ಜೇವರ್ಗಿ: ಎಸ್ಸಿ ಜನಾಂಗದ ಬಡಾವಣೆ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಅಧಿಕಾರಿಗಳು, ಗುತ್ತಿಗೆದಾರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಮಾದಿಗ ಸಂಘ ಜಿಲ್ಲಾ ಘಟಕ ಲೋಕೋಪಯೋಗಿ ಇಲಾಖೆಗೆ ದೂರು ಸಲ್ಲಿಸಿದೆ.
ಲೋಕೋಪಯೋಗಿ ಇಲಾಖೆಯಿಂದ ಪಟ್ಟಣದ ಶಹಾಪುರ ರಸ್ತೆಯಸಿದ್ದಣ್ಣ ಹರಿಜನ ಮನೆಯಿಂದ ಮುಖ್ಯ ರಸ್ತೆ ವರೆಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಗಾಂಧಿ ನಗರದ ಹರಿಜನವಾಡಾದಿಂದ ಮುಖ್ಯರಸ್ತೆ ವರೆಗೆ ವ್ಹಾಯಾ ಹಳೆ ತಹಶೀಲ್ದಾರ್ ಕಚೇರಿಯಿಂದ ಸಿಸಿ ರಸ್ತೆ,ವಡ್ಡರಗಲ್ಲಿಯಿಂದ ಮುಖ್ಯರಸ್ತೆ ವರೆಗೆಸಿಸಿ ರಸ್ತೆ ಹಾಗೂ ತಾಲೂಕಿನ ಅವರಾದಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿನಿರ್ಮಾಣ ಕಾಮಗಾರಿಗೆ ಸುಮಾರು80 ಲಕ್ಷ ರೂ. ಅನುದಾನ ಬಿಡುಗಡೆಮಾಡಲಾಗಿದೆ. ಆದರೆ ಗುತ್ತಿಗೆದಾರಹಾಗೂ ಅಧಿಕಾರಿಗಳು ಸೇರಿಕೊಂಡು ನಾಲ್ಕು ಕಡೆ ಮಾಡಬೇಕಾದ ಈ ಕಾಮಗಾರಿಯನ್ನು ತಹಶೀಲ್ ಕಚೇರಿಆವರಣ ಹಾಗೂ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾತ್ರೋರಾತ್ರಿ ಕೆಲಸ ಮಾಡಿ ಮುಗಿಸಿದ್ದಾರೆ. ಇದುಪಟ್ಟಣದ ನಾಗರಿಕರಲ್ಲಿ ಹಲವಾರು ಅನುಮಾನ ಹುಟ್ಟಿಸಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಮಾರು 80 ಲಕ್ಷ ರೂ.ಅಂದಾಜು ವೆಚ್ಚದ ಈ ಕಾಮಗಾರಿಗಳು ಪರಿಶಿಷ್ಟ ಜಾತಿಗಳ ಬಡಾವಣೆ ಅಭಿವೃದ್ಧಿಗಾಗಿ ಮೀಸಲಾಗಿದ್ದ ಅನುದಾನವಾಗಿದೆ.ಆದರೆ ನಿಗದಿತ ಬಡಾವಣೆಗಳಲ್ಲಿ ನಿರ್ಮಿಸಬೇಕಾಗಿದ್ದ ಕಾಮಗಾರಿಯನ್ನು ಬೇರೆ ಕಡೆ ನಿರ್ಮಿಸಲಾಗಿದೆ. ಅಲ್ಲದೇ ರಾತ್ರಿ ವೇಳೆ ಕಳಪೆ ಕಾಮಗಾರಿ ಮಾಡಲಾಗಿದೆ. ಆದ್ದರಿಂದ ಈ ಕುರಿತುಸೂಕ್ತ ತನಿಖೆ ನಡೆಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದೂರುನೀಡಲು ಸಂಘ ನಿರ್ಧರಿಸಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಅನುದಾನ ದುರ್ಬಳಕೆ ಮಾಡಿಕೊಂಡು ಕಳಪೆ ಕಾಮಗಾರಿ ನಡೆಸಿದ ಲೋಕೋಪಯೋಗಿಇಲಾಖೆ ಎಇಇ ಹಾಗೂ ಎಇ ಅವರನ್ನು ಅಮಾನತುಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು.
-ಮರೆಪ್ಪ ಕೋಬಾಳಕರ್, ಅಧ್ಯಕ್ಷ, ಮಾದಿಗ ದಂಡೋರಾ ಹೋರಾಟ ಸಮಿತಿ
ಎಸ್ಸಿಪಿ ಅನುದಾನವನ್ನು ನಿಗದಿತ ಬಡಾವಣೆಗಳಲ್ಲಿ ಮಾಡದೇ, ಬೇರೆ ಕಡೆ ರಾತ್ರೋ ರಾತ್ರಿ ಮಾಡಿದ್ದಲ್ಲದೇ,ಕಳಪೆಯಾಗಿ ಮಾಡಿದ್ದು ಖಂಡನೀಯ. ಸರ್ಕಾರದ ಹಣ ಲೂಟಿ ಮಾಡಲು ಹೊರಟಿರುವ ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಸುಧೀಂದ್ರ ಇಜೇರಿ, ಅಧ್ಯಕ್ಷ, ಜಯ ಕರ್ನಾಟಕ ಸಂಘಟನೆ