Advertisement

ಉಪರಾಷ್ಟ್ರಪತಿಗಳ ಚಪ್ಪಲಿ ಮಿಸ್ಸಿಂಗ್‌

07:00 AM Jan 20, 2018 | |

ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಚಪ್ಪಲಿ ಮಿಸ್ಸಿಂಗ್‌..! ಹೌದು, ಇಂತಹ ಸ್ವಾರಸ್ಯಕರ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ.

Advertisement

ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜಧಾನಿಗೆ ಬಂದಿರುವ ಉಪರಾಷ್ಟ್ರಪತಿಗಳು ಬೆಳಗ್ಗೆ ಸಂಸದ ಪಿ.ಸಿ.ಮೋಹನ್‌ ಅವರ ನಿವಾಸಕ್ಕೆ ತಿಂಡಿಗೆಂದು ತೆರಳಿದ್ದರು.

ಮನೆಯೊಳಗೆ ಹೋಗುವ ಮುನ್ನ ಹೊರಗೆ ತೆಗೆದಿಟ್ಟಿದ್ದ ಅವರ ಚಪ್ಪಲಿ ವಾಪಸ್‌ ಬರುವಷ್ಟರಲ್ಲಿ ಗಾಯಬ್‌!

ಗಾಬರಿಗೊಂಡು ಅಲ್ಲಿದ್ದವರೆಲ್ಲಾ ಚಪ್ಪಲಿಗಾಗಿ ಹುಡುಕಾಡಿದರಾದರೂ ಸಿಗಲಿಲ್ಲ. ಅಂಗಡಿಗೆ ಹೋಗಿ ಹೊಸ ಚಪ್ಪಲಿ ತರಲು ಉಪ ರಾಷ್ಟ್ರಪತಿಗಳ ಅಂಗರಕ್ಷಕರು ಹೋದರಾದರೂ ಅಷ್ಟು ಬೆಳಗ್ಗೆ ಯಾವ ಚಪ್ಪಲಿ ಅಂಗಡಿಯೂ ತೆಗೆದಿರಲಿಲ್ಲ.

ಇದರಿಂದ ಉಪರಾಷ್ಟ್ರಪತಿಗಳ ಜತೆಗಿದ್ದ ಸಂಸದ ಪಿ.ಸಿ.ಮೋಹನ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮುಜುಗರಕ್ಕೆ ಒಳಗಾದರು. ಕೆಲ ಹೊತ್ತಿನ ಬಳಿಕ ಸಿಬ್ಬಂದಿ ಎಲ್ಲಿಂದಲೋ ಉಪರಾಷ್ಟ್ರಪತಿಗಳ ಚಪ್ಪಲಿ ತಂದುಕೊಟ್ಟ ಮೇಲೆ ಗೊಂದಲಕ್ಕೆ ತೆರೆಬಿದ್ದು  ನಂತರ ಅವರು ತಮ್ಮ ಚಪ್ಪಲಿ ಧರಿಸಿ ನಿಗದಿತ ಪಾಲ್ಗೊಳ್ಳಬೇಕಾಗಿದ್ದ ಕಾರ್ಯಕ್ರಮಕ್ಕೆ ಹೊರಟರು.

Advertisement

ಆಗಿದ್ದಿಷ್ಟು: ಬೆಳಗಿನ ಉಪಾಹಾರಕ್ಕಾಗಿ ಸಂಸದ ಪಿ.ಸಿ.ಮೋಹನ್‌ ಮನೆಗೆ ಬಂದಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮನೆಯ ಹೊರಗೆ ಚಪ್ಪಲಿ ಬಿಟ್ಟು ಒಳ ಹೋಗಿದ್ದರು. ತಿಂಡಿ ಮುಗಿಸಿ ಬರುವಷ್ಟರಲ್ಲಿ ಚಪ್ಪಲಿ ನಾಪತ್ತೆಯಾಗಿತ್ತು. ಮನೆ ಮಹಡಿ ಮೇಲೆ ಬಿಟ್ಟಿರಬಹುದು ಎಂದು ಅಲ್ಲೆಲ್ಲಾ ಹುಡುಕಲಾಯಿತು. ಈ ಮಧ್ಯೆ ಪಿ.ಸಿ.ಮೋಹನ್‌ ಮನೆಗೆ ಬಂದಿದ್ದ ಅತಿಥಿಯೊಬ್ಬರು ಉಪರಾಷ್ಟ್ರಪತಿಗಳು ಧರಿಸಿದ್ದ ಚಪ್ಪಲಿ ಮಾದರಿಯಲ್ಲೇ ಇದ್ದ ಪಾದರಕ್ಷೆ ಹಾಕಿಕೊಂಡು ಬಂದಿದ್ದರು.ಹೊರಡುವ ಗಡಿಬಿಡಿಯಲ್ಲಿ ಆ ವ್ಯಕ್ತಿ ಉಪರಾಷ್ಟ್ರಪತಿಗಳ ಚಪ್ಪಲಿ ಹಾಕಿಕೊಂಡು ಹೋಗಿದ್ದರು. ಚಪ್ಪಲಿ ನಾಪತ್ತೆ ಸುದ್ದಿ ಗೊತ್ತಾಗುತ್ತಿದ್ದಂತೆ ತಾವು ಧರಿಸಿಕೊಂಡ ಚಪ್ಪಲಿ ಬದಲಾಗಿದೆ ಎಂಬುದನ್ನು ಗಮನಿಸಿದ ಆ ವ್ಯಕ್ತಿ ಚಪ್ಪಲಿ ವಾಪಸ್‌ ಕೊಟ್ಟು ಕ್ಷಮೆಯಾಚಿಸಿದರು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next