ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಮಹತ್ವದ ಸರಣಿಗೆ ಉಭಯ ತಂಡಗಳು ಸಿದ್ದತೆ ನಡೆದಿದೆ. ಇದೇ ಮಾಜಿ ವೇಗಿ ಮಿಚೆಲ್ ಜಾನ್ಸನ್ ಆಸೀಸ್ ತಂಡಕ್ಕೆ ಕೆಲವು ಸಲಹೆ ನೀಡಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು ಮೊದಲು ಒಂದೆರಡು ಬಾರಿ ಬ್ಯಾಟಿಂಗ್ ಮಾಡಬೇಕು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತವನ್ನು ದಾಖಲಿಸಬೇಕು. ಯಾಕೆಂದರೆ ಅದು ಭಾರತದ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ ಎಂದು ಜಾನ್ಸನ್ ಹೇಳಿದ್ದಾರೆ.
“ಸರಣಿಯ ಆರಂಭದಲ್ಲಿ ಸ್ಪಿನ್ ಗೆ ಹೆಚ್ಚು ಲಾಭ ಸಿಗುವ ಪಿಚ್ ನಲ್ಲಿ ಆಸೀಸ್ ಮೊದಲು ಬ್ಯಾಟ್ ಮಾಡಿ ಉತ್ತಮ ಮೊತ್ತವನ್ನು ಗಳಿಸಿದರೆ ಅದು ಭಾರತಕ್ಕೆ ಸ್ವಲ್ಪ ಒತ್ತಡವನ್ನು ನೀಡುತ್ತದೆ. ಆಸೀಸ್ ನಾಲ್ಕು ಸ್ಪಿನ್ನರ್ ಗಳನ್ನು ಹೊಂದಿದೆ ಮತ್ತು ಭಾರತೀಯರು ನಾಥನ್ ಲಿಯಾನ್ ಅವರ ಅನುಭವ ಮತ್ತು ಟೆಸ್ಟ್ ದಾಖಲೆಯನ್ನು ಗೌರವಿಸುತ್ತಾರೆ, ಅವರು ಯಾರಿಗೂ ಹೆದರುವುದಿಲ್ಲ. ಭಾರತೀಯ ಬ್ಯಾಟರ್ ಗಳು ತಮ್ಮ ಪಾದಗಳನ್ನು ಚೆನ್ನಾಗಿ ಬಳಸುತ್ತಾರೆ ಮತ್ತು ಸ್ಪಿನ್ ಅನ್ನು ಸರಿಯಾಗಿ ಆಡುತ್ತಾರೆ” ಎಂದು ಜಾನ್ಸನ್ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:2 ಕಿ.ಮೀ. ಉದ್ದದ ರೈಲ್ವೆ ಟ್ರ್ಯಾಕನ್ನೇ ಕದ್ದ ಖತರ್ನಾಕ್ ಕಳ್ಳರು… ಇಬ್ಬರು ಅಧಿಕಾರಿಗಳ ವಜಾ
“2008ರ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯಾ ಈ ವಾರ ನಾಗ್ಪುರದಲ್ಲಿ ಟೆಸ್ಟ್ ಆಡಲಿದೆ.ಅಲ್ಲಿ ಜೇಸನ್ ಕ್ರೆಜಾ 12 ವಿಕೆಟ್ ಪಡೆದಿದ್ದರು. ಯಾವುದೇ ಹುಲ್ಲು ಇಲ್ಲದ ಪಿಚ್ ಅನ್ನು ನಿರೀಕ್ಷಿಸಬಹುದು. ಹೆಚ್ಚು ಸ್ವಿಂಗ್ ಆಗುವುದಿಲ್ಲ” ಎಂದು ಜಾನ್ಸನ್ ಹೇಳಿದರು.