ಮುಂಬಯಿ : 2018 ರ ಡಿಸೆಂಬರ್ 15 ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು ಮಹಾರಾಷ್ಟ್ರದ ಮಾಲ್ವಣ್ ಕಡಲ ತೀರದಿಂದ 33 ಕಿ.ಮೀ ದೂರದಲ್ಲಿ ಪತ್ತೆಯಾಗಿವೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
Advertisementನೌಕಾಪಡೆಯ ಹೆಲಿಕ್ಯಾಪ್ಟರ್‌ಗಳು ಮತ್ತು ಹಡಗುಗಳು ನಿರಂತರವಾಗಿ ಶೋಧ ನಡೆಸಿ ಆಳ ಸಮುದ್ರದಲ್ಲಿ ಅವಶೇಷಗಳನ್ನು ಪತ್ತೆ ಹಚ್ಚಿದೆ ಎಂದು ನೌಕಾಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಐಎನ್‌ಎಸ್ ನಿರೀಕ್ಷಕ್ ಮೇ 1 ರಂದು ಕಾರ್ಯಾಚರಣೆಗಿಳಿದ ವೇಳೆ ಅವಶೇಷಗಳನ್ನುಪತ್ತೆ ಹಚ್ಚಿದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.
60 ಮೀಟರ್ ಆಳದಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
Related Articles
ಬೋಟ್‌ನಲ್ಲಿದ್ದ 7 ಮಂದಿ ಮೀನುಗಾರರು ನೀರು ಪಾಲಾಗಿರುವ ಸಾಧ್ಯತೆಗಳಿದ್ದು, ಇದುವರೆಗೂ ಯಾರೊಬ್ಬರ ಸುಳಿವು ಲಭ್ಯವಾಗಿಲ್ಲ.
Advertisementಬೋಟ್ ನಾಪತ್ತೆಯಾದ ಬಳಿಕ ವ್ಯಾಪಕ ಹುಡುಕಾಟ ನಡೆಸಲಾಗಿದ್ದು, ನಾಪತ್ತೆಯಾದವರನ್ನು ಹುಡುಕಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮೀನುಗಾರರು ಮನವಿ ಮಾಡಿದ್ದರು.
Advertisement
ಮಲ್ಪೆಯಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಪತ್ತೆ
09:49 AM May 04, 2019 | Vishnu Das |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !