Advertisement

Missing Case ಬ್ರಹ್ಮಾವರ: ಮಹಿಳೆ ನಾಪತ್ತೆ

11:38 PM Jan 15, 2024 | Team Udayavani |

ಬ್ರಹ್ಮಾವರ: ಹನೆಹಳ್ಳಿ ಮಾಸ್ತಿ ನಗರದ ಬಚ್ಚಿ ಪೂಜಾರ್ತಿ (69) ಕಾಣೆಯಾಗಿದ್ದಾರೆ.

Advertisement

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಮನೆಯಿಂದ ಹೇಳದೆ ಕೇಳದೆ ಹೋಗುವುದು ಮಾಡುತ್ತಿದ್ದು, ಕೆಲವೊಮ್ಮೆ 2-3 ದಿನ ಬಿಟ್ಟು ಮನೆಗೆ ಬರುತ್ತಿದ್ದರು. ಪುತ್ರನೊಂದಿಗೆ ವಾಸವಿದ್ದ ಅವರು 2019ರ ನವೆಂಬರ್‌ನಿಂದ ಕಾಣೆಯಾಗಿದ್ದು, ಮುಂಬಯಿಯಲ್ಲಿ ನೆಲೆಸಿರುವ ಪುತ್ರಿಗೆ ವಿಚಾರ ತಿಳಿದು ಆಗಮಿಸಿ ಸುತ್ತಲಿನ ಪರಿಸರ, ನೆಂಟರಿಷ್ಟರು, ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ಹುಡುಕಾಡಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next