Advertisement
ಹೊಸಪೇಟೆ ನಗರದ ಭಟ್ರಳ್ಳಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ, ಅಭಿವೃದ್ಧಿ ಪರವಾದ ಚಿಂತನೆ ನಡೆಸುವುದರ ಜತೆಗೆ ವಿಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾದ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಖಂಡಿಸಲಾಯಿತು.
Related Articles
Advertisement
ದೇಶ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಸೃಷ್ಟಿಸುತ್ತಿರುವ ಗೊಂದಲದ ವಾತಾವರಣ, ಓಲೈಕೆ ರಾಜಕಾರಣ, ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ಅಶಾಂತಿ ಸೃಷ್ಟಿಸುತ್ತಿರುವುದಕ್ಕೆ ಖಂಡನೆ ವ್ಯಕ್ತವಾಯಿತು. ಮುಂದಿನ ಚುನಾವಣೆಗೆ ನಮ್ಮ ಸಿದ್ಧತೆ, ಕಾರ್ಯತಂತ್ರ ಗಳು ಹೇಗಿರಬೇಕು. ಯಾವ ರೀತಿ ಚುನಾವಣೆಗಳನ್ನು ಗೆಲ್ಲಬೇಕು. ಬೂತ್ ಮಟ್ಟದ ಕಾರ್ಯಕರ್ತರನ್ನು ಗುರುತಿಸಬೇಕು. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ, ಅವರೆಲ್ಲರನ್ನೂ ತೃಪ್ತಿ ಪಡಿಸುವ ಕೆಲಸ ಮಾಡಿದರೆ ಮಾತ್ರ ನಮಗೆ ಗೆಲುವು.
ಇಲ್ಲದಿದ್ದಲ್ಲಿ ನಮ್ಮನ್ನು ತಿರಸ್ಕರಿಸಬಹುದು. ಆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜನರ ಪ್ರೀತಿ-ವಿಶ್ವಾಸ ಗಳಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂಬ ಸಂದೇಶ ರವಾನಿಸಿ ಸಂಕಲ್ಪ ತೊಡುವ ಮೂಲಕ ಕಾರ್ಯಕಾರಿಣಿ ಸಭೆಯನ್ನು ಕೊನೆಗೊಳಿಸಲಾಯಿತು.
ಎರಡು ದಿನಗಳ ಕಾಲ ನಡೆದ ಕಾರ್ಯಕಾರಣಿ ಸಭೆಗೆ ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ಕೈಜೋಡಿಸಿದರು. ಪಕ್ಷದ ಹಿರಿಯ ಮುಖಂಡರ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಕಾರ್ಯಕರ್ತರು, ಗುರುತಿನ ಚೀಟಿಯಿಲ್ಲದೆ ಯಾರೇ ಕಂಡರೂ, ತಾವ್ಯಾರು? ಐಡಿ ಕಾರ್ಡ್ ಇಲ್ಲ ಎಂದು ಪ್ರಶ್ನಿಸುತ್ತಿದ್ದರು. ಕಾರ್ಯಕಾರಣಿ ಸಭೆಯೊಳಗೆ ಅಪೇಕ್ಷಿತ ವ್ಯಕ್ತಿಗಳನ್ನು ಹೊರತುಪಡಿಸಿ, ಪಕ್ಷದ ಕಾರ್ಯಕರ್ತರು ಸೇರಿ ಯಾರೊಬ್ಬರನ್ನು ಸಹ ಒಳಗೆ ಬಿಡದೆ ತಡೆಯುತ್ತಿದ್ದರು.