Advertisement

ಬ್ರಾಹ್ಮಣ ಮಹಾಸಭಾ ಲೆಟರ್‌ಹೆಡ್‌ ದುರುಪಯೋಗ: ಅಶೋಕ್‌ ಹಾರನಹಳ್ಳಿ

12:49 AM Nov 06, 2023 | Team Udayavani |

ಬೆಂಗಳೂರು: ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಲೆಟರ್‌ಹೆಡ್‌ಗಳನ್ನು ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ ಆರೋಪಿಸಿ ದ್ದಾರೆ. ಮಹಾಸಭಾಧ್ಯಕ್ಷರ ಸಹಿಯನ್ನೂ ಫೋರ್ಜರಿ ಮಾಡಿದ್ದಲ್ಲದೆ, ಸುಳ್ಳು ಸುದ್ದಿಯನ್ನೂ ಹರಡುತ್ತಿದ್ಧಾರೆ. ಸರ್‌.ಎಂ.ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕಿನ ಹೆಸರನ್ನು ಕೆಡಿಸುವ ದೃಷ್ಟಿಯಿಂದ ಯಾರೋ ಪಟ್ಟಭದ್ರಹಿತಾಸಕ್ತಿಗಳು ಸುಳ್ಳು ಸುದ್ದಿ ಹರಡಿಸಿರುತ್ತಾರೆ. ಈ ಪತ್ರಕ್ಕೆ ಸಂಖ್ಯೆಯಾಗಲೀ, ದಿನಾಂಕವಾಗಲೀ ನಮೂದಿಸಿರುವುದಿಲ್ಲ.

Advertisement

ಪ್ರಸ್ತಾವಿತ ವಿಷಯದಲ್ಲಿ ಸ್ಪಷ್ಟವಾಗಿ ದುರು ಪಯೋಗಿಸಿರುವುದು ಗೋಚರ ವಾಗುತ್ತಿದೆ. ಆ ಪತ್ರದಲ್ಲಿ ಇರತಕ್ಕಂತಹ ಯಾವುದೇ ವಿಚಾರಗಳು ಕೂಡ ಮಹಾಸಭೆಗಾಗಲೀ ಅಧ್ಯಕ್ಷರ ಗಮನಕ್ಕಾಗಲೀ ಬಂದಿರುವುದಿಲ್ಲ. ಈ ವಿಷಯದಲ್ಲಿ ಕಿಡಿಗೇಡಿಗಳು ಮಹಾಸಭೆಯ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಬಹಳ ಶೋಚನೀಯ ಸಂಗತಿ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next