Advertisement

ಕೋರ್ಟು ನೋಟಿಸನ್ನು ಜಾಮೀನು ಎಂದು ಭಾವಿಸಿ ಕೈದಿಗಳ ಬಿಡುಗಡೆ; ಮರು ಬಂಧನ !

10:14 AM Jul 14, 2019 | Team Udayavani |

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಇಬ್ಬರು ಕೊಲೆ ಆರೋಪಿಗಳಿಗೆ ಜಾಮೀನು ಸಿಗದಿದ್ದರೂ ಬಿಡುಗಡೆ ಮಾಡಿದ ಘಟನೆ ನಡೆದಿದೆ.

Advertisement

2016ರ ಮೇ 15ರಂದು ಬಿಜೈ ಕೆಎಸ್ಸಾರ್ಟಿಸಿ ಬಳಿ ನಡೆದ ಕದ್ರಿ ರೋಹಿತ್‌ ಕೋಟ್ಯಾನ್‌ ಕೊಲೆ ಪ್ರಕರಣದ ಆರೋಪಿಗಳಾಗಿರುವ ಕದ್ರಿ ಜಾರ್ಜ್‌ ಮಾರ್ಟಿಸ್‌ ರಸ್ತೆ ನಿವಾಸಿ ಶಿವಾಜಿ ಮತ್ತು ಬಿಕರ್ನಕಟ್ಟೆ ಕಂಡೆಟ್ಟು ನಿವಾಸಿ ಜಗದೀಶ್‌ ಬಿಡುಗಡೆಗೊಂಡವರು.

ಇವರಿಬ್ಬರಿಗೆ ಕೋರ್ಟ್‌ನಿಂದ ನೋಟಿಸ್‌ ಬಂದಿದ್ದು, ಇದನ್ನು ಜಾಮೀನು ಬಿಡುಗಡೆ ಆದೇಶ ಎಂದು ಭಾವಿಸಿದ ಜೈಲರ್‌ಗಳು ಜೈಲು ಅಧೀಕ್ಷಕರ ಅನುಮತಿ ಪಡೆದು ಜು. 9ರಂದು ಬಿಡುಗಡೆಗೊಳಿಸಿದ್ದರು. ಜೈಲಿನ ಎಲ್ಲ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜಾಮೀನಿನ ನಿಯಮ ಪ್ರಕಾರವೇ ಬಿಡುಗಡೆ ಮಾಡಲಾಗಿತ್ತು.

ಬಿಡುಗಡೆಯಾದ ಆರೋಪಿಗಳು ಬಳಿಕ ತಮ್ಮ ವಕೀಲರ ಬಳಿ ಹೋಗಿದ್ದರು. ಈ ಸಂದರ್ಭ ಗೊಂದಲಕ್ಕೀಡಾದ ವಕೀಲರು ಜೈಲಿನಲ್ಲಿ ಆದ ಎಡವಟ್ಟು ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಜೈಲಧಿಕಾರಿಗಳು ಆರೋಪಿಗಳ ಮನೆಗೆ ತೆರಳಿ ಅವರನ್ನು ಪುನಃ ವಶಕ್ಕೆ ಪಡೆದು ಜೈಲಿಗೆ ಸೇರಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next