Advertisement

ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯರು ಪತ್ತೆ

12:31 AM Jul 01, 2023 | Team Udayavani |

ಕಾಸರಗೋಡು: ಕಳೆದ ಮೂರು ವರ್ಷಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಹಾಗೂ ಇಬ್ಬರು ಯುವತಿಯರನ್ನು ಜಿಲ್ಲಾ ಕ್ರೈಂ ಬ್ರಾಂಚ್‌ ಪತ್ತೆ ಹಚ್ಚಿದೆ.
ಮಂಜೇಶ್ವರ ಗೇರುಕಟ್ಟೆಯಿಂದ 2022ರ ಅಕ್ಟೋಬರ್‌ನಲ್ಲಿ ನಾಪತ್ತೆಯಾಗಿದ್ದ ಕುಂಞಾಬಿ (30) ಯನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ಪತ್ತೆ ಹಚ್ಚಲಾಗಿದೆ. ಇದೇ ರೀತಿ ಕಳೆದ ಮೇ ತಿಂಗಳಲ್ಲಿ ನಾಪತ್ತೆಯಾಗಿದ್ದ ಚಿತ್ತಾರಿಯ ಲಕ್ಷ್ಮಿ(23)ಯನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಪತ್ತೆ ಹಚ್ಚಲಾಗಿದೆ. 2020ರ ಜುಲೈ 15ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಪೆರುವಾಡ್‌ ಕಡಪ್ಪುರದ ಬಿಲಾಲ್‌ನನ್ನು ತಮಿಳುನಾಡಿನ ಹೊಸೂರಿನಿಂದ ಪತ್ತೆ ಹಚ್ಚಲಾಗಿದೆ.

Advertisement

ನಿಗೂಢವಾಗಿ ನಾಪತ್ತೆಯಾಗು ವವರನ್ನು ಪತ್ತೆ ಹಚ್ಚಲು ರಾಜ್ಯ ಗೃಹ ಖಾತೆ ನೀಡಿದ ನಿರ್ದೇಶ ಪ್ರಕಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ವೈಭವ್‌ ಸಕ್ಸೇನಾ ಅವರು 2022ರ ಎಪ್ರಿಲ್‌ 18ರಂದು ಜಿಲ್ಲಾ ಕ್ರೈಂ ಬ್ರಾಂಚ್‌ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.

ಈ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ 2022ರಿಂದ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿ ದಂತೆ ಹತ್ತರಷ್ಟು ಮಂದಿಯನ್ನು ಪತ್ತೆ ಹಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next