Advertisement

JEE ಪರೀಕ್ಷೆಯಲ್ಲಿ ಕಡಿಮೆ ಅಂಕ: 11 ದಿನ ಬಳಿಕ ವಿದ್ಯಾರ್ಥಿ ಪತ್ತೆ

12:20 AM Feb 25, 2024 | Team Udayavani |

ಜೈಪುರ: ಕಳೆದ ಫೆ. 13ರಂದು ರಾಜಸ್ಥಾನದ ಕೋಟಾದಲ್ಲಿನ ಹಾಸ್ಟೆಲ್‌ವೊಂದರಿಂದ ನಾಪತ್ತೆಯಾಗಿದ್ದ ಜೆಇಇ ಆಕಾಂಕ್ಷಿ 17 ವರ್ಷದ ಪಿಯೂಷ್‌ 11 ದಿನಗಳ ಬಳಿಕ ಹಿಮಾಚಲ ಪ್ರದೇಶದ ಧರ್ಮ ಶಾಲಾದಲ್ಲಿ ಪತ್ತೆಯಾಗಿ ರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. 2 ವರ್ಷಗಳಿಂದ ಕೋಟಾದ ತರಬೇತಿ ಸಂಸ್ಥೆಯೊಂದರಲ್ಲಿ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಉ.ಪ್ರ.ದ ಬುಲಂದ್‌ಶಹರ್‌ನ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಫೆ. 13ರಂದು ಕೊನೆಯ ಬಾರಿಗೆ ಆತ ತನ್ನ ಪೋಷಕರೊಂದಿಗೆ ಮಾತನಾಡಿದ್ದ. ಅನಂತರ ಪೋಷಕರ ಕರೆ ಸ್ವೀಕರಿಸದೆ, ಫೋನ್‌ ಸ್ವಿಚ್‌ ಆಫ್ ಮಾಡಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next