ಕಡಿತವಾಗಿದ್ದರೂ ವಿಮಾ ಕಂಪೆನಿಗೆ ಸಮಯಕ್ಕೆ ಪಾವತಿಯಾಗಿಲ್ಲ ಎಂಬ ಗೊಂದಲ ನೌಕರರಿಗೆ ಸಂಕಷ್ಟ ತಂದೊಡ್ಡಿದೆ.
Advertisement
ಹುಬ್ಬಳ್ಳಿ ವಿಭಾಗ ಹಾಗೂ ಹುಬ್ಬಳ್ಳಿ ನಗರ ಸಾರಿಗೆ ವಿಭಾಗದಲ್ಲಿ ನೌಕರರು ವಿಮಾ ಕಂಪೆನಿಯಿಂದ ಪಡೆಯುವ ಸೌಲಭ್ಯ ದೊರೆಯದೆ ಪರದಾಡುವಂತಾಗಿದೆ. ತಾವು ಮಾಡದ ತಪ್ಪಿಗೆ ಪರಿತಪಿಸುವಂತಾಗಿದೆ ಎಂದು ಹೇಳಲಾಗುತ್ತಿದೆ.
ಎದುರಿಸುವಂತಾಗಿದೆ.
Related Articles
Advertisement
ವಾಯವ್ಯ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಹಾಗೂ ಎಲ್‌ಐಸಿ ಅಧಿಕಾರಿಗಳು ಕುಳಿತು ಸಮಸ್ಯೆ ಇತ್ಯರ್ಥಕ್ಕೆ ಪರಿಹಾರ ಕಂಡುಕೊಳ್ಳುವ ಮೂಲಕ ಗೊಂದಲ ನಿವಾರಣೆ ಮಾಡಿ ನೌಕರರಿಗೆ ಸಕಾಲಕ್ಕೆ ಪರಿಹಾರ ದೊರೆಯುವಂತೆ ಮಾಡಲು ಸೂಕ್ತ ಹಾಗೂ ತ್ವರಿತ ಕ್ರಮಕ್ಕೆ ಮುಂದಾಗಬೇಕಾಗಿದೆ.
ಕೇಂದ್ರ ಸಚಿವರಿಗೆ ಮನವಿಎಲ್ಐಸಿ ಕಂತು ಪಾವತಿ ವಿಳಂಬದಿಂದ ಪರಿಹಾರ ಪಡೆಯಲು ಸಾಧ್ಯವಾಗದೆ ಸುಮಾರು 4,000 ನೌಕರರು ಸಂಕಷ್ಟ ಪಡುತ್ತಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿ ವಾಯವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದ ನೌಕರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದರ ಪ್ರತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೂ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಆದಷ್ಟು ಬೇಗ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಮತ್ತೊಮ್ಮೆ ಯಾಕೆ ಪಾವತಿಸಬೇಕು?
ಮರಣ ಹೊಂದಿದ ನೌಕರರ ಅವಲಂಬಿತರು, ಮನಿಬ್ಯಾಕ್ ಪಾಲಿಸಿ ಮಾಡಿಸಿದ ನೌಕರರು ಪರಿಹಾರಕ್ಕೆ ಎಲ್‌ಐಸಿ ಕಚೇರಿಗೆ ಹೋಗಿ ಕೇಳಿದರೆ, ಖಾತೆಗೆ ಹಣ ಜಮಾ ಆಗಲು ತಾಂತ್ರಿಕ ತೊಂದರೆ ಎದುರಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಯಿಂದ ವಿಳಂಬವಾಗಿ ವಿಮಾ ಕಂತು ಪಾವತಿ ಆಗಿರುವುದಿಂದ ವಿಳಂಬ ಅವಧಿಯ ದಂಡ ಪಾವತಿಸಬೇಕಾಗಿದೆ. ಈ ಬಗ್ಗೆ ಧಾರವಾಡ ವಿಭಾಗೀಯ ಕಚೇರಿಯಿಂದ ಆದೇಶ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಬೇಕು ಎಂದಾದರೆ ವಿಮಾ ಕಂತಿನ ಬಾಕಿ ಹಾಗೂ ದಂಡದ ಹಣ ಪಾವತಿಸಿ, ಖಾತೆಯನ್ನು ಚಾಲ್ತಿಗೊಳಿಸಿದ ನಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಎಂದು ಹೇಳಲಾಗುತ್ತಿದೆ ಎನ್ನಲಾಗಿದ್ದು, ಈಗಾಗಲೇ ಮಾಸಿಕವಾಗಿ ತಮ್ಮ ವೇತನದಲ್ಲಿ ವಿಮಾ ಕಂತು ಹಣ ಕಡಿತಗೊಂಡಿದ್ದು, ಮತ್ತೂಮ್ಮೆ ಯಾಕೆ ಪಾವತಿಸಬೇಕು ಎಂಬುದು ನೌಕರರ ಪ್ರಶ್ನೆಯಾಗಿದೆ.