Advertisement
ತೆಲಂಗಾಣದ ಸಾಫ್ಟ್ ವೇರ್ ಇಂಜಿನಿಯರ್ ಪ್ರಶಾಂತ್ ಕಳೆದ 31 ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಪ್ರಶಾಂತ್ ಪೋಷಕರ ಮಾಹಿತಿ ಪ್ರಕಾರ, ತಮ್ಮ ಮಗ ಪ್ರಶಾಂತ್ ಜೀವಂತವಾಗಿರುವುದನ್ನು ಕಂಡಿದ್ದು, ಆತ ಬಹಾವಾಲ್ಪುರ್ ನ ಪಾಕಿಸ್ತಾನದ ಪೊಲೀಸರ ವಶದಲ್ಲಿ ಇದ್ದಿರುವುದಾಗಿ ತಿಳಿಸಿದ್ದಾರೆ.
Related Articles
Advertisement
ನನ್ನ ಮಗ 2017ರ ಏಪ್ರಿಲ್ 11ರಂದು ಬೆಳಗ್ಗೆ 9ಗಂಟೆಗೆ ಆಫೀಸ್ ನಿಂದ ತೆರಳಿದವನು, ಈವರೆಗೂ ಪತ್ತೆಯಾಗಿರಲಿಲ್ಲವಾಗಿತ್ತು ಎಂದು ತಂದೆ ಬಾಬು ರಾವ್ ವೈನ್ದಂ ತಿಳಿಸಿದ್ದಾರೆ. ಈ ಬಗ್ಗೆ 2017ರ ಏಪ್ರಿಲ್ 29ರಂದು ಮಾಧಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತದನಂತರ ಆತನ ಗೆಳೆಯರು, ಸಂಬಂಧಿಗಳು ಸೇರಿದಂತೆ ಎಲ್ಲಾ ರೀತಿಯಿಂದಲೂ ವಿಚಾರಿಸಿದಾಗಲೂ ಪ್ರಶಾಂತ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲವಾಗಿತ್ತು. ಸುಮಾರು 31 ತಿಂಗಳ ನಂತರ ಮಂಗಳವಾರ ಟಿವಿ ಚಾನೆಲ್ ವೀಕ್ಷಿಸುತ್ತಿದ್ದಾಗ ಮಗನನ್ನು ಪಾಕಿಸ್ತಾನದ ಪೊಲೀಸರು ಸೆರೆ ಹಿಡಿದಿರುವುದು ಗಮನಕ್ಕೆ ಬಂದಿತ್ತು. ಆತ ತೆಲುಗಿನಲ್ಲಿ ಮಾತನಾಡುತ್ತಿದ್ದ ವೀಡಿಯೋ ಕ್ಲಿಪ್ ಅನ್ನು ಟಿವಿಯಲ್ಲಿ ನೋಡಿದೇವು.ಹೀಗಾಗಿ ನಮ್ಮ ಮಗ ಬದುಕಿದ್ದಾನೆ ಎಂಬುದು ತಿಳಿದು ಸಂತೋಷವಾಯ್ತು. ನಮ್ಮ ಮಗನನ್ನು ವಾಪಸ್ ಕರೆದುಕೊಂಡು ಬರುವ ನಿಟ್ಟಿನಲ್ಲಿ ಪೊಲೀಸರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇದ್ದಿರುವುದಾಗಿ ಬಾಬು ರಾವ್ ತಿಳಿಸಿದ್ದಾರೆ.
ನಾವು ಪ್ರಶಾಂತ್ ನನ್ನು ಸಂಪರ್ಕಿಸಲು ತುಂಬಾ ಪ್ರಯತ್ನಿಸಿದ್ದೇವು. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಪತ್ತೆಹಚ್ಚಲು ಕಷ್ಟವಾಗಿತ್ತು ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಕೆಲವು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು, ಪ್ರಶಾಂತ್ ನನ್ನು ಭಾರತದ ಗೂಢಚಾರಿ ಎಂದು ವರದಿ ಮಾಡಿವೆ. ಆದರೆ ಇದು ಸತ್ಯಕ್ಕೆ ದೂರವಾದ ಆರೋಪ ಎಂದು ಪ್ರಶಾಂತ್ ಪೋಷಕರು ತಿಳಿಸಿದ್ದಾರೆ.
ಸ್ವಿರ್ಟ್ಜರ್ ಲ್ಯಾಂಡ್ ಯುವತಿಯ ಪ್ರೀತಿಗಾಗಿ ತೆರಳಿ ಸಿಕ್ಕಿಬಿದ್ದ ಪ್ರಶಾಂತ್?
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಶಾಂತ್ ಒಬ್ಬಳು ಯುವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಪ್ರಶಾಂತ್ ತನ್ನ ತಾಯಿ ಬಳಿ ಹೇಳಿಕೊಂಡಿದ್ದನಂತೆ. ಆದರೆ ತನಗೆ ಆತ ಆ ಯುವತಿಯನ್ನು ಇಷ್ಟಪಟ್ಟಿರುವ ಬಗ್ಗೆ ತಿಳಿದಿರಲಿಲ್ಲವಾಗಿತ್ತು ಎಂದು ಪ್ರಶಾಂತ್ ತಂದೆ ಬಾಬು ರಾವ್ ತಿಳಿಸಿದ್ದಾರೆ. ನಂತರ ತಿಳಿದ ಮಾಹಿತಿ ಪ್ರಕಾರ, ಪ್ರಶಾಂತ್ ನನ್ನು ಪ್ರೀತಿಸಿದ ಯುವತಿ ಸ್ವಿರ್ಟ್ಜ್ ರ್ ಲ್ಯಾಂಡ್ ನವಳಾಗಿದ್ದು, ಆಕೆ ಬೆಂಗಳೂರಿನಿಂದ ತನ್ನ ದೇಶಕ್ಕೆ ವಾಪಸ್ ಹೋಗಿದ್ದಳು. ಯುವತಿ ತನ್ನ ಬಿಟ್ಟು ಹೋಗಿರುವ ಬಗ್ಗೆ ಪ್ರಶಾಂತ್ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದ. ನಂತರ ಆತ ಸಹಜ ಸ್ಥಿತಿಗೆ ಬಂದು ಕೆಲಸ ಮಾಡಲು ಆರಂಭಿಸಿದ್ದ. ನನ್ನ ಶಂಕೆಯ ಪ್ರಕಾರ ಆತ ರಾಜಸ್ಥಾನ್ ಗಡಿ ಮೂಲಕ ಸ್ವಿಟ್ಜರ್ ಲ್ಯಾಂಡ್ ಗೆ ಹೋಗುವ ಪ್ರಯತ್ನ ನಡೆಸಿರಬಹುದು ಎಂಬುದು ತಂದೆ ಬಾಬು ರಾವ್ ಹೇಳಿಕೆಯಾಗಿದೆ.
ತನ್ನ ಪ್ರೀತಿಯ ಹುಡುಗಿಯನ್ನು ಭೇಟಿಯಾಗಲು ಪ್ರಶಾಂತ್ ಭಾರತದ ಮೂಲಕ ಪಾಕಿಸ್ತಾನ ತಲುಪಿ ಅಲ್ಲಿಂದ ಇರಾನ್, ಟರ್ಕಿ ಮೂಲಕ ಯುರೋಪ್ ದೇಶಕ್ಕೆ ತೆರಳಿ ಸ್ವಿಟ್ಜರ್ ಲ್ಯಾಂಡ್ ಗೆ ಹೋಗುವ ಸಿದ್ದತೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ವರದಿ ತಿಳಿಸಿದೆ.