ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಾಲ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್‌ಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಸಿರ್ಸಾ ದಲ್ಲಿರುವ ಆತನ ಆಶ್ರಮದಲ್ಲಿ ಓದು ತ್ತಿದ್ದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಆಕೆಯ ಕುಟುಂಬದವರು ಈಗ ಬಹಿರಂಗ ವಾಗಿಯೇ ಮಾತನಾಡಿದ್ದಾರೆ. 2008ರ ಬಳಿಕ ಬಾಲಕಿ ಕುಟುಂಬದ ಜತೆ ಸಂಪರ್ಕದಲ್ಲಿ ಇಲ್ಲ ಎಂದು ಸೋದರ ಸಂಬಂಧಿ ಹೇಳಿಕೊಂಡಿದ್ದಾರೆ.
ಸಂಘಟನೆಯ ನಿಯತಕಾಲಿಕ ಪ್ರಕಾರ ಆಕೆ ಯೋಗ ಅಧ್ಯಾಪಕಿಯಾಗಿದ್ದಾಳೆ ಎಂಬ ಮಾಹಿತಿ ಸಿಕ್ಕಿತ್ತು
ಎಂದು ಅವರು ತಿಳಿಸಿದ್ದಾರೆ. ಸಂಘಟನೆಯನ್ನು ಸಂಪರ್ಕಿಸಿದಾಗ ಗುರ್ಮೀತ್‌ಗೆ ಶಿಕ್ಷೆ ಘೋಷಣೆಯಾದ ದಿನವೇ ಆಕೆ ಆಶ್ರಮ ತೊರೆದಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ಹಲವರು ಉತ್ಸುಕರು: ಡೇರಾ ಮುಖ್ಯಸ್ಥಗೆ ಜೈಲಾಗಿರುವ ಹಿನ್ನೆಲೆಯಲ್ಲಿ ಬಹುಕೋಟಿ ರೂ. ಮೌಲ್ಯದ ಆಸ್ತಿ ಮತ್ತು ಸಂಘಟನೆಯ ಒಡೆಯರಾಗಲು ಹಲವರು ಮುಂದಾಗಿದ್ದಾರೆ. ಗುರ್ಮೀತ್ ಪುತ್ರ ಜಸ್ಮಿàತ್ ಸಿಂಗ್ ಇನ್ಸಾನ್‌ನನ್ನು ಮುಖ್ಯಸ್ಥನೆಂದು ಘೋಷಣೆ ಮಾಡಲಾಗಿದ್ದರೂ ಅವರಿಗೆ ಇಬ್ಬರು ಪ್ರತಿಸ್ಪರ್ಧಿಗಳಿದ್ದಾರೆ. ಈ ಪೈಕಿ ಹನಿಪ್ರೀತ್ ಇನ್ಸಾನ್ ಮತ್ತು ಬ್ರಹ್ಮಚಾರಿ ವಿಪಾಸನಾ. ಆದರೆ ನಾಯಕತ್ವದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಇರುವ ವದಂತಿಗಳನ್ನು ಯಾರೂ ನಂಬಬಾರದು ಎಂದು ಡೇರಾ ಸಂಘಟನೆ ಹೇಳಿದೆ.