ್ಲಿ ಕುಂಬ್ಳೆ ಪದತ್ಯಾಗ ಮಾಡಬೇಕಾಯಿತು. ಸಂಘರ್ಷದ ಸಮಯದಲ್ಲಿ ನಾಯಕನನ್ನು ಬೆಂಬಲಿಸಿ ಕೋಚ್‌ಗೆ ಕೊಕ್‌ ಕೊಡುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಪೊವಾರ್‌ಗೆ ಪೆವಿಲಿಯನ್‌ ತೋರಿಸಲಾಗಿದೆ. ಭಾರತದ ಪುರುಷರ ತಂಡದ ಸೌರವ್‌ ಗಂಗೂಲಿ, ಸಚಿನ್‌ ತೆಂಡುಲ್ಕರ್‌ ಹಾಗೂ ಮೊನ್ನೆ ಮೊನ್ನೆ ವಿವಿಎಸ್‌ ಲಕ್ಷ್ಮಣ್‌ ಆ ದಿನಗಳ ಕೋಚ್‌ ಗ್ರೆಗ್‌ ಚಾಪೆಲ್‌ರಿಂದಾಗಿ ತಂಡ ಎರಡೂ¾ರು ಹೋಳಾದುದನ್ನು ಬಹಿರಂಗಪಡಿಸುತ್ತಾರೆ. ಅದಕ್ಕೆ ಅವರು ನಿವೃತ್ತಿಯ ಸುರಕ್ಷತೆವರೆಗೆ ಕಾದರು. ಮಿಥಾಲಿ ರಾಜ್‌ ತನ್ನ ಅಭಿಮತ ಹೇಳಲು ಸಮಯ ಕಾಯಲಿಲ್ಲ. ಬಿಸಿಸಿಐ·ಸಿಇಓ ರಾಹುಲ್‌ ಜೊಹ್ರಿ ಅವರಿಗೆ ಇ-ಮೇಲ್‌ ಹಾಕಿದರು.

Advertisement

ಬಹುಶಃ 2019ರ ಫೆಬ್ರವರಿಯಲ್ಲಿ ನಡೆಯುವ ನ್ಯೂಜಿಲೆಂಡ್‌ ವಿರುದಟಛಿದ ಏಕದಿನ ಸರಣಿ ವೇಳೆಗೆ ಎಲ್ಲವೂ ಇತ್ಯರ್ಥವಾಗಲಿ ಎಂಬುದು ಅವರ ಆಶಯ ಇರಬಹುದು. ಮೈಲ್‌ ಬಹಿರಂಗ ಪಡಿಸುವ ಮೂಲಕ ಖುದ್ದು ಬಿಸಿಸಿಐ ತನ್ನ ಪಾರದರ್ಶಕ ನೀತಿ ಯನ್ನು ಹೇಳಲು ಹೊರಟಂತಿದೆ. ನಗುವವರ ಮುಂದೆ ಎಡವುವಂತಾಗಿದೆ!

ಇಲ್ಲಿ ಮಿಥಾಲಿ ಬಿಟ್ಟರು, ಸುದ್ದಿಯಾಯ್ತು, ಅಲ್ಲಿ ಮೌನ!
ಅನಿಸಾ ಮೊಹಮದ್‌ ವೆಸ್ಟ್‌ಇಂಡೀಸ್‌ ಆಟಗಾರ್ತಿ, ಟಿ20ಯಲ್ಲಿ 100 ವಿಕೆಟ್‌ ಪಡೆದ ಏಕೈಕ ಆಟಗಾರ್ತಿ. ಆಕೆ ಮೊನ್ನೆ ಬೆಂಚು ಕಾಯಿಸಿದಳು. ಚಾಂಪಿಯನ್‌ ಆಗಿ ಹೊಮ್ಮಿದ ಕಾಂಗರೂ ಪಡೆಯ ಜೆಸ್‌Õ ಜಾನಸೆನ್‌ ಇತ್ತೀಚೆಗಷ್ಟೇ ಅಗ್ರ ಶ್ರೇಯಾಂಕಿತ ಬೌಲರ್‌ ಆದರೂ ಆಡುವ ಹನ್ನೊಂದರಲ್ಲಿ ಅವಕಾಶ ಸಿಗಲಿಲ್ಲ. ಆಸ್ಟ್ರೇಲಿಯದ ರಚೆಲ್‌ ಹೇನ್ಸ್‌ ಅತ್ಯುತ್ತಮ ಫಾರಂನಲ್ಲಿದ್ದರೂ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಮೇಲಿನ ಸ್ಥಾನದಲ್ಲಿ ಆಡಲು ನಿರಾಕರಿಸಿದರು. ಈ ರೀತಿ ತಾನು ಚಲಿಸಿದರೆ ಕೆಳಹಂತದ ಬ್ಯಾಟಿಂಗ್‌ ಸರದಿ ದುರ್ಬಲವಾಗುತ್ತದೆ ಎಂಬುದು ಅವರ ನಿಲುವಾಗಿತ್ತು. ನೆನಪಿರಲಿ, ರಚೆಲ್‌ ಕಾಂಗರೂ ಪಡೆಯ ನಾಯಕಿ!

 ಗುರುಸಾಗರ

Advertisement

Udayavani is now on Telegram. Click here to join our channel and stay updated with the latest news.

Next