Advertisement
2 ಲಕ್ಷ ರೂ. ಜಮೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಿಕ್ಕೆಗುಟ್ಟೆ ಅಂಗನವಾಡಿ ಕೇಂದ್ರದ ದುರಸ್ತಿ ಮತ್ತು ಮರು ನಿರ್ಮಾಣಕ್ಕೆ 2019ನೇ ಜೂ.18ರಂದು ಕುರಂಕೋಟೆ ಗ್ರಾಪಂ ವರ್ಗ-1ರ ಪಿಡಿಒ ಖಾತೆಗೆ 2 ಲಕ್ಷ ರೂ. ಜಮೆಯಾಗಿದೆ. ಆದರೆ ಹಣವನ್ನು ಯಾವುದೇ ಮಾನದಂಡವಿಲ್ಲದೇ ದುರುಪಯೋಗ ಮಾಡಿಕೊಂಡಿದ್ದಾರೆ.
Related Articles
Advertisement
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಕೊರಟಗೆರೆಯ ಕುರಂಕೋಟೆ, ಹಂಚಿಹಳ್ಳಿ, ಕೋಳಾಲ, ಪಾತಗಾನಹಳ್ಳಿ, ಅಕ್ಕಿರಾಂಪುರ, ತುಂಬಾಡಿ, ಬೂದಗವಿ ಮತ್ತು ಅರಸಾಪುರ ಗ್ರಾಪಂಗೆ ಎಸ್‌ಸಿಪಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕಾಗಿ ತಲಾ 2ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅಂಗನವಾಡಿ ಉನ್ನತೀಕರಣ ಆಗದೆ ಅನುದಾನ ಖರ್ಚಾಗಿದೆ ಎನ್ನಲಾಗಿದ್ದು, ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕಾಗಿದೆ.
ಕುರಂಕೋಟೆ ಗ್ರಾಪಂ ಪ್ರಭಾರ ಪಿಡಿಒ ಲಕ್ಷ್ಮಣ್ ಅಂಗನವಾಡಿ ಕಾಮಗಾರಿ ಮತ್ತು ಅನುದಾನದ ದಾಖಲೆ ಹಸ್ತಾಂತರ ಮಾಡದಿರುವ ಬಗ್ಗೆ ತಾಪಂ ಇಒಗೆ ದೂರು ನೀಡಿದ್ದೇನೆ. ಗ್ರಾಪಂ ಖಾತೆಗೆ ಜಮಾ ಆಗಿರುವ ಅಂಗನವಾಡಿ ಅನುದಾನ ದುರುಪಯೋಗ ಆಗಿದ್ದರೆ ಜಿಪಂ ಸಿಇಒ ಕ್ರಮ ಕೈಗೊಳ್ಳಲಿದ್ದಾರೆ.-ನಾಗರಾಜು, ಪಿಡಿಒ, ಕುರಂಕೋಟೆ ಗ್ರಾಪಂನಿಂದಲೇ ಬರಕದ ಕದುರಯ್ಯನಿಗೆ ಅಂಗನವಾಡಿ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಅಂದಾಜುಪಟ್ಟಿ ತಯಾರಿಸಿ ಕಾಮಗಾರಿ ಪ್ರಾರಂಭಿಸಲು ಸೂಚಿಸಲಾಗಿದೆ. ಅರ್ಧ ಕಾಮಗಾರಿ ಮುಗಿದಿದ್ದು, ಕಾಮಗಾರಿ ಮುಗಿಯದೇ ಹಣ ಮಂಜೂರು ಮಾಡಲು ಗ್ರಾಪಂಗೆ ಸೂಚನೆ ನೀಡಿಲ್ಲ.
-ದಯಾನಂದ, ಜೆಇ, ಜಿಪಂ ಗ್ರಾಪಂ ಸದಸ್ಯರ ದೂರಿನ ಅನ್ವಯ ತಾಪಂ ಸಹಾಯಕ ಲೆಕ್ಕಾಧಿಕಾರಿ ಈಗಾಗಲೇ ಕುರಂಕೋಟೆ ಗ್ರಾಪಂ ದಾಖಲೆ ಪರಿಶೀಲಿಸಿದ್ದಾರೆ. ಅಂಗನವಾಡಿ ಉನ್ನತೀಕರಣದ ಅನುದಾನ ದುರುಪಯೋಗ ಆಗಿರುವ ಬಗ್ಗೆ ಕಂಡುಬಂದ ಹಿನ್ನೆಲೆಯಲ್ಲಿ ಜಿಪಂ ಮತ್ತು ಭಷ್ಟ್ರಚಾರ ನಿಗ್ರಹ ದಳಕ್ಕೆ ಪತ್ರ ಬರೆಯಲಾಗಿದೆ.
-ಶಿವಪ್ರಕಾಶ್, ಇಒ, ಕೊರಟಗೆರೆ * ಎನ್.ಪದ್ಮನಾಭ್