Advertisement

ಮಾರ್ಷ್‌, ಹೆಡ್‌ ನಾಯಕರು

06:00 AM May 31, 2018 | |

ಮೆಲ್ಬರ್ನ್: ಕಾಂಗರೂ ನಾಡಿನ ಕ್ರಿಕೆಟಿಗ ಮಿಚೆಲ್‌ ಮಾರ್ಷ್‌ ಅವರಿಗೆ ತಮ್ಮ ನಾಯಕತ್ವದ ಗುಣವನ್ನು ಸಾಬೀತುಪಡಿಸುವ ಅವಕಾಶವೊಂದು ಎದುರಾಗಿದೆ. ಮುಂಬರುವ ಭಾರತ ಪ್ರವಾಸದ ವೇಳೆ ಅವರನ್ನು ಆಸ್ಟ್ರೇಲಿಯ “ಎ’ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. 

Advertisement

ಈ ತಂಡ ಸೆಪ್ಟಂಬರ್‌ನಲ್ಲಿ ಭಾರತ “ಎ’ ವಿರುದ್ಧ ವಿಶಾಖಪಟ್ಟಣದಲ್ಲಿ 2 ಚತುರ್ದಿನ ಪಂದ್ಯಗಳನ್ನು ಆಡಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯ “ಎ’ ತಂಡ ದಕ್ಷಿಣ ಆಫ್ರಿಕಾ “ಎ’ ತಂಡವನ್ನೊಳಗೊಂಡ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ ಟ್ರ್ಯಾವಿಸ್‌ ಹೆಡ್‌ ಆಸ್ಟ್ರೇಲಿಯ “ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿ ಆ. 17ರಿಂದ ಅ. 29ರ ವರೆಗೆ ವಿಜಯವಾಡದಲ್ಲಿ ನಡೆಯಲಿದೆ.

ಮಿಚೆಲ್‌ ಮಾರ್ಷ್‌ ಈವರೆಗೆ ಯಾವುದೇ ಮಾದರಿಯಲ್ಲಿ ಆಸ್ಟ್ರೇಲಿಯ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿಲ್ಲ. ಟಿಮ್‌ ಪೇನ್‌ ಅವರ ನಾಯಕತ್ವದ ಅವಧಿಯಲ್ಲಿ ಏಕದಿನ ತಂಡದ ಉಪನಾಯಕರಾಗಿ ಕಾರ್ಯ ನಿಭಾಯಿಸಿದ್ದರು. ಭಾರತ ಪ್ರವಾಸದ ವೇಳೆ ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಎರಡೂ ತಂಡಗಳ ಉಪನಾಯಕರಾಗಿರುವರು. ಟೆಸ್ಟ್‌ ಆಟಗಾರರಾದ ಆ್ಯಶrನ್‌ ಅಗರ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಜಾನ್‌ ಹಾಲಂಡ್‌, ಉಸ್ಮಾನ್‌ ಖ್ವಾಜಾ, ಮ್ಯಾಥ್ಯೂ ರೆನ್‌ಶಾ ಅವರೆಲ್ಲ ಈ ತಂಡದಲ್ಲಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಆಸ್ಟ್ರೇಲಿಯ ಟೆಸ್ಟ್‌ ತಂಡದಲ್ಲಿದ್ದ ಜೋ ಬರ್ನ್ಸ್, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಶಾನ್‌ ಮಾರ್ಷ್‌ ಅವರನ್ನು ಕೈಬಿಡಲಾಗಿದೆ.

ಆಸ್ಟ್ರೇಲಿಯ “ಎ’ ಚತುರ್ದಿನ ತಂಡ 
ಮಿಚೆಲ್‌ ಮಾರ್ಷ್‌ (ನಾಯಕ), ಅಲೆಕ್ಸ್‌ ಕ್ಯಾರಿ (ಉಪನಾಯಕ), ಆ್ಯಶrನ್‌ ಅಗರ್‌, ಬ್ರಂಡನ್‌ ಡೊಗೆಟ್‌, ಪೀಟರ್‌ ಹ್ಯಾಂಡ್ಸ್‌ ಕಾಂಬ್‌, ಟ್ರ್ಯಾವಿಸ್‌ ಹೆಡ್‌, ಜಾನ್‌ ಹಾಲಂಡ್‌, ಉಸ್ಮಾನ್‌ ಖ್ವಾಜಾ, ಮೈಕಲ್‌ ನೆಸರ್‌, ಜೋಯೆಲ್‌ ಪ್ಯಾರಿಸ್‌, ಕರ್ಟಿಸ್‌ ಪ್ಯಾಟರ್ಸನ್‌, ಮ್ಯಾಥ್ಯೂ ರೆನ್‌ಶಾ, ಮಿಚ್‌ ಸ್ವೆಪ್ಸನ್‌, ಕ್ರಿಸ್‌ ಟ್ರಿಮೇನ್‌.

ಆಸ್ಟ್ರೇಲಿಯ “ಎ’ ಏಕದಿನ ತಂಡ
ಟ್ರ್ಯಾವಿಸ್‌ ಹೆಡ್‌ (ನಾಯಕ), ಅಲೆಕ್ಸ್‌ ಕ್ಯಾರಿ (ಉಪ ನಾಯಕ), ಆ್ಯಶrನ್‌ ಅಗರ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಶೇಜ್‌, ಮೈಕಲ್‌ ನೆಸರ್‌, ಮ್ಯಾಥ್ಯೂ ರೆನ್‌ಶಾ, ಜೇ ರಿಚರ್ಡ್‌ಸನ್‌, ಡಿ’ಆರ್ಸಿ ಶಾರ್ಟ್‌, ಬಿಲ್ಲಿ ಸ್ಟಾನ್‌ಲೇಕ್‌, ಮಿಚ್‌ ಸ್ವೆಪ್ಸನ್‌, ಕ್ರಿಸ್‌ ಟ್ರಿಮೇನ್‌, ಜಾಕ್‌ ವೈಲ್ಡರ್‌ಮತ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next