Advertisement

ಭಾರತದ ದಿಟ್ಟ ಗಡಿ ಭದ್ರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಮೆರಿಕ

06:59 PM Mar 24, 2021 | Team Udayavani |

ವಾಷಿಂಗ್ಟನ್‌: “ಭಾರತ- ಚೀನಾ ನಡುವಿನ ಅಪನಂಬಿಕೆ ಸಾರ್ವಕಾಲಿಕವಾಗಿ ಹೆಚ್ಚಳ ಕಂಡಿದೆ. ಉತ್ತರದ ಗಡಿಯನ್ನು ಸುರಕ್ಷಿತವಾಗಿಸಲು ಭಾರತ ನಡೆಸಿದ ದಿಟ್ಟ ಹೋರಾಟ ಶ್ಲಾಘನೀಯ ಎಂದು ಅಮೆರಿಕ ಕೊಂಡಾಡಿದೆ.

Advertisement

ಅಮೆರಿಕದ ಅಡ್ಮಿರಲ್‌ ಜಾನ್‌ ಸಿ. ಅಕ್ವಿಲಿನೊ ಸುದ್ದಿಗಾರರೊಂದಿಗೆ ಮಾತನಾಡಿ, “ಚೀನಾದ ಒನ್‌ ಬೆಲ್ಟ್- ಒನ್‌ ರೋಡ್‌ ಯೋಜನೆಯನ್ನು ಭಾರತ ಅನುಮಾನದಿಂದಲೇ ನೋಡುತ್ತಿದೆ. ಪಾಕಿಸ್ತಾನದ ಗ್ವದಾರ್‌, ಶ್ರೀಲಂಕಾದ ಹಂಬಾಂಟೊಟಾ ಮೇಲೆ ಹಿಡಿತ ಸಾಧಿಸುತ್ತಿರುವ ಚೀನಾದ ಹೆಜ್ಜೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

ಹಿಂದೂ ಮಹಾಸಾಗರದಲ್ಲಿ ಪೀಪಲ್ಸ್‌ ರಿಪಬ್ಲಿಕ್‌ ಚೀನಾದ ಪಾರದರ್ಶಕ ಕೊರತೆ ಮತ್ತು ನಕಲಿ ಕ್ರಮಗಳು, ಆ ವಲಯದ ಭದ್ರತೆಗೆ ಆತಂಕ ತಂದೊಡ್ಡಿವೆ’ ಎಂದು ಆರೋಪಿಸಿದರು.

ಭಾರತ- ಅಮೆರಿಕ ನಡುವೆ ಗಟ್ಟಿಯಾಗುತ್ತಿರುವ ದ್ವಿಪಕ್ಷೀಯ ಬಾಂಧವ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ :ನೀವು ತಿನ್ನುವ ಆಹಾರ ಮತ್ತು ಬೆಳೆಯುವ ರೈತರನ್ನು ಗೌರವಿಸಿ: ರೈತರ ಪರ ನಿಂತ ವಿಶಾಲ್ ದದ್ಲಾನಿ  

Advertisement
Advertisement

Udayavani is now on Telegram. Click here to join our channel and stay updated with the latest news.

Next