ಮುಂಬೈ: ಭಾರತದ ಹಿರಿಯ ಕ್ರಿಕೆಟಿಗರಾದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿಗೆ ಮಹಿಳಾ ಟಿ20 ಚಾಲೆಂಜ್ ಗೆ ಆಯ್ಕೆ ಮಾಡಲಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಟೂರ್ನಿಯಲ್ಲಿ ಹೊಸ ಮುಖಗಳನ್ನು ಸೇರಿಸಲು ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
“ನಾವು ಮಿಥಾಲಿ ರಾಜ್ ಮತ್ತು ಜೂಲನ್ ಅವರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದೇವೆ. ಈ ಪಂದ್ಯಾವಳಿಯಲ್ಲಿ ಆಡಲು ದೇಶೀಯ ಸರ್ಕ್ಯೂಟ್‌ನಿಂದ ಹೊಸ ಮುಖಗಳನ್ನು ಆಯ್ಕೆ ಮಾಡಿದ್ದೇವೆ. ನಾವು ಹೊಸ ಮುಖಗಳಿಗೆ ಅವಕಾಶ ನೀಡಲು ಬಯಸಿದ್ದೇವೆ. ಆದ್ದರಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ” ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ನವರೇ ಭಾರತ್ ಛೋಡೋ..; ಬಿಜೆಪಿ ಟೀಕೆ
ಮಿಥಾಲಿ ರಾಜ್ ಬದಲಿಗೆ ದೀಪ್ತಿ ಶರ್ಮಾ ವೆಲಾಸಿಟಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದು, ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಕ್ರಮವಾಗಿ ಸೂಪರ್‌ನೋವಾಸ್ ಮತ್ತು ಟ್ರೇಲ್‌ಬ್ಲೇಜರ್ಸ್ ಉಸ್ತುವಾರಿ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಟಿ20 ಚಾಲೆಂಜ್ ಮೂರು ತಂಡಗಳ ಕೂಟವಾಗಿರಲಿದ್ದು, ಪುಣೆಯಲ್ಲಿ ನಡೆಯಲಿದೆ, ಮೇ 23 ರಂದು ಕೂಟ ಪ್ರಾರಂಭವಾಗಲಿದೆ. ತಂಡದ ಆಟಗಾರರ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ಘೋಷಣೆ ಮಾಡುವ ನಿರೀಕ್ಷೆಯಿದೆ.